ಸಮಾಚಾರ

ಕುಚ್ ಕುಚ್ ಹೋತಾ ಹೈ ಸಿನಿಮಾ ಬಾಲ ನಟಿ ಈಗ ಹೇಗಾಗಿದ್ದಾಳೆ ನೀವೇ ನೋಡಿ

1998 ರಲ್ಲಿ ಬಿಡುಗಡೆಯಾಗಿದ್ದ ಬಾಲಿವುಡ್ ಕಿಂಗ್ ಖಾನ್ ಶಾರೂಕ್ ಅವರು ಅಭಿನಯ ಮಾಡಿದ್ದ ಕುಚ್ ಕುಚ್ ಹೋತಾ ಹೈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ಚಿತ್ರದಲ್ಲಿ ರಾಣಿ ಮುಖರ್ಜಿ ಹಾಗು ಪ್ರೀತಿ ಜಿಂಟಾ ಅಭಿನಯ ಮಾಡಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಈ ಚಿತ್ರದ ಕೇಂದ್ರ ಬಿಂದುವೆಂದರೆ ಚಿತ್ರದಲ್ಲಿ ಶಾರುಖ್ ಮಗಳಾಗಿ ಅಂಜಲಿ ಪಾತ್ರದಲ್ಲಿ ಅಭಿನಯ ಮಾಡಿದ್ದ ಮುದ್ದು ಹುಡುಗಿ ಸನಾ ಸಯೀದ್. ಆ ಹುಡುಗಿ ಈಗ ಏನು ಮಾಡುತ್ತಿದ್ದಾಳೆ ಎಂದು ನೀವು ಯೋಚನೆ ಮಾಡುತ್ತಿದ್ದೀರಾ.. ಹಾಗಾದರೆ ಮುಂದೆ ಓದಿ.

‘ಕುಚ್‌ ಕುಚ್‌ ಹೋತಾ ಹೈ’ನ ಚೆಂದವಾದ ಪಾತ್ರದಲ್ಲಿ ಅಭಿನಯ ಮಾಡಿದ ಬಳಿಕ ಸನಾ ‘ಹರ್‌ ದಿಲ್‌ ಜೋ ಪ್ಯಾರ್‌ ಕರೇಗಾ’, ‘ಬಾದಲ್‌’ ಚಿತ್ರಗಳಲ್ಲಿಯೂ ಬಾಲನಟಿಯಾಗಿ ನಟನೆ ಮಾಡಿದ್ದರು. ಇದಾದ 8 ವರ್ಷಗಳ ನಂತರ ಕಿರುತೆರೆಗೆ ಎಂಟ್ರಿ ಕೊಟ್ಟರು. ಇತ್ತೀಚಿಗೆ ಈಗ ತನ್ನ ಮಾದಕ ಮೈಮಾಟದಿಂದ ಬಿಟೌನ್ ನಲ್ಲಿ ಸಖತ್ ಸದ್ದು ಮಾಡುತ್ತಿದ್ದಾಳೆ ಎಂದು ತಿಳಿದು ಬಂದಿದೆ.

 

 

 

ಕೆಲವು ವರ್ಷಗಳ ಹಿಂದೆ ಸನಾ ಸ್ಟೂಡೆಂಟ್ ಆಫ್ ದಿ ಈಯರ್ ಚಿತ್ರದಲ್ಲಿ ಅಭಿನಯ ಮಾಡಿದ್ದ ಪಾತ್ರ ಎಲ್ಲರಿಗೂ ಇಷ್ಟ ಆಗಿತ್ತು. ಆಗಾಗ ಹಾಟ್ ಫೋಟೋ ಇನ್ಸ್ಟಾಗ್ರಾಮ್ ಗೆ ಅಪ್ಲೋಡ್ ಮಾಡುತ್ತ ಸಾನಾ ಸುದ್ದಿಯಲ್ಲಿರುತ್ತಾಳೆ ಎನ್ನಲಾಗಿದೆ. ಈಕೆ ಈಗ ಕೆಲವು ರಿಯಾಲಿಟಿ ಷೋ ಗಳನ್ನೂ ಸಹಿತ ಕೂಡ ನಡೆಸಿದ್ದಾಳೆ. ಒಟ್ಟಿನಲ್ಲಿ ಬಾಲಿವುಡ್ ನಲ್ಲಿ ಬೇಡಿಕೆಯ ನಟಿಯಾಗಿ ಹೊರಹೊಮ್ಮುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಸನಾ ಸಯೀದ್ ಅವರಿಗೆ ಬಾಲಿವುಡ್ ನಲ್ಲಿ ಉಜ್ವಲ ಭವಿಷ್ಯ ಎಂದು ಅನೇಕ ಬಾಲಿವುಡ್ ಮಂದಿ ಈಗಾಗಲೇ ಭವಿಷ್ಯ ನುಡಿದಿದ್ದಾರೆ.

ಇನ್ನು ಶಾರುಖಾನ್ ಅವರ ನಿಜವಾದ ಮಗಳು ಸುಹಾನಾ ಖಾನ ರವರು ಕೂಡ ಬಾಲಿವುಡ್ ಪ್ರವೇಶ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದು ಒಂದು ಒಳ್ಳೆಯ ಕಥೆಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top