ಸಮಾಚಾರ

ಮೂವರು ಹೆಂಡಿರ ಮುದ್ದಿನ ಕೃಷ್ಣ ತನ್ನ ಶೋಕಿ ಜೀವನಕ್ಕೆ ಆರಿಸಿಕೊಂಡಿದ್ದು ಈ ಕೆಲಸ,ನೋಡಿ ಏನ್ ಆ ಕೆಲಸ ಅಂತ

ಮೂವರು ಹೆಂಡತಿಯರ ಮುದ್ದಿನ ಗಂಡನೊಬ್ಬ ಇದ್ದಾನೆ. ಬಲು ಶೋಕಿ ಜೀವನ ನಡೆಸುತ್ತಿರುವ ಈತ ತನ್ನ ಆಡಂಬರದ ಜೀವನ ನಡೆಸುವುದಕ್ಕಾಗಿ ದರೋಡೆ ಮಾಡುವ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಅತಿ ರಹಸ್ಯ ವಾಗಿ ದರೋಡೆ ಮಾಡುತ್ತಿದ್ದ ಈತ ಕೊನೆಗೂ ಕಲಬುರಗಿ ಪೋಲೀಸರ ಅಥಿತಿಯಾಗಿದ್ದಾನೆ. ಪೊಲೀಸರ ಕೈಗೆ ಸಿಕ್ಕು ಈಗ ಕಂಬಿ ಎಣಿಸುತ್ತಿದ್ದಾನೆ.

ಕೇವಲ ಈತ ಮಾತ್ರ ದರೋಡೆ ಮಾಡುತ್ತಿರಲಿಲ್ಲ ಈತನ ಸ್ನೇಹಿತರು ಕೂಡ ದರೋಡೆ ಮಾಡುತ್ತಿದ್ದರು ಎನ್ನಲಾಗಿದೆ. ಈತನ ಜೊತೆ ಇನ್ನೂ ಮೂವರು ಆರೋಪಿಗಳು ಬಂಧನಕ್ಕೆ ಒಳಗಾಗಿದ್ದಾರೆ, ಒಂದು ಪಿಸ್ತೂಲ್ ಸೇರಿ 18 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

 

 

ಮೂವರ ಹೆಂಡತಿಯರ ಮುದ್ದಿನ ಗಂಡ ಹಾಗು ದರೋಡೆ ಗ್ಯಾಂಗಿನ ಮುಖ್ಯಸ್ಥನ ಹೆಸರು ಶಿವಾಜಿ ಗಾಯಕವಾಡ ಯಾನೆ ಸಾಗರ್ ದಾದಾ ಎಂದು ತಿಳಿದು ಬಂದಿದೆ. ಈತನ ಸ್ನೇಹಿತರಾದ ಶೀತಲ್, ಶಂಕರ್ ಮತ್ತು ಕಮಲಾಪುರದ ನಾಗರಾಜ್ ರನು ಕೂಡ ದರೋಡೆ ಆರೋಪದ ಮೇಲೆ ಬಂಧನ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಾಲ್ಕು ಜನ ಆರೋಪಿಗಳಲ್ಲಿ ಮೂವರು ಮಹಾರಾಷ್ಟ ರಾಜ್ಯದವರು ಹಾಗು ಒಬ್ಬ ಕರ್ನಾಟಕದ ಎಂದು ತಿಳಿದು ಬಂದಿದೆ.

ಮೂಲಗಳ ಮಾಹಿತಿ ಪ್ರಕಾರ ಮಹಾರಾಷ್ಟ್ರ ರಾಜ್ಯದಿಂದ ಕಾರಿನಲ್ಲಿ ಬರುತ್ತಿದ್ದ ದರೋಡೆಕೋರರು, ಕಳ್ಳತನ ಮಾಡ್ಕೊಂಡು ಕದ್ದ ವಸ್ತುಗಳೊಂದಿಗೆ ಮತ್ತೆ ಮಹಾರಾಷ್ಟ್ರ ರಾಜ್ಯಕ್ಕೆ ವಾಪಾಸ್ ಹೋಗ್ತಿದ್ರು. ಕಮಲಾಪುರದ ನಾಗರಾಜ್ ಕಳ್ಳತನ ಎಲ್ಲಿ ಮಾಡಬೇಕೆಂದು ಮನೆಗಳನ್ನು ಪತ್ತೆ ಹಚ್ಚಿ ಕೊಡುತ್ತಿದ್ದ ಎಂದು ತಿಳಿದು ಬಂದಿದೆ. ಕಳ್ಳತನ ನಡೆದ ದಿನಗಳಂದು ಟೋಲ್ ವಾಹನ ಸಂಚಾರದ ಮಾಹಿತಿ ಪಡೆದುಕೊಂಡಾಗ ಪೊಲೀಸರಿಗೆ ದರೋಡೆಕೋರರ ಸುಳಿವು ಸಿಕ್ಕಿದೆ. ಕಳ್ಳತನ ನಡೆದ ದಿನದಂದು ದರೋಡೆಕೋರರ ಕಾರು ಬಂದು ವಾಪಸ್ಸಾಗಿರುವುದನ್ನು ಗಮನಿಸಿದ ಪೊಲೀಸರು ಆರೋಪಿಗಳನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಒಂದು ಪಿಸ್ತೂಲ್, 9 ಜೀವಂತ ಗುಂಡು, 550 ಗ್ರಾಮ್ ಚಿನ್ನಾಭರಣ, ಒಂದು ಕೆ.ಜಿ. ಬೆಳ್ಳಿ ಆಭರಣ, ಕೃತ್ಯಕ್ಕೆ ಬಳಸಿದ ಕಾರು, ಮತ್ತಿತರ ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top