fbpx
ಹೆಚ್ಚಿನ

ಜಟಾಯು ಹಾಗೂ ರಾವಣನ ನಡುವಿನ ಯುದ್ಧದಲ್ಲಿ ಹೀನಮಾನವಾಗಿ ಮರಣ ಹೊಂದಿದ ಜಟಾಯುನ ಕಥೆ ಗೊತ್ತಾ ,ಗೊತ್ತಿಲ್ಲ ಅಂದ್ರೆ ,ತಿಳ್ಕೊಳ್ಳಿ.

ರಾವಣನ ಕುಟೀರದಿಂದ ಸೀತೆಯನ್ನು ಅಪಹರಿಸಿ ಒಯ್ಯುತ್ತಿರುವಾಗ ಜಟಾಯು ಇದನ್ನು ಕಂಡನು. ರಾಮ ಲಕ್ಷ್ಮಣರೊಂದಿಗೆ ಸ್ನೇಹದಿಂದ ಇದ್ದ ಜಟಾಯು ಶಕ್ತಿ ಸಂಪನ್ನನಾಗಿದ್ದರೂ ಮುದುಕನಾಗಿ ಇದ್ದುದ್ದರಿಂದ ಹೇಗೆ ಎದುರಿಸಬೇಕೆಂದು ತಿಳಿಯದೇ ಹೋದನು.ಸೀತೆಯ ಅಳುವಿಕೆಯನ್ನು ನೋಡಿ ವಿಷಯ ತಿಳಿದು ರಾವಣನಿಗೆ ಎದುರಾಗಿ ಬಂದನು. ಪರಸ್ತ್ರೀಯನ್ನು ಅಪಹರಿಸುವುದು ಬೇಡವೆಂದು ಎಚ್ಚರಿಸಿದನು. ರಾವಣನ ರಥವನ್ನು ತಡೆದನು. ರಾವಣನಿಗೆ ರೆಕ್ಕೆಗಳಿಂದ ಬಲವಾಗಿ ಘಾಸಿ ಮಾಡಿದನು.

 

 

 

ಜಟಾಯು ಹೀಗೆ ನಾನಾ ರೀತಿಯಲ್ಲಿ ತೊಂದರೆ ಕೊಡಲು ಆರಂಭಿಸಿದಾಗ ಅನೇಕ ಶಸ್ತ್ರಾಸ್ತ್ರಗಳ ಬಲವನ್ನು ಹೊಂದಿದ ರಾವಣನಿಗೆ ಸಿಟ್ಟು ಬಂದಿತು. ಮಾಯಾ ಶಕ್ತಿ ಸಂಪನ್ನನಾದ ರಾವಣನಿಗೆ ಏನೂ ತೊಂದರೆ ಆಗಲಿಲ್ಲ. ಆದರೂ ಜಟಾಯುವಿನ ಕಾಟವನ್ನು ತಡೆಯಲು ಖಡ್ಗವನ್ನು ಕೈಯಲ್ಲಿಡಿದು ರೆಕ್ಕೆಗಳನ್ನು ಕತ್ತರಿಸಿದನು. ಅನೇಕ ಬಾಣಗಳನ್ನು ಬಿಟ್ಟನು.ಇದರಿಂದಾಗಿ ಜಟಾಯು ರಕ್ತ ಸುರಿಸುತ್ತ ಭೂಮಿಗೆ ಬಂದು ಬಿದ್ದನು. ಇವರ ಹೋರಾಟವು ನಡೆದಾಗ ಅಡವಿಯಲ್ಲಿ ಕೋಲಾಹಲ ಉಂಟಾಯಿತು.
ಕೊನೆಯ ಮಾತೆಂಬಂತೆ ಜಟಾಯು “ನಿನಗೆ ತಾತ್ಕಾಲಿಕವಾಗಿ ಜಯ ಸಿಕ್ಕಿದೆ, ಆದರೆ ಅಧರ್ಮಿಯಾದ ನಿನಗೆ ಜಯವು ಕೊನೆಗೆ ಸಿಗುವುದಿಲ್ಲ . ರಾಮನು ನಿನ್ನನ್ನು ಕೊಲ್ಲುವುದು ಖಂಡಿತ ಎಂದು ಹೇಳಿದರೂ ರಾವಣನು ಜಟಾಯುವಿನ ಕಡೆಗೆ ಲಕ್ಷ್ಯ ಹಾಕಲಿಲ್ಲ. ರಾವಣನ ರಥವು ಆಕಾಶ ಮಾರ್ಗದಲ್ಲಿ ಹೋಗುತ್ತಿದ್ದಾಗ ಒಂದು ಪರ್ವತವನ್ನು ಕಂಡ ಸೀತೆ ತನ್ನ ಆಭರಣಗಳನ್ನು ಉತ್ತರೀಯದಲ್ಲಿ ಕಟ್ಟಿ ಬಿಸಾಕಿದಳು. ಆ ಪರ್ವತವು ಋಷಿಮೂಕ ಪರ್ವತವಾಗಿತ್ತು.

ಅಲ್ಲಿರುವ ವಾನರರು ಆಶ್ಚರ್ಯದಿಂದ ಮೇಲೆ ನೋಡಿದರು ಹಾ ರಾಮ,ಹಾ ಲಕ್ಷ್ಮಣ ಎಂಬ ದ್ವನಿ ಅವರಿಗೆ ಕೇಳಿ ಬಂದಿತು. ವಾನರರು ಆಭರಣವನ್ನು ತಮ್ಮ ಬಳಿಯಲ್ಲಿ ಇರಿಸಿಕೊಂಡರು. ಯಾವುದೋ ರಾಕ್ಷಸನು ಹೆಂಗಸನ್ನು ಬಯ್ಯುತ್ತಿದ್ದಾನೆ. ಯಾರಾದರೂ ಹುಡುಕಿಕೊಂಡು ಬಂದರೇ ಕೊಡೋಣ ಎಂದು ನಿಶ್ಚಯಿಸಿದರು. ರಾವಣನು ಸೀತೆಯನ್ನು ಲಂಕೆಗೆ ಕರೆತಂದು ಅಲ್ಲಿನ ಅರಮನೆಗಳ ಬಗ್ಗೆ ವೈಭವದ ಬಗ್ಗೆ ತಿಳಿಸಿ ತನ್ನನ್ನು ವರಿಸಲು ಕೇಳಿದನು .

ಸೀತೆಯು ರಾವಣನನ್ನು ಹುಲ್ಲುಕಡ್ಡಿ ಅಂತ ತಿಳಿದು ಅವನಿಗೆ ಉತ್ತರ ಹೇಳಿದಳು. ರಾಕ್ಷಸನೇ ನೀನು ಶ್ರೀಮಂತನಾದರೂ, ಪರಾಕ್ರಮಿಯಾದರೂ ನಾನು ನಿನ್ನನ್ನು ಇಷ್ಟ ಪಡುವುದಿಲ್ಲ . ರಾಮನು ಒಂದು ಹುಲ್ಲು ಕಡ್ಡಿಯನ್ನು ಪ್ರಯೋಗಿಸಿದರೂ ನಿನ್ನ ಲಂಕಾ ಪಟ್ಟಣ ನಾಶವಾಗುವುದು. ಅವನೇ ನನ್ನ ಪತಿ ದೇವರು . ನಾನು ಬೇರೆಯವರನ್ನು ಕಣ್ಣೆತ್ತಿ ಸಹ ನೋಡುವುದಿಲ್ಲ ಎಂದಳು.
ರಾಮನು ಇಲ್ಲಿಗೆ ಬಂದು ಯುದ್ಧ ಮಾಡಿದರೆ , ನಿನ್ನ ರಾಜ್ಯದಲ್ಲಿ ಯಾರೂ ಉಳಿಯುವುದಿಲ್ಲ. ರಕ್ತದ ಹೊಳೆ ಹರಿಯುವುದು. ರಾಕ್ಷಸರ ರುಂಡಗಳ ಚೆಂಡಾಟ ನೆಡೆಯುವುದು. ಬರೀ ವಿಧವೆಯರು ಮಾತ್ರ ಉಳಿಯುವರು. ನೀನು ರಾಮನ ಬಳಿ ಕ್ಷಮೆ ಕೋರಿಕೋ, ಅವನು ನಿನ್ನನ್ನು ಉಳಿಸುತ್ತಾನೆ ಎಂದು ಸೀತೆ ಹೇಳಿದಾಗ ರಾವಣನು ಹಲ್ಲು ಕಡಿಯುತ್ತಾ “ಇವಳನ್ನು ಅಶೋಕವನದಲ್ಲಿ ಬಂದಿಸಿಡಿ” ಎಂದು ಆಜ್ಞೆ ಮಾಡಿದನು.

ಒಂದು ವರ್ಷದಲ್ಲಿ ಸೀತೆ ನನಗೆ ಇವಳ ನನಗೊಲಿಯದಿದ್ದರೆ, ಕೊಲ್ಲಿಸುತ್ತೇನೆ ಎಂದು ಹೆದರಿಸಿದನು,ಅಶೋಕವನವು ಒಂದು ಸುಂದರವಾದ ಹೂತೋಟವಾಗಿತ್ತು. ಅಲ್ಲಿರುವ ರಾಕ್ಷಸಿಯರು ಸೀತೆಗೆ ರಾವಣನನ್ನು ವರಿಸಿ ಸುಖವಾಗಿರು ಎಂದು ಸಲಹೆ ನೀಡುತ್ತಿದ್ದರು . ಆದರೆ ಸೀತೆ ಅವರ ಮಾತನ್ನು ಲೆಕ್ಕಿಸದೆ ತನ್ನ ಪತಿ ರಾಮನು ಬಂದೇ ಬರುತ್ತಾನೆ. ತನ್ನನ್ನು ಮುಕ್ತಗೊಳಿಸುತ್ತಾನೆಂದು ನಂಬಿ ರಾಮನಾಮವನ್ನು ಜಪಿಸುತ್ತ ಕಾಲ ಕಳೆಯತೊಡಗಿದಳು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top