ಸಮಾಚಾರ

ಜಯಲಲಿತಾ ಹಾಗೂ ಕರುಣಾನಿಧಿಯವರ ಸಮಾಧಿ ಇರುವಂತ ಮರೀನಾ ಬೀಚ್‌ನ ವಿಶೇಷತೆ ಏನು ಗೊತ್ತಾ ನಿಮಗೆ ?ತಿಳ್ಕೊಳ್ಳಿ

ಕೆಲವು ದಿನಗಳ ಹಿಂದೆ ಕರುಣಾನಿಧಿ ಅವರ ಸಮಾಧಿ ವಿಚಾರವಾಗಿ ಮದ್ರಾಸ್​ ಹೈಕೋರ್ಟ್​ ನಲ್ಲಿ ನಡೆದ ವಿಚಾರಣೆಯಲ್ಲಿ ವಾದ ವಿವಾದವನ್ನು ಆಲಿಸಿ ಕರುಣಾನಿಧಿಯವರ ಪಾರ್ಥೀವ ಶರೀರವನ್ನು ಮರೀನಾ ಬೀಚ್​ನಲ್ಲೇ ಸಮಾಧಿ ಮಾಡಲು ಅವಕಾಶ ನೀಡಿತ್ತು. ಈ ಮರೀನಾ ಬೀಚ್ ನಲ್ಲಿಯೇ ಏಕೆ ಸಮಾಧಿ ಮಾಡಲು ಕರುಣಾನಿಧಿ ಕುಟುಂಬ ಪಟ್ಟು ಹಿಡಿದಿತ್ತು ಎಂಬುದಕ್ಕೂ ಕಾರಣವಿದೆ. ಹಾಗಾದರೆ ಮರೀನಾ ನಿಕ್ ವಿಶೇಷತೆ ಏನು ನೋಡೋಣ ಬನ್ನಿ.

ಮರೀನಾ ಬಿಚ್ ವಿಶ್ವದ ಖ್ಯಾತ ಬೀಚ್ ಗಳಲ್ಲಿ ಒಂದಾಗಿದೆ. ಇದು ಚೆನೈ ನಗರದ ಗುರುತಾಗಿದೆ ಮತ್ತು ಮುಖ್ಯವಾದ ಪ್ರವಾಸಿಗರ ತಾಣವಾಗಿದೆ. ಇದು ನಮ್ಮ ದೇಶದಲ್ಲೇ ಅತ್ಯಂತ ಉದ್ದವಾದ ಸಮುದ್ರ ತೀರವಾಗಿದೆ. ಈ ಮರೀನಾ ಬೀಚ್ ಸುಮಾರು 13 ಕಿಲೋಮೀಟರು ಉದ್ದವಿದೆ ಎಂದು ತಿಳಿದು ಬಂದಿದೆ.

 

 

ಚೆನೈ ನಗರದ ಮುಖ್ಯ ಸ್ಥಳಗಳಲ್ಲಿ ಒಂದಾಗಿರುವ ಈ ಮರೀನಾ ಬೀಚ್ ನಲ್ಲಿ ವರ್ಷವಿಡೀ ಸಮಾರಂಭಗಳು ನಡೆಯುತ್ತಲೇ ಇರುತ್ತದೆ. ಭಾರತದ ದೊಡ್ಡ ಓಟ ಸ್ಪರ್ಧೆಗಳಲ್ಲಿ ಒಂದಾದ ಮ್ಯಾರಥಾನ್ ಇಲ್ಲಿ ನಡೆಸಲಾಗುತ್ತದೆ. ಸಾವಿರಾರು ಜನರು ಇದರಲ್ಲಿ ಭಾಗವಹಿಸುತ್ತಾರೆ. ಪೊಂಗಲ್ ಹಬ್ಬದ ದಿನಗಳಲ್ಲಿ ಜನರು ತಮ್ಮ ನೆಂಟರೊಡನೆ ಕೂಡಿ ಸಂತಸ ಪಡುವ ಸ್ಥಳವಾಗಿದೆ ಹಾಗು ಸ್ವಾತಂತ್ರ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸಂಭ್ರಮಗಳು ಸರ್ಕಾರದ ವಿವಿಧ ಇಲಾಖೆಗಳ ಪಥಸಂಚಲನೆ ಇಲ್ಲಿ ನಡೆಯುತ್ತದೆ ಎಂದು ತಿಳಿದು ಬಂದಿದೆ.

ಇಲ್ಲಿ ತಮಿಳುನಾಡಿನ ರಾಜಕೀಯ ನಾಯಕರ ಸಮಾಡಿ ಮಾಡಿದ್ದಾರೆ ಈ ಹಿಂದೆ ಜಯಲಲಿತಾ, ಡಿಎಂಕೆಯ ಸಂಸ್ಥಾಪಕ ಅಣ್ಣಾದೊರೆಯನ್ನೂ ಕೂಡಾ ಇಲ್ಲೇ ಸಮಾಧಿ ಮಾಡಿದ್ದಾರೆ. ಎಐಎಡಿಎಂಕೆ ಯ ಸ್ಥಾಪಕ ಎಂಜಿ ರಾಮಚಂದ್ರ ಅವರ ಸಮಾಧಿ ಕೂಡ ಮಾಡಿದ್ದಾರೆ. ಇದೆ ಕಾರಣಕ್ಕೆ ಕರುಣಾನಿಧಿ ಸಮಾಧಿ ಕೂಡ ಇಲ್ಲೇ ಮಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top