ಮನೋರಂಜನೆ

ಪ್ರಿಯಾಂಕಾ ಚೋಪ್ರಾ ಮನೆಯಲ್ಲಿ ರೋಕಾ ಸಂಭ್ರಮ- ಸಂಜೆ ಎಂಗೇಜ್ಮೆಂಟ್ ಪಾರ್ಟಿ

ಪ್ರಿಯಾಂಕಾ ಛೋಪ್ರಾ ಪಾಲಿಗೆ ಈಗ ಆಕೆಯ ವಯಕ್ತಿಕ ಜೀವನವೇ ಪ್ರಪಂಚ. ಸಂಪೂರ್ಣವಾಗಿ ಲವ್ ಮೂಡಿನಲ್ಲಿ ಇರೋ ಪಿಗ್ಗಿ ಇಂದು ತನ್ನ ಬಹುದಿನಗಳ ಪ್ರಿಯಕರ ನಿಕ್ ಜೊನಾಸ್ ನೊಂದಿಗೆ ನಿಶ್ಚಿತಾರ್ಥ ಪಾರ್ಟಿ ನಡೆಯಲಿದೆ. ಮುಂಬೈನಲ್ಲಿರುವ ಪ್ರಿಯಾಂಕಾ ಅವರ ಬಂಗಲೆಯಲ್ಲಿ ಶಾಸ್ತ್ರೋಕ್ತವಾಗಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದಾದ ಅನಂತರ, ಮುಂಬೈನ ಫೈವ್‌ ಸ್ಟಾರ್‌ ಹೊಟೆಲೊಂದರಲ್ಲಿ ತಮ್ಮ ಆಪ್ತರಿಗಾಗಿ ಸಮಾರಂಭ ಏರ್ಪಡಿಸಲಾಗಿದೆ.

 

 

ಮೊನ್ನೆ ತಾನೇ ಭಾರತಕ್ಕೆ ಬಂದಿಳಿದಿದ್ದ ನಿಕ್‌ ತಂದೆ ಪೌಲ್‌ ಕೇವಿನ್‌ ಜೋನಸ್‌ ಮತ್ತು ತಾಯಿ ಡೆನಿಸ್‌ ಮಿಲ್ಲರ್‌ ಅವರಿಗೆ ಪ್ರಿಯಾಂಕಾ ಚೋಪ್ರಾ ಕುಟುಂಬ ಆದರದ ಸ್ವಾಗತ ನೀಡಿತ್ತು.. ಇಂದು ಸಂಜೆ ಬಾಲಿವುಡ್ ಸ್ನೇಹಿತರಿಗೆ ಹಾಗೂ ಆಪ್ತ ಸಂಬಂಧಿಕರಿಗೆ ಪ್ರಿಯಾಂಕಾ ಮತ್ತು ನಿಕ್ ಪಾರ್ಟಿ ಏರ್ಪಡಿಸಿದೆ. ಈ ಮೂಲಕ ತಮ್ಮಿಬ್ಬರ ಮದುವೆ ವಿಚಾರವನ್ನ ಅಫೀಶಿಯಲ್ ಆಗಿ ಘೋಷಿಸಲಿದೆ.

ಪ್ರಿಯಾಂಕಾ ಮನೆಯಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ, ಶಾಸ್ತ್ರ ಪೂಜಾ ಕಾರ್ಯಕ್ರಮ ನಡೆದಿದೆ. ಪ್ರಿಯಾಂಕಾ-ನಿಕ್ ಜೋಡಿಯು ಸಾಂಪ್ರದಾಯಿಕ ಉಡುಗೆ ತೊಟ್ಟು ಈ ಪೂಜೆಯಲ್ಲಿ ಭಾಗವಹಿಸಿದ್ದಾರೆ.. ದೇಸಿ ಉಡುಪುಗಳಲ್ಲಿ ಮದುಮಕ್ಕಳು ಮುದ್ದುಮುದ್ದಾಗಿ ಕಾಣುತ್ತಿದ್ದು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸೆಪ್ಟೆಂಬರ್ 16 ನಿಕ್ ಜನ್ಮದಿನವಾಗಿದ್ದು ಅದೇ ಸಮಯದಲ್ಲಿ ಈ ಜೋಡಿ ಹಸೆಮಣೆ ಏರುವ ಸಾಧ್ಯತೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top