ಸಮಾಚಾರ

ಒಂದೇ ತಿಂಗಳಲ್ಲಿ ಕೆಜಿಎಫ್ ಹಾಗು ದಿ ವಿಲನ್ ಠಕ್ಕರ್, ಆದ್ರೆ ಮೊದಲು ಯಾರು?

ರಾಕಿಂಗ್ ಸ್ಟಾರ್ ಯಶ್ ಅವರನ್ನು ಬಿಗ್ ಸ್ಕ್ರೀನ್ ಮೇಲೆ ನೋಡಿ ತುಂಬಾ ದಿನ ಆಯ್ತು ಎಂದು ಅಭಿಮಾನಿಗಳು ಬಹಳ ದಿನಗಳಿಂದ ಬೇಜಾರಲ್ಲಿದ್ದರು ಕೊನೆಗೂ ಅಭಿಮಾನಿಗಳಿಗೆ ಸಂತಸದ ಸುದ್ದಿ ಸಿಕ್ಕಿದ್ದು ಸೆಪ್ಟೆಂಬರ್ ನಲ್ಲಿ ಕೆಜಿಎಫ್ ತೆರೆಗೆ ಅಪ್ಪಳಿಸಲಿದೆ. ಇನ್ನು ಶಿವಣ್ಣ ಹಾಗು ಕಿಚ್ಚ ಜೊತೆಯಾಗಿ ಅಭಿನಯ ಮಾಡುತ್ತಿರುವ ದಿ ವಿಲನ್ ಸಿನಿಮಾ ಕೂಡ ಅದೇ ತಿಂಗಳು ತೆರೆಗೆ ಬರಲಿದೆ ಎಂದು ತಿಳಿದು ಬಂದಿದೆ. ಯಾವ ಸಿನಿಮಾ ಮೊದಲು ಬರಲಿದೆ ಎಂದು ಯೋಚನೆ ಮಾಡುತ್ತಿದ್ದೀರಾ ಹಾಗಾದರೆ ಮುಂದೆ ಓದಿ.

‘ದಿ ವಿಲನ್’ ಸಿನಿಮಾ ಈಗಾಗಲೇ ಸೆನ್ಸಾರ್‌ಗೆ ಹೋಗಿದೆ. ಸೆನ್ಸಾರ್ ಕೆಲಸ ಮುಗಿಯುತ್ತಿದ್ದಂತೆಯೇ ಸೆಪ್ಟೆಂಬರ್ ಮೊದಲ ವಾರವೇ ತೆರೆಗೆ ಬಿಡುಗಡೆ ಆದರೆ ಅಚ್ಚರಿ ಪಡುವಹಾಗಿಲ್ಲ. ಅದರ ಭಾಗವಾಗಿಯೇ ಭಾನುವಾರ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಏರ್ಪಾಡು ಮಾಡಿದ್ದಾರೆ ಎನ್ನಲಾಗಿದೆ.

 

 

ಕೆಲವು ದಿನಗಳ ಹಿಂದೆ ಚಿತ್ರದ ಕೊನೆಯ ಹಾಡಿನ ಶೂಟಿಂಗ್ ಮುಗಿಸಿಕೊಂಡಿರುವ ಕೆಜಿಎಫ್ ತಂಡ ಸೆನ್ಸಾರ್ ಗೆ ಕಾಪಿ ಕಳುಹಿಸಬೇಕಾಗಿದೆ. ಸೆನ್ಸಾರ್ ಮಂಡಳಿ ಅಸ್ತು ಅನ್ನುತ್ತಲೇ ತೆರೆಗೆ ಭರ್ಜರಿಯಾಗಿ ಅಪ್ಪಳಿಸಲಿದೆ ಎನ್ನಲಾಗಿದೆ. ಇತ್ತೀಚಿಗೆ ನಡೆದ ಕೊನೆಯ ಹಾಡಿನ ಚಿತ್ರೀಕರಣದಲ್ಲಿ ತೆಲಗು ನಟಿ ತಮನ್ನಾ ಡಾನ್ಸ್ ಮಾಡಿದ್ದಾರೆ. ಇದು ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸುವಂತೆ ಮಾಡಿದೆ.

ಇವೆರೆಡು ಚಿತ್ರಗಳ ಜೊತೆಗೆ ‘ಯಜಮಾನ’, ‘ಮುನಿರತ್ನ ಕುರುಕ್ಷೇತ್ರ’, ‘ಅಂಬಿ ನಿಂಗ್ ವಯಸ್ಸಾಯ್ತೋ’, ‘ಶ್ರೀಮನ್ನಾರಾ ಯಾಣ ’, “ನಟಸಾರ್ವಭೌಮ” ಕೂಡ ಕೊನೆಯ ಹಂತಕ್ಕೆ ತಲುಪಿದ್ದು ಈ ಸಿನೆಮಾಗಳು ಸೆಪ್ಟೆಂಬರ್ ಅಥವಾ ನಂತರದ ತಿಂಗಳುಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಆಗಸ್ಟ್ ಬಳಿಕ ಕನ್ನಡ ಸಿನಿರಸಿಕರಿಗೆ ಮನರಂಜನೆಯ ರಸದೌತಣವನ್ನು ಈ ಸಿನೆಮಾಗಳು ಉಣಬಡಿಸಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top