fbpx
ಸಮಾಚಾರ

10 ತಲೆಯ ರಾವಣನಿಗೆ ಎಷ್ಟು ಆಧಾರ್ ಕಾರ್ಡ್ ಬೇಕೆಂದವನಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರಿಸಿದ ಆಧಾರ್

ಈಗ ಎಲ್ಲದಕ್ಕೆ ಒಂದೇ ಕಾರ್ಡ್‌ ಅದುವೇ ಆಧಾರ್‌ ಕಾರ್ಡ್‌. ಸರ್ಕಾರದ ಎಲ್ಲ ವ್ಯವಹಾರ ಹಾಗು ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುತ್ತಿರುವ ವಿಚಾರ ನಮಗೆಲ್ಲ ತಿಳಿದಿದೆ. 12 ಅಂಕಿಯ ಆಧಾರ್ ಸಂಖ್ಯೆ ಪ್ರತಿಯೊಬ್ಬ ಭಾರತೀಯನ ಗುರುತು ಮತ್ತು ಹೆಮ್ಮೆಯ ಸಂಖ್ಯೆಯಾಗಿ ಮಾರ್ಪಾಟಾಗಿದೆ. ಇತ್ತೀಚಿನ ದಿನಗಳಲ್ಲಿ ಸಿಮ್ ಕಾರ್ಡ್ ಪಡೆಯಲು, ಬ್ಯಾಂಕ್ ಖಾತೆ ಸೇರಿದಂತೆ ಅನೇಕ ಯೋಜನೆಗಳಿಗೆ ಆಧಾರ ಕಡ್ಡಾಯ ಮಾಡಲಾಗುತ್ತಿದೆ.

ಆಧಾರ ಕಾರ್ಡ್ ದಿಂದ ಅನೇಕ ಅನುಕೂಲ ಇದ್ದರು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಧಾರ್ ಕಾರ್ಡ್ ಬಗ್ಗೆ ಟ್ರೊಲ್ ಮಾಡಲು ಶುರು ಮಾಡಿದ್ದರು. ಆಧಾರ್ ಮಂಡಳಿ ಕೊಟ್ಟ ಉತ್ತರಕ್ಕೆ ಟ್ರೊಲ್ ಮಾಡಿದವ ತೆಪ್ಪಗೆ ಕುಳಿತಿದ್ದಾನೆ ಎಂದು ತಿಳಿದು ಬಂದಿದೆ. ಹೌದು ಇತ್ತೀಚಿಗೆ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹತ್ತು ತಲೆ ಇರುವ ರಾವಣನ ಚಿತ್ರ ಹಾಕಿ ಈತನಿಗೆ ಎಷ್ಟು ಆಧಾರ್ ಕಾರ್ಡ್ ನೀಡುತ್ತಿರಿ ಎಂದು ವ್ಯಂಗವಾಗಿ ಆಧಾರ್ ಅಧಿಕಾರಿಗಳಿಗೆ ಕೇಳುತ್ತಾನೆ.

 

 

 

 

ವ್ಯಕ್ತಿ ಕೇಳಿದ ವ್ಯಂಗ್ಯ ಪ್ರಶ್ನೆಗೆ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ಉತ್ತರ ನೀಡಿರುವ ಆಧಾರ್ ದವರು ರಾವಣ ಭಾರತದ ಪ್ರಜೆಯಲ್ಲ ಆದ್ದರಿಂದ ಅವನು ಆಧಾರ್ ಕಾರ್ಡ ಪಡೆಯಲು ಅರ್ಹನಲ್ಲ ಎಂದು ತಿಳಿಸಿದೆ. ಈ ಉತ್ತರ ಕೇಳಿ ತಬ್ಬಿಬ್ಬಾಗಿರುವ ವ್ಯಕ್ತಿ ತೆಪ್ಪಗೆ ಕುಳಿತುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಆಧಾರ್ ಕಾರ್ಡ್ ಎಲ್ಲ ಭಾರತೀಯರ ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಎಲ್ಲ ಕೆಲಸಗಳು ಸುಗಮವಾಗಿ ನಡೆಯುತ್ತಿವೆ. ಇದರಿಂದ ಸರ್ಕಾರಕ್ಕೂ ಉಪಯೋಗವಾಗುತ್ತಿದೆ. ಈ ಹಿಂದೆ ಅನೇಕ ಸರ್ಕಾರಿ ಯೋಜನೆಯ ಫಲಾನುಭವಿಗಳು ಸುಳ್ಳು ದಾಖಲೆ ಸೃಷ್ಟಿ ಮಾಡಿ ಒಂದ್ಕಕಿಂತ ಹೆಚ್ಚು ಬಾರಿ ಯೋಜನೆಯ ಲಾಭ ಪಡೆಯುತ್ತಿದ್ದರು. ಈಗ ಆಧಾರ್ ಬಂದಾಗಿನಿಂದ ಇದೆಲ್ಲ ತಪ್ಪಿ ಸರಿಯಾದ ವ್ಯವಹಾರ ನಡೆಯುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top