ದೇವರು

ಈ ದೇವಸ್ಥಾನದಲ್ಲಿ ರಾತ್ರಿ ಹೊತ್ತು ವಿಗ್ರಹಗಳು ಪರಸ್ಪರ ಮಾತನಾಡಿ ಕೊಳ್ಳುತ್ತವಂತೆ,ಅನೇಕ ಅಚ್ಚರಿ,ಪವಾಡಗಳು ನಡೆಯುವ ಈ ದೇವರ ಬಗ್ಗೆ ಗೊತ್ತಾದ್ರೆ ಖಂಡಿತಾ ನೀವು ಇಲ್ಲಿಗೆ ಒಂದ್ಸಲ ಹೋಗ್ಬರ್ತೀರ.

ಅಚ್ಚರಿಯಾದರೂ ಕೂಡ ಇದು ನಿಜ ವಿಗ್ರಹಗಳು ರಾತ್ರಿಯ ವೇಳೆ ಪರಸ್ಪರ ಮಾತನಾಡಿ ಕೊಳ್ಳುತ್ತವಂತೆ.

ಭಾರತ ದೇಶ ವಿವಿಧ ಜಾತಿ ಧರ್ಮಗಳನ್ನು ಒಳಗೊಂಡ ದೇಶ. ಇಲ್ಲಿ ಅನೇಕ ಪವಿತ್ರ ದೇಗುಲಗಳಿವೆ ಒಂದೊಂದು ಸಹ ವಿಶೇಷ ಪುರಾಣ ಹಿನ್ನೆಲೆಯನ್ನು ಒಳಗೊಂಡಿವೆ. ಅಲ್ಲದೆ ಕೆಲವು ದೇಗುಲವು ದೇವಾಲಯಗಳಲ್ಲಿ ಅದ್ಭುತ ಪವಾಡಗಳು ನಡೆಯುತ್ತವೆ. ಏಳಿಗೆಗಾಗಿ ಎಂದು ಹೇಳಲಾಗುತ್ತದೆ. ಇಂತಹ ಒಂದು ವಿಶೇಷ ಹಾಗೂ ಪವಾಡವನ್ನು ಒಳಗೊಂಡಿರುವ ದೇವಾಲಯಗಳಲ್ಲಿ ರಾಜೇಶ್ವರಿ ತ್ರಿಪುರಸುಂದರಿ ದೇಗುಲವು ಸಹ ಒಂದು.
ರಾಜರಾಜೇಶ್ವರಿ ತ್ರಿಪುರ ಸುಂದರಿ ದೇವಸ್ಥಾನ, ಬಿಹಾರ್.

 

 

 

ಬಿಹಾರದ ಬಸ್ಟರ್ ಎಂಬಲ್ಲಿರುವ ರಾಜರಾಜೇಶ್ವರಿ ತ್ರಿಪುರ ಸುಂದರಿ ದೇವಸ್ಥಾನ ನಿತ್ಯವೂ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ದುರ್ಗಾದೇವಿಗೆ ಸಮರ್ಪಿತವಾದ ಈ ದೇವಸ್ಥಾನದಲ್ಲಿ ವಿವಿಧ ಆಚಾರ-ವಿಚಾರಗಳು ಇರುವುದು ವಿಶೇಷ .ತ್ರಿಗರಾ, ಧೂಮಾವತಿ,ಬಾಗುಲುಖಿ,ತಾರಾ,ಕಾಳಿ, ಚಿನ್ನ ಮಾಸ್ತ,ಷೋಡಸಿ ,ಮಾತಂಗಿ ಕಮಲ ಉಗ್ರಹ ತಾರಾ ಭುವನೇಶ್ವರಿ ಸೇರಿದಂತೆ ರಾಜೇಶ್ವರಿ ದೇವಿಯ ವಿವಿಧ ಅವತಾರಗಳ ವಿಗ್ರಹಗಳು ಇಲ್ಲಿವೆ

ಈ ದೇವಸ್ಥಾನಕ್ಕೆ 400 ವರ್ಷಗಳ ಇತಿಹಾಸ ಇದೆಯಂತೆ.

400 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇಗುಲವನ್ನು ಭವಾನಿ ಮಿಶ್ರ ಎನ್ನುವವರು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ. ಇಲ್ಲಿಯ ಒಂದು ಅದ್ಭುತ ವಿಚಾರವೇನೆಂದರೆ ದೇವಾಲಯದ ರಾಜರಾಜೇಶ್ವರಿ ತ್ರಿಪುರ ಸುಂದರಿ ವಿಗ್ರಹವನ್ನು ಹೊರತುಪಡಿಸಿ ಉಳಿದ ವಿಗ್ರಹಗಳು ಪರಸ್ಪರ ಮಾತನಾಡುತ್ತವೆ ಎಂದು ಹೇಳಲಾಗುವುದು.
ಅದರಲ್ಲಿ ವಿಶೇಷವಾಗಿ ಬತುಕ್ ಭೈರವ , ದತ್ತಾತ್ರೇಯ ಭೈರವ , ಅನ್ನಪೂರ್ಣ ಭೈರವ, ಕಲಾ ಭೈರವ ಮತ್ತು ಮುಂಗಾಡಿ ಭೈರವ ವಿಗ್ರಹಗಳು ರಾತ್ರಿಯ ಸಮಯದಲ್ಲಿ ಮಾತನಾಡುತ್ತವೆ ಎಂದು ಹೇಳಲಾಗುವುದು .ಈ ವಿಚಾರ ವಿಜ್ಞಾನಿಗಳನ್ನು ಕೂಡ ಸೋಲಿಸಿ ಬಿಟ್ಟಿದೆ. ಈ ವಿಚಾರವನ್ನು ಪರಿಶೀಲಿಸಲು ವಿಜ್ಞಾನಿಗಳ ತಂಡವೊಂದು ಈ ಸ್ಥಳಕ್ಕೆ ಭೇಟಿ ನೀಡಿತು.

ಇವರ ಸಂಶೋಧನೆಯ ಪ್ರಕಾರ ವಿಗ್ರಹಗಳು ರಾತ್ರಿ ಹೊತ್ತು ಮಾತನಾಡುತ್ತವೆ ಎನ್ನುವುದನ್ನು ದೃಢಪಡಿಸಿದ್ದರು ಎನ್ನಲಾಗುತ್ತದೆ.ಯಾವುದೇ ಮನುಷ್ಯರ ಸಂಚಾರ ಇಲ್ಲದೆ ಇರುವಾಗ ವಿಗ್ರಹಗಳು ಪರಸ್ಪರ ಮಾತುಗಳನ್ನು ಕೇಳಬಹುದು ಎಂದು ಹೇಳಲಾಗುತ್ತದೆ. ದೇವಸ್ಥಾನದ ಒಳಗೆ ಏಕೆ ಮಾತುಗಳು ಕೇಳಿ ಬರುತ್ತವೆ ? ಎನ್ನುವುದು ವಿಜ್ಞಾನಿಗಳಿಗೆ ಸೂಕ್ತ ಮಾಹಿತಿ ದೊರೆಯಲಿಲ್ಲ.
ಇಂದಿಗೂ ಕೂಡ ಇದು ಬಗೆಹರಿಯದಂತ ವಿಚಾರವಾಗಿದೆ. ಈ ವಿಚಾರವನ್ನು ನೀವು ನಂಬಬಹುದು ಅಥವಾ ಬಿಡಬಹುದು. ಅತಿಂದ್ರೀಯ ವಿದ್ಯಮಾನವು ಏಕೆ ನಡೆಯುತ್ತದೆ ? ಎನ್ನುವುದು ಇಂದಿಗೂ ಬಗೆಹರಿಯದ ವಿಚಾರವಾಗಿ ಉಳಿದಿದೆ . ಈ ಮಾತುಗಳು ಏಕೆ ಇಂದಿಗೂ ಮನುಷ್ಯನಿಗೆ ಕೇಳುತ್ತಿಲ್ಲ ಎನ್ನುವುದು ತಿಳಿದಿಲ್ಲ . ಬಹುಶಃ ಇದು ದೇವತೆಗಳು ಮನುಷ್ಯ ಕುಲಕ್ಕೆ ಹೇಳುವ ಯಾವುದೋ ವಿಶೇಷ ವಿಚಾರವಾಗಿರಬಹುದು ಅದು ಮನುಷ್ಯನಿಗೆ ಈವರೆಗೆ ತಿಳಿಯದೆ ಇರುವ ಸಂಗತಿಯಾಗಿರಬಹುದು ಒಟ್ಟಿನಲ್ಲಿ ಈ ದೇಗುಲದ ದೈವ ಭಕ್ತಿ ಜನರಲ್ಲಿ ತುಂಬಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top