ಸಮಾಚಾರ

ಡ್ಯಾನ್ಸ್ ಕಿಂಗ್ ವಿನೋದ್ ರಾಜ್ ಇನ್ನು ಯಾಕೆ ಮದುವೆಯಾಗಿಲ್ಲ ಗೊತ್ತಾ

ವಿನೋದ್ ರಾಜ್ ಕನ್ನಡ ಚಿತ್ರರಂಗದ ಖ್ಯಾತ ನಾಯಕ ನಟರಲ್ಲಿ ಒಬ್ಬರು. ಖ್ಯಾತ ನಟಿ ಡಾ.ಲೀಲಾವತಿ ಅವರ ಪುತ್ರ. ಡ್ಯಾನ್ಸ್ ರಾಜಾ ಡ್ಯಾನ್ಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಕೃಷ್ಣಾ ನೀ ಕುಣಿದಾಗ, ಕಾಲೇಜ್ ಹೀರೋ, ನಂಜುಂಡ, ಮಹಾಭಾರತ, ಶ್ರೀ ವೆಂಕಟೇಶ್ವರ ಮಹಿಮೆ, ನನಗೂ ಹೆಂಡ್ತಿ ಬೇಕು, ಯುದ್ಧಪರ್ವ, ನಾಯಕ, ಬನ್ನಿ ಒಂದ್ಸಲ ನೋಡಿ, ಗಿಳಿ ಬೇಟೆ, ಕ್ಯಾಪ್ಟನ್, ಬೊಂಬಾಟ್ ರಾಜ ಬಂಡಲ್ ರಾಣಿ, ರಂಭಾ ರಾಜ್ಯದಲ್ಲಿ ರೌಡಿ, ರಾಜಣ್ಣ, ದಳವಾಯಿ, ಸ್ನೇಹಲೋಕ, ಓಂ ಶಕ್ತಿ, ಬ್ರಹ್ಮ ವಿಷ್ಣು, ವಂದೇ ಮಾತರಂ, ರಾಷ್ಟ್ರಗೀತೆ, ಶ್ರೀ ಮಂಜುನಾಥ, ನಮ್ಮ ಸಂಸಾರ ಆನಂದ ಸಾಗರ, ಪಾಂಡವ, ಕನ್ನಡದ ಕಂದ, ಶುಕ್ರ, ಯಾರದು ಸಿನೆಮಾಗಳಲ್ಲಿ ಅಭಿನಯ ಮಾಡಿದ್ದಾರೆ.

ಅನೇಕ ಹಿಟ್ ಸಿನಿಮಾ ನೀಡಿರುವ ವಿನೋದ್ ರಾಜ ಅವರು ಇಂದಿಗೂ ಮದುವೆ ಆಗಿಲ್ಲ. ವಿನೋದ್ ರಾಜ್ ಏಕೆ ಮದುವೆ ಆಗಿಲ್ಲ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲೂ ಬಹಳ ದಿನಗಳನ್ನು ಕಾಡುತ್ತಿತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಇತ್ತೀಚಿಗೆ ವಿನಯ ತಮ್ಮ ಆಪ್ತರ ಬಳಿ ಕಾರಣ ಹೇಳಿದ್ದಾರೆ ಎನ್ನಲಾಗಿದೆ.

 

 

ವಿನೋದ್ ರಾಜ್ ರವರ ಪ್ರಕಾರ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳೋರು ತನಗಿಂತ ಈ ಪ್ರಪಂಚದಲ್ಲೇ ಮತ್ತೊಬ್ಬರಿಲ್ಲ , ಆದ್ದರಿಂದ ಬರುವ ಹುಡ್ಗಿ ಯಾವ ರೀತಿ ಇರ್ತಾಳೋ ಗೊತ್ತಿಲ್ಲ ಆದ್ದರಿಂದಲೇ ಬದುಕಿರುವ ತನಕವೂ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಂಡು ಅವರೊಂದಿಗೆ ತನ್ನ ಸಮಯವನ್ನು ಕಳೆಯುತ್ತೇನೆ ಎಂದು ಹೇಳಿದ್ದಾರಂತೆ ವಿನೋದ್. ನಿಜಕ್ಕೂ ಇಂತಹ ನಟರು ಸಿಗೋದು ಅಪರೂಪವೇ ಸರಿ. ಪತ್ನಿ ಬಂದ್ಮೇಲೆ ತಾಯಿಯನ್ನೇ ದೂರ ಮಾಡೋ ಅದೆಷ್ಟೋ ನಟರ ಕಥೆ ಕೇಳಿದ್ದೇವೆ, ನಿಜಕ್ಕೂ ಇಂದಿಗೂ ತಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ತಿರೋ ವಿನೋದ್ ರಾಜ್ ರವರ ಬಗ್ಗೆ ಹೆಮ್ಮೆ ಎನಿಸುತ್ತದೆ.

ವಿನೋದ್ ರಾಜ್ ಅವರು ಈಗ ಸಿನಿಮಾ ರಂಗದಿಂದ ದೂರವಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top