fbpx
ಸಮಾಚಾರ

ಪ್ರವಾಹ ಸಂತ್ರಸ್ತರ ನೆರವಿಗೆ ಬಂದ ಸ್ಯಾಂಡಲ್ವುಡ್ ತಾರೆಯರು ಇವರುಗಳೇ ನೋಡಿ .

ಧಾರಾಕಾರ ಮಳೆಗೆ ಕೊಚ್ಚಿ ಹೋಗುತ್ತಿರುವ ಕೊಡುಗು ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಕನ್ನಡ ಚಿತ್ರ ನಟರು ಮುಂದಾಗಿದ್ದಾರೆ.

 

ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಭೂಪಾತಕ್ಕೆ ಸಿಲುಕಿ ಅಲ್ಲೋಲ ಕಲ್ಲೋಲವಾಗಿರುವ ‘ಕೊಡುಗು’ ಸೇರಿದಂತೆ ರಾಜ್ಯದ ಇತರ ಪ್ರವಾಹ ಪೀಡಿತ ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ನೆರವಾಗುವಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮನವಿ ಮಾಡಿಕೊಂಡಿದ್ದಾರೆ.. ಈ ಬಗ್ಗೆ ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಸುದೀಪ್ ತಮ್ಮ ಅಭಿಮಾನಿಗಳಿಗೆ ಸಂತ್ರಸ್ತರನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ..

 

ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಕೂಡ ಮನವಿ ಮಾಡಿಕೊಂಡಿದ್ದಾರೆ.. “ಕಷ್ಟದಲ್ಲಿರುವ ಕೊಡಗಿನ ಜನತೆಗೆ ಸಾಧ್ಯವಾದಷ್ಟು ನೆರವು ನೀಡಿ, ಯಾವುದೇ ಬೇಧ-ಬಾವವಿಲ್ಲದೇ ಎಲ್ಲರೂ ಒಟ್ಟಾಗಿ ಸಹಾಯ ಮಾಡೋಣ.. ಚಿತ್ರರಂಗದ ಪರವಾಗಿ ನಾವೆಲ್ಲರೂ ಒಟ್ಟಾಗಿ ಕೊಡಗಿನ ಜನರ ಜೊತೆ ಇರುತ್ತೇವೆ, ಎಲ್ಲ ನಟರ ಅಭಿಮಾನಿಗಳು ಮತ್ತು ನಮ್ಮ ಕುಟುಂಬದವರು ನಿಮ್ಮ ಜೊತೆ ಇರುತ್ತೆ” ಎಂದು ವಿಡಿಯೋ ಮೂಲಕ ಶಿವಣ್ಣ ಮನವಿ ಮಾಡಿಕೊಂಡಿದ್ದಾರೆ.

 

 

 

 

ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ “ಕೊಡಗು ಜನರ ಸಂಕಷ್ಟಕ್ಕೆ ನನ್ನ ಪ್ರಾರ್ಥನೆ ಇದ್ದೆ ಇರುತ್ತದೆ. ಅವರು ಈಗ ತೊಂದರೆಯಲ್ಲಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸೋಣ. ನಮ್ಮ ಕೈಲಾದ ನೆರವು ನೀಡೋಣ. ಈ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸೋಣ” ಎಂದು ಟ್ವೀಟ್​ ಮಾಡಿದ್ದಾರೆ.​ ​ ಇದರ ಜೊತೆಗೆ ಎರಡು ಫೋಟೋಗಳನ್ನ ಅಪ್ಲೋಡ್ ಮಾಡಿರುವ ದರ್ಶನ್ ಕೊಡಗು ಪ್ರವಾಹದಲ್ಲಿ ಸಿಕ್ಕಿರುವ ನಿರಾಶ್ರಿತರ ಪರಿಹಾರ ನಿಧಿಗೆ ದೇಣಿಗೆ ನೀಡಲು ಇಚ್ಛಿಸುವವರಿಗೆ ಮಾಹಿತಿ ನೀಡಿದ್ದಾರೆ. ಆ ಫೋಟೋಗಳಲ್ಲಿ ಹೇಗೆ ದೇಣಿಗೆ ನೀಡಬಹುದು ಎಂದು ವಿವರಿಸಲಾಗಿದೆ.

 

 

 

ಪುನೀತ್​ ರಾಜ್​ ಕುಮಾರ್​​ ಅವರು ಮತ್ತು ನಟಿ ಹರ್ಷಿಕಾ ಪೂಣಚ್ಛ ಅವರು ಕೊಡಗು ಸಂತ್ರಸ್ತರಿಗೆ ಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ತನ್ನ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಟ ದರ್ಶನ್ ಅವರು, ನಾವು ಕೊಡಗು ಜನರಿಗಾಗಿ ಪ್ರಾರ್ಥನೆ ಮಾಡಿಕೊಳ್ಳೋಣ. ನಮ್ಮ ಪ್ರಾರ್ಥನೆ ಮತ್ತು ನಮ್ಮ ಬೆಂಬಲ ಅವರಿಗೆ ಬೇಕಾಗುತ್ತದೆ. ನಾವೆಲ್ಲರೂ ಅವರಿಗೆ ಸಹಾಯ ಮಾಡೋಣ ಎಂದು ಟ್ವೀಟ್ ಮಾಡಿದ್ದಾರೆ.

 

 

ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಮುಂತಾದ ನಟರು ಪ್ರವಾಹದ ಸಂತ್ರಸ್ತರಿಗೆ ನೆರವಾಗುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top