ಸಮಾಚಾರ

ಮನಿಶಾ ಕೊಯಿರಾಲಾ ಬರ್ತಡೇ ಪಾರ್ಟಿಯಲ್ಲಿ ತಾರೆಗಳು ಬಿಂದಾಸ್ ಆಗಿ ಕಾಣಿಸಿಕೊಂಡಿದು ಹೀಗೆ,ಫೋಟೋ ಒಳಗಿದೆ

ಬಾಲಿವುಡ್ ನಟಿ ಮನಿಶಾ ಕೊಯಿರಾಲಾ ಅವರು ನೇಪಾಳ ಸುಂದರಿಯಾಗಿದ್ದಾರೆ “ಸೌದಾಗರ್‌’, ಹಿಂದಿ ಚಿತ್ರದ ಮೂಲಕ ಪ್ರವೇಶ. ಮಣಿರತ್ನಂ ನಿರ್ದೇಶನದ “ಬಾಂಬೆ’ ಸಿನಿಮಾ ಮೂಲಕ ಮನೆಮಾತಾದರು. ಹಲವು ವರ್ಷಗಳ ಕಾಲ ಬಾಲಿವುಡ್‌ ಚಿತ್ರರಂಗವನ್ನು ಆಳಿದ ಈ ಸುಂದರಿ ಬಳಿಕ ವಿವಾಹವಾದರು,  ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ವಿಚ್ಚೇದನ ತೆಗೆದುಕೊಂಡರು, ಕ್ಯಾನ್ಸರ್‌ಗೆ ತುತ್ತಾಗಿದ್ದರು, ಅದರಿಂದ ಹೊರಬಂದು, ದಿಟ್ಟ ಮಹಿಳೆ ಎನಿಸಿಕೊಂಡರು. ಹೀಗೆ ತನ್ನ ಜೀವನದಲ್ಲಿ ಅನೇಕ ಕಷ್ಟಕರ ಘಟ್ಟಗಳನ್ನು ದಾಡುತ್ತ ಬಂದಿರುವ ಈ ಚೆಲುವೆ ಕ್ಯಾನ್ಸರ್ ಕಾಯಿಲೆಯಿಂದ ಚೇತರಿಸಿಕೊಂಡು ಸಂಜಯ್ ದತ್ ಜೀವನಾಧಾರಿತವಾದ ಚಿತ್ರದಲ್ಲಿ ವಿಭಿನ್ನವಾದೊಂದು ಪಾತ್ರದಲ್ಲಿ ಅಭಿನಯ ಮಾಡಿ ಗಮನ ಸೆಳೆದಿದ್ದರು.

 

ಅಂದಹಾಗೆ ಮನಿಶಾ ಕೊಯಿರಾಲಾ ಅವರು ಈಗ 48 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಜನುಮದಿನವನ್ನು ಬಾಲಿವುಡ್ ತಾರೆಯರ ಜೊತೆಗೆ ಮನಿಶಾ ಆಚರಣೆ ಮಾಡಿಕೊಂಡರು. ಕಿಂಗ್ ಖಾನ್ ಮನಿಷಾ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಲವು ವರ್ಷಗಳ ಹಿಂದೆ ಮನಿಷಾ ಹಾಗು ಶಾರುಖ್ ಖಾನ್ ಅವರು ಸಿನಿಮಾ ಒಂದರಲ್ಲಿ ಒಟ್ಟಾಗಿ ಅಭಿನಯ ಮಾಡಿದ್ದಾರೆ.

 

 

ಮನಿಶಾ ಕೊಯಿರಾಲಾ ಜನುಮ ದಿನದಂದು ಬಾಲಿವುಡ್ ನಟಿ ರೇಖಾ, ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸೇರಿದಂತೆ ಹಲವು ದಿಗ್ಗಜರು ಭಾಗವಹಿಸಿ ಶುಭ ಕೋರಿದ್ದಾರೆ.

ಇತೀಚೆಗೆ ಸಂಜು ಸಿನೆಮಾದಲ್ಲಿ ಅಭಿನಯ ಮಾಡಿ ಗಮನ ಸೆಲೆಸಿರುವ ಮನಿಷಾ ಈಗ ಮತ್ತೆ ಸಿನಿಮಾಗಲ್ಲಿ ಸಕ್ರಿಯರಾಗಿ ಅಭಿನಯ ಮಾಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ನಾಯಕಿಯಾಗಿ ಮಿಂಚುತ್ತಿದ್ದ ಮನಿಷಾ ಈಗ ಪೋಷಕ ಪಾತ್ರಗಳಲ್ಲಿ ಅಭಿನಯ ಮಾಡಲು ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top