fbpx
ಸಮಾಚಾರ

ಕೊಡಗು ಉಳಿಸಿ- ಏನೇನು ಕೊಡಬಹುದು? ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಕೊಡಗು ಸೇರಿದಂತೆ ರಾಜ್ಯದ ವಿವಿದೆಡೆ ಧಾರಾಕಾರ ಮಳೆ ಮುಂದುವರಿದಿದ್ದು ಮಹಾಮಳೆಗೆ ಇಡೀ ಜನರ ಜೀವನ ಅಕ್ಷರಶಃ ಕೊಚ್ಚಿಹೋಗಿದೆ. ಭಾರಿ ಬಿರುಗಾಳಿ, ಮಹಾಮಳೆ ಮತ್ತು ಭೂಕುಸಿತದಲ್ಲಿ ಹತ್ತಕ್ಕೂ ಹೆಚ್ಚುಮಂದಿ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದ್ದು 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈವರೆಗೂ 500ಕ್ಕೂ ಹೆಚ್ಚು ಮನೆಗಳು ಕುಸಿದಿವೆ ಎಂದು ವರದಿಯಾಗಿದೆ. ಎಲ್ಲೆಂದರಲ್ಲಿ ಬೆಟ್ಟಗಳು ಕುಸಿದು ಬೀಳುತ್ತಿರುವ ಪರಿಣಾಮ ಸಾವಿರಾರು ಜನರು ತಮ್ಮ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ.

 

 

ಕೊಡಗು ಜಿಲ್ಲೆಯಲ್ಲಿ ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಾಜ್ಯ ಹೆದ್ದಾರಿ ಪೂರ್ತಿ ಕೊಚ್ಚಿ ಹೋಗಿದೆ. ಘಟ್ಟ ಪ್ರದೇಶಗಳಲ್ಲಿ ಮಳೆಯ ಅಬ್ಬರ ಸ್ವಲ್ಪವೂ ಕಡಿಮೆ ಆಗಿಲ್ಲವಾದ್ದರಿಂದ ಈ ಎರಡೂ ಘಾಟಿ ಹೆದ್ದಾರಿಗಳಲ್ಲಿ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.. ರಸ್ತೆಗಳು ನೀರು ತುಂಬಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಳೆದುಕೊಂಡಿವೆ. ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಗ್ರಾಮಗಳು ಕಗ್ಗತಲಲ್ಲಿ ಮುಳುಗಿವೆ. ಜಿಲ್ಲೆಯಾದ್ಯಂತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸಂತ್ರಸ್ತ ಜನರು ರಕ್ಷಣೆಗಾಗಿ ಎದುರು ನೋಡುತ್ತಿದ್ದಾರೆ.

ಪ್ರವಾಹ ಪೀಡಿತ ಜನರಿಗೆ ನೀಡಬಹುದಾದ ವಸ್ತುಗಳು.
* ಕುಡಿಯುವ ನೀರಿನ ಬಾಟಲಿ
* ಜಮ್ಕಾನಾ, ಕಂಬಳಿ, ಉಣ್ಣೆ ಹೊದಿಕೆ, ಬೆಡ್‌ಶಿಟ್
* ಟಾರ್ಚ್
* ಸ್ಯಾನಿಟರಿ ನ್ಯಾಪ್‌ಕಿನ್ಸ್‌
* ಉಡುಪುಗಳು
* ಆಹಾರ ಪದಾರ್ಥಗಳು( ಹಾಲಿನ ಪುಡಿ, ಗುಡ್ ಲೈಫ್ ಮಿಲ್ಕ್ ಪ್ಯಾಕ್, ಬ್ರೆಡ್,)
* ಮ್ಯಾಗಿಯಂತಹ ರೆಡಿ ಫುಡ್’ಗಳು.
* ಪ್ರಥಮ ಚಿಕಿತ್ಸೆ ಸಾಮಾಗ್ರಿಗಳು, ಪ್ಯಾರಾಸಿಟಮಲ್‌ ಮಾತ್ರೆಗಳು, ನೋವು ನಿವಾರಕ ಔಷಧ,

 ವಸ್ತು ಸಂಗ್ರಹ ಕೇಂದ್ರಗಳು
ಶ್ರೀರಾಂಪುರ
ಸಂಪರ್ಕ: ಎಮ್.ಜೆ ಪವನ್ – 9483949894
#16/1, ಸಂಕರ್ಷಣ , 2ನೇ ಕ್ರಾಸ್, ಶ್ರೀರಾಂಪುರಮ್, ಬೆಂಗಳೂರು–560021

ಬನಶಂಕರಿ
ಸಂಪರ್ಕ: ಅರ್ಜುನ್ ಬಿ.ಎಸ್– 9886393038
No 57, 2ನೇ ಕ್ರಾಸ್, 5ನೇಮುಖ್ಯ ಆಂಜನೇಯ ನಗರ, ಬಿಎಸ್‌ಕೆ 3ನೇ ಹಂತ, ಬೆಂಗಳೂರು– 560085
ಎಲ್‌ಎಮ್: ಜನತಾ ಬಜಾರ್ ಹತ್ತಿರ ಸಿಗ್ನಲ್ ಒಆರ್‌ಆರ್‌

ರಾಜಾಜಿ ನಗರ
ಸಂಪರ್ಕ: ವಿಹಾನ್ (ಆಶ್ರಯ ಸೇವಾ ಟ್ರಸ್ಟ್) – 90360 29333
135, ಡಾ ರಾಜ್‌ಕುಮಾರ್ ರಸ್ತೆ, 1ನೇ ಬ್ಲಾಕ್, 2ನೇ ಹಂತ, ರಾಜಾಜಿ ನಗರ, ಬೆಂಗಳೂರು, ಕರ್ನಾಟಕ- 560010

ಯಲಹಂಕ
ಸಂಪರ್ಕ: ಗೌತಮ್ ಸುಬ್ಬಯ್ಯ– 8951302570
#18, ಶ್ರೀ ಮಂಜುನಾಥ್ ನಿಲಯ, 2ನೇ ಮುಖ್ಯ ರಸ್ತೆ, 3ನೇ ಕ್ರಾಸ್
ಅನ್ನಪೂರ್ಣ ಶಾಲೆಯ ಎದುರು, ವೆಂಕಟಲ, ಯಲಹಂಕ, ಬೆಂಗಳೂರು – 560064

ಪರಿಹಾರ ನಿಧಿಗೆ ಹಣ ನೀಡುವುದು ಹೇಗೆ:
ಮುಖ್ಯಮಂತ್ರಿ ಪರಿಹಾರ ನಿಧಿ: ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ ಗೆ ದೇಣಿಗೆ ನೀಡಲು ಬಯಸುವವರು ನೇರವಾಗಿ ಸಿಎಂ ಕಚೇರಿಗೆ ಭೇಟಿ ನೀಡಬಹುದು..

ಕೊಡಗು ಪರಿಹಾರ ನಿಧಿಗೆ ಧನ‌ಸಹಾಯ ಮಾಡಲು ಇಚ್ಛಿಸುವವರು ಕೆಳಗಿನ ಖಾತೆಗೆ ಜಮಾ ಮಾಡಬಹುದಾಗಿದೆ:

state Bank of India, sultan palya branch
current account No.35940362881
IFSCode: SBIN0003982
account holder name: kodavamme trust(R)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top