ಸಮಾಚಾರ

ತಮ್ಮ ಮದುವೆಯ ಮುಂಚಿನ ಲವ್ ಸ್ಟೋರಿ ಬಗ್ಗೆ ಬೆಚ್ಚಿ ಬೀಳಿಸುವ ಮಾಹಿತಿ ಹೊರಹಾಕಿದ ನಟಿ ಸಮಂತಾ

ಟಾಲಿವುಡ್ ಕ್ಯೂಟ್ ಕಪಲ್ ಅಂದ್ರೆ ಅದು ನಾಗಚೈತನ್ಯ ಮತ್ತು ನಟಿ ಸಮಂತಾ ಎಂದು ಹೇಳುತ್ತಾರೆ. ಮೊದಲ ಚಿತ್ರದಲ್ಲೆ ಆರಳಿದ ಪ್ರೀತಿ 7 ವರ್ಷಗಳು ಪ್ರೀತಿಸಿದ ಈ ಜೋಡಿ ನಂತರ ಭರ್ಜರಿಯಾಗಿ ಮದುವೆಯಾದರು. ಮದುವೆಯ ಬಳಿಕವೂ ರಂಗಸ್ಥಳಂ, ಮಹಾನಟಿ ಮತ್ತು ‘ಇರುಂಬು ತಿರೈ’ ಸಿನೆಮಾಗಳಲ್ಲಿ ಅಭಿನಯ ಮಾಡಿ ಸಮತಾ ಸೈ ಎನಿಸಿಕೊಂಡಿದ್ದಾಳೆ. ಈಗ ಯು ಟರ್ನ್ ತೆಲುಗು ಸಿನಿಮಾ ದಲ್ಲಿ ಕೂಡ ಅಭಿನಯ ಮಾಡುತ್ತಿದ್ದಾಳೆ. ಆದರೆ ಸಮಂತಾ ಜೀವನದಲ್ಲಿ ಮದುವೆ ಮೊದಲು ಹಳೆಯ ಲವ್ ಸ್ಟೋರಿ ಒಂದು ಇದೆ. ಮುಂದೆ ಓದಿ

ಕೆಲವು ದಿನಗಳ ಹಿಂದೆ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಭಾವಹಿಸಿದ್ದ ಸಮಂತಾ ಅವರು ತಮ್ಮ ಮದುವೆ ಮುಂಚಿನ ಲವ್ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ. ಸಮಂತಾ ಅವರು ಮಹಾನಟಿ ಸಿನಿಮಾದಲ್ಲಿ ಅಭಿನಯ ಮಾಡಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಈ ಸಿನಿಮಾದಲ್ಲಿನ ಜೆಮಿನಿ ಗಣೇಶನ್ ಪಾತ್ರಕ್ಕೂ ತಮ್ಮ ಹಳೆಯ ಬಾಯ್ ಪ್ರೇಂಡ್ ಗೂ ಹೋಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರದ ಗಣೇಶನ್ ಅವರ ವಿವಾಹೇತರ ಸಂಬಂಧಗಳ ಕುರಿತಂತೆ ಮಾತನಾಡಿದ ಅವರು, ನಾನು ಕೂಡ ನನ್ನ ವೈಯಕ್ತಿಕ ಜೀವನದಲ್ಲಿ ಪ್ರೀತಿ ಹುಚ್ಚಿಗೆ ಬಿದ್ದು ಸಂಕಷ್ಟ ಎಂದುರಿಸಿದ್ದೆ ಎಂದು ಹೇಳಿದ್ದಾರೆ.

 

 

ಆ ಸಂಭಂದವನ್ನು ಬ್ರೇಕ್ ಮಾಡಿಕೊಂಡಿದ್ದರಿಂದಲೇ ಕೆಟ್ಟ ಅನುಭವದಿಂದ ಪಾರಾದೆ ಎಂದು ಹೇಳಿದ್ದಾರೆ. ಸಮಂತಾ ಹೀಗೆಲ್ಲ ಮಾತನಾಡಿದ್ದು ಹೆಸರು ಹೇಳದೆ ತನ್ನ ಹಳೆಯ ಗೆಳೆಯ ಸಿದ್ಧಾರ್ಧ್ ಬಗ್ಗೆ ಎಂದು ತಿಳಿದು ಬಂದಿದೆ.

ಇನ್ನು ನಾಗಚೈತನ್ಯ ಅವರನ್ನು ಮದುವೆ ಆಗಿರುವ ಬಗ್ಗೆ ಮಾತನಾಡಿದ ಸಮಂತಾ ಅವರು ನಾಗಚೈತನ್ಯ ಸಿಕ್ಕಿದ್ದು ನನ್ನ ಪುಣ್ಯ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top