ಸಮಾಚಾರ

ಗಾಸಿಪ್ ಗಳಿಗೆ ನಕ್ಕು ಸುಮ್ಮನಾಯ್ತಂತೆ ಈ ಕಿರಿಕ್ ಜೋಡಿ

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ ನಾಯಕಿಯಾಗಿ ಕಾಲಿಟ್ಟ ಚೆಲುವೆ ರಶ್ಮಿಕಾ ಮಂದಣ್ಣ ಮೊದಲ ಚಿತ್ರದಲ್ಲಿಯೇ ಭರ್ಜರಿ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಹುಡುಗಿ. ಒಂದೇ ಒಂದು ಚಿತ್ರದ ಮೂಲಕ ನಂಬರ್ ಒನ್ ನಟಿಯರನ್ನೇ ಮೀರಿಸುವಂತೆ ಈಕೆ ಮಿರುಗಿದ ರೀತಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಆ ನಂತರದಲ್ಲಿ ಕನ್ನಡದ ದೊಡ್ಡ ದೊಡ್ಡ ಸ್ಟಾರ್’ಗಳ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದ ರಶ್ಮಿಕಾ ತೆಲುಗಿನಲ್ಲೂ ಕೂಡಾ ಇದೇ ರೀತಿ ಮಿಂಚುತ್ತಿದ್ದಾಳೆ. ಈಗಾಗಲೇ ಆಕೆಯ ನಟನೆಯ ಎರಡನೇ ತೆಲುಗು ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಇತ್ತೀಚಿಗೆ ರಶ್ಮಿಕಾ ಮಂದಣ್ಣ ಅವರು ಅಭಿನಯ ಮಾಡಿರುವ ತೆಲುಗು ಸಿನಿಮಾ ಗೀತ ಗೋವಿಂದಂ ಪೋಸ್ಟರ್ ಟ್ವಿಟರ್, ಕಿಸ್ಸಿಂಗ್ ಸಿನ್ ವೈರಲ್ ಆಗಿದ್ದವು, ಇದನ್ನು ನೋಡಿದ್ದೇ ತಡ ಟ್ರೊಲಿಗರು ಬೇತಾಳದಂತೆ ಬೆನ್ನು ಬಿದ್ದರು. ಕೆಲವರಂತೂ ರಕ್ಷಿತ್ ಶೆಟ್ಟಿ ಹಾಗು ರಶ್ಮಿಕಾ ಬ್ರೇಕ್ ಅಪ್ ಆಗಿದೆ ಎಂದೆಲ್ಲ ಸುಳ್ಳು ಸುದ್ದಿ ಹಬ್ಬಿಸಿದ್ದರು. ಎಲ್ಲ ರೂಮರ್ ಗಳಿಗೆ ಈಗ ರಶ್ಮಿಕಾ ಬ್ರೇಕ್ ಹಾಕಿದ್ದಾರೆ.

 

 

ತಮ್ಮಿಬ್ಬರ ಮಧ್ಯೆ ಬ್ರೇಕ್ ಅಪ್ ಆಗಿದೆ ಎನ್ನುವ ಸುದ್ದಿ ಕೇಳುತ್ತಿದ್ದ ಹಾಗೆ ರಕ್ಷಿತ್ ಶೆಟ್ಟಿ ತುಂಬಾ ನಕ್ಕಿದ್ದರಂತೆ. ನಾವಿಬ್ಬರು ತುಂಬಾ ಖುಷಿಯಾಗಿದ್ದೇವೆ. ಇಬ್ಬರು ಒಟ್ಟಿಗೆ ತುಂಬಾ ಸಮಯ ಕಳೆಯೋಕೆ ಆಗ್ತಿಲ್ಲ. ಎಂಗೇಜ್ ಮೆಂಟ್ ಗೆ ಮೊದಲಿನಿಂದಲೂ ಎರಡು ವರ್ಷ ಮದುವೆ ಇಲ್ಲ ಎನ್ನುವ ಪ್ಲಾನ್ ಇತ್ತು

ನಾವಿಬ್ಬರು ಸಹಿತ ಕೆಲವು ಚಿತ್ರದಲ್ಲಿ ಬುಡಿ ಆಗಿದ್ದೇವೆ. ಅದರ ಹೊರತಾಗಿ ನಮ್ಮ ನಡುವೆ ಬ್ರೇಕ್ ಅಪ್ ಆಗಿದೆ ಅನ್ನೋದು ಕೇವಲ ಗಾಸಿಪ್ ಅಷ್ಟೇ ಎಂದಿದ್ದಾರೆ ಕಿರಿಕ್ ನಟಿ. ಈ ಮೂಲಕ ರಶ್ಮಿಕಾ ಗಾಸಿಪ್ ಹರಡುವವರಿಗೆಲ್ಲಾ ಸರಿಯಾಗಿ ಉತ್ತರ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top