ಆರೋಗ್ಯ

ತಣ್ಣನೆ ಆಹಾರವನ್ನು  ಬಿಸಿ ಮಾಡಿ ತಿನ್ನೋದು ಸಾಮಾನ್ಯ ಆದರೆ ಈ ಪದಾರ್ಥಗಳನ್ನು ಪದೇ ಪದೇ ಬಿಸಿ ಮಾಡ್ಲೇಬೇಡಿ

ಬೆಳಗ್ಗೆ ಮಾಡಿದ ಆಹಾರ ಸ್ವಲ್ಪ ಉಳಿದರೆ ಅದನ್ನೆ ಬಿಸಿ ಮಾಡಿ ಅದನ್ನೆ ಮಧ್ಯಾಹ್ನಕ್ಕೆ ಸೇವನೆ ಮಾಡುತ್ತೇವೆ. ಇಲ್ಲಾಂದ್ರೆ ಆಹಾರ ವೇಸ್ಟ್‌ ಆಗುತ್ತದೆ ಅಥವಾ ಅಷ್ಟೊಂದು ಉಳಿದಿದೆ, ಅಲ್ಲದೆ ಟೇಸ್ಟಿಯಾಗಿ ಕೂಡ ಇದೆ ಎಂದುಕೊಂಡು ನೀವು ಅದನ್ನು ಬಿಸಾಕದೆ ಮತ್ತೆ ಬಿಸಿ ಮಾಡಿ ತಿನ್ನುತ್ತೀರಿ. ಆದರೆ ಹಾಗೆ ತಿನ್ನೋದು ಸರಿ ಅಲ್ಲ. ಕೆಲವೊಂದು ಆಹಾರಗಳನ್ನು ಬಿಸಿ ಮಾಡುವುದರಿಂದ ಅದರಲ್ಲಿ ಟಾಕ್ಸಿನ್‌ ಮತ್ತು ಬ್ಯಾಕ್ಟೀರಿಯಾ ಹೆಚ್ಚಾಗುತ್ತದೆ. ಆದುದರಿಂದ ಇಂತಹ ಆಹಾರಗಳನ್ನು ಬಿಸಿ ಮಾಡಿ ಸೇವಿಸುವುದು ಸರಿಯಲ್ಲ.

ಕೆಲವು ಆಹಾರಗಳು, ವಿಶೇಷವಾಗಿ ಪ್ರೋಟೀನ್ ಭರಿತ ಆಹಾರಗಳು ಪ್ರತಿಬಾರಿ ಬಿಸಿ ಮಾಡಿದಾಗಲೂ ತಮ್ಮ ಪೌಷ್ಟಿಕಾಂಶವನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ. ಈ ಬಗ್ಗೆ ನಡೆಸಿದ ಅಧ್ಯಯನಗಳಲ್ಲಿ ಕೆಲವು ಆಹಾರಗಳು ಮರುಬಿಸಿ ಮಾಡಲೇಬಾರದು, ಮಾಡಿದರೆ ವಿಷವಾಗುತ್ತದೆ ಎಂದು ವಿವರಿಸಲಾಗಿದೆ. ಏಕೆಂದರೆ ಈ ಆಹಾರಗಳನ್ನು ಮರುಬಿಸಿ ಮಾಡಿದಾಗ ಆಗುವ ಬದಲಾವಣೆ ಬ್ಯಾಕ್ಟೀರಿಯಾಗಳಿಗೆ ಅನುಕೂಲಕರವಾಗುತ್ತದೆ ಹಾಗೂ ಪ್ರೋಟೀನುಗಳು ಸುಲಭವಾಗಿ ಒಡೆದು ಹಾಳಾಗುತ್ತವೆ.

 

 

ಅನ್ನ : ಇದರಲ್ಲಿ ಬೆಸಿಲಸ್ ಸೆರಿಯಸ್ ಬ್ಯಾಕ್ಟೀರಿಯಾಗಳ ಸಂಖ್ಯೆ ವಿಪರೀತವಾಗಿ ಬೆಳೆಯುತ್ತೆ. ಈ ಬ್ಯಾಕ್ಟೀರಿಯಾಗಳು ಅನ್ನವನ್ನು ಬಿಸಿ ಮಾಡಿದ ನಂತರ ಬೇಗನೆ ನಾಶವಾಗುವುದಿಲ್ಲ. ಇದರಿಂದಾಗಿ ಡೈರಿಯಾ ಸಮಸ್ಯೆ ಉಂಟಾಗುತ್ತದೆ.

ಎಣ್ಣೆಗಳು: ಅಕ್ರೋಟ್ ಎಣ್ಣೆ, ಬೆಣ್ಣೆಹಣ್ಣಿನ ಎಣ್ಣೆ, ಹ್ಯಾಜೆಲ್ ನಟ್ ಎಣ್ಣೆ, ದ್ರಾಕ್ಷಿಬೀಜದ ಎಣ್ಣೆ ಹಾಗೂ ಅಗಸೆ ಬೀಜದ ಎಣ್ಣೆಗಳು ಅತಿ ಕಡಿಮೆ ತಾಪಮಾನದಲ್ಲಿಯೇ ಹೊಗೆ ಕಾರತೊಡಗುತ್ತವೆ. ಇದೇ ಕಾರಣಕ್ಕೆ ಈ ಎಣ್ಣೆಗಳನ್ನು ಎಂದಿಗೂ ಮರುಬಿಸಿ ಮಾಡಬಾರದು. ಮರುಬಿಸಿ ಮಾಡಿದರೆ ಇವು ಸ್ಪೋಟಗೊಳ್ಳಬಹುದು.

ಆಲೂಗಡ್ಡೆ :ಇದನ್ನು ಮತ್ತೆ ಮತ್ತೆ ಬಿಸಿ ಮಾಡಿದರೆ ಅದರಲ್ಲಿರುವ ಬೋಟ್ಯೂಲಿಸಂ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗುತ್ತೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.

ಪಾಲಕ್‌ : ಈ ಸೊಪ್ಪಿನಲ್ಲಿ ನೈಟ್ರೈಟ್‌ ಅಂಶವು ಕಾರ್ಸಿನೋಜೆನಿಕ್‌ ಆಗಿ ಬದಲಾಗುತ್ತದೆ. ಇದರಿಂದ ಟಾಕ್ಸಿನ್ಸ್‌ ಉಂಟಾಗುತ್ತದೆ.

ಸೆಲೆರಿ: ಇದರಲ್ಲಿರುವ ಹೆಚ್ಚಿನ ಪ್ರಮಾಣದ ನೈಟ್ರೇಟುಗಳು ಮರುಬಿಸಿ ಮಾಡಿದಾಗ ನೈಟ್ರೈಟುಗಳೆಂಬ ವಿಷವಾಗಿ ಪರಿವರ್ತಿತವಾಗುತ್ತವೆ.

ಬೀಟ್‌ರೂಟ್‌ : ಬೀಟ್‌ರೂಟ್‌ನಲ್ಲಿ ನೈಟ್ರೈಟ್‌ ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನು ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸುವುದರಿಂದ ಟಾಕ್ಸಿನ್ಸ್‌ ಉಂಟಾಗುತ್ತದೆ. ಅಲ್ಲದೆ ಹಲವಾರು ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ.

ಚಿಕನ್‌ : ಚಿಕನ್‌ ಮತ್ತೆ ಮತ್ತೆ ಬಿಸಿ ಮಾಡಿ ತಿಂದರೆ ಟೇಸ್ಟ್ ಎಂದು ನಿಮಗೆ ಅನಿಸಬಹುದು ಆದರೆ ಇದರಲ್ಲಿರುವ ಪ್ರೊಟೀನ್‌ನ ಕಂಪೋಸಿಶನ್‌ ಬದಲಾಗುತ್ತದೆ. ಇದರಿಂದ ಇನ್‌ಡೈಜೆಶನ್‌ ಉಂಟಾಗುವ ಸಾಧ್ಯತೆ ಇದೆ.

ಮೊಟ್ಟೆ : ಇದನ್ನು ಮತ್ತೆ ಬಿಸಿ ಮಾಡುವುದರಿಂದ ಟಾಕ್ಸಿನ್‌ ಉಂಟಾಗುತ್ತದೆ. ಇದರಿಂದ ದುಷ್ಪರಿಣಾಮ ಜೀರ್ಣಕ್ರಿಯೆಯ ಮೇಲೆ ಉಂಟಾಗುತ್ತದೆ.

 

ಮಶ್ರೂಮ್ : ಇದನ್ನು ಮತ್ತೆ ಬೇಯಿಸುವುದರಿಂದ ಪ್ರೊಟೀನ್‌ನ ಪ್ರಮಾಣದಲ್ಲಿ ಬದಲಾವಣೆ ಉಂಟಾಗುತ್ತದೆ. ಇದರಿಂದ ಅಜೀರ್ಣ ಸಮಸ್ಯೆ ಮತ್ತು ಹೃದಯ ಸಂಬಂಧಿ ಸಮಸ್ಯೆ ಉಂಟಾಗುತ್ತದೆ.

ಒಂದಕ್ಕಿಂತ ಹೆಚ್ಚು ಬಾರಿ ಬಿಸಿಮಾಡಿದರೆ ಆಹಾರಗಳು ವಿಷಾಹಾರವಾಗುವ ಸಂಭವ ಹೆಚ್ಚುತ್ತಾ ಹೋಗುತ್ತದೆ. ಒಮ್ಮೆ ಬಿಸಿ ಮಾಡಿ ತಣ್ಣಗಾದ ಆಹಾರವನ್ನು ಬ್ಯಾಕ್ಟೀರಿಯಾಗಳು ಸುಲಭವಾಗಿ ಆಕ್ರಮಿಸಿಕೊಳ್ಳುತ್ತವೆ. ಹಾಗೂ ಇದನ್ನು ಸೇವಿಸಿದವರ ಆರೋಗ್ಯ ಕೆಡಿಸುತ್ತವೆ. ಆದ್ದರಿಂದ ಆದಷ್ಟೂ ತಾಜಾ ಆಹಾರಗಳನ್ನೇ ತಯಾರಿಸಿ ಸೇವಿಸಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top