fbpx
ಸಮಾಚಾರ

ಅಪ್ಪುವನ್ನು ‘ಕಿಂಗ್ ಆಫ್ ಸ್ಯಾಂಡಲ್‍ವುಡ್’ ಎಂದು ಕರೆದ ಶೋಭಾ ಕರಂದ್ಲಾಜೆ.

ಉಡುಪಿ ಹಾಗೂ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವ್ರು ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ‘ಕಿಂಗ್ ಆಫ್ ಸ್ಯಾಂಡಲ್‍ವುಡ್’ ಎಂದು ಕರೆದಿದ್ದಾರೆ.. ಪುನೀತ್ ಅವರನ್ನು ಭೇಟಿಯಾಗಿ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಿದ ಶೋಭಾ ಕರಂದ್ಲಾಜೆ ನರೇಂದ್ರ ಮೋದಿ ಸರ್ಕಾರದ ಸಾದನೆಗಳನ್ನು ಮನವರಿಕೆ ಮಾಡಿಕೊಡುವ ‘ಸಂಪರ್ಕ್ ಫಾರ್ ಸಮರ್ಥನ್’ ಕಿರುಹೊತ್ತಿಗೆಯನ್ನು ನೀಡಿದ್ದಾರೆ.

 

 

ಈ ವಿಚಾರವನ್ನು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಹಂಚಿಕೊಂಡಿರುವ ಶೋಭಾ ಕರಂದ್ಲಾಜೆ ಖುಷಿ ವ್ಯಕ್ತಪಡಿಸಿದ್ದಾರೆ. “ಅಪ್ಪನಂತೆ ಮಗ, #SamparkForSamarthan ಅಭಿಯಾನದ ಅಡಿಯಲ್ಲಿ king of sandalwood ಮತ್ತು ಒಬ್ಬ ಅತ್ಯತ್ತಮ ವ್ಯಕ್ತಿ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿದೆ. ಅವರೊಂದಿಗೆ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಹಲವಾರು ಯೋಜನೆಗಳು ಮತ್ತು ಸರ್ಕಾರದ ಸಾಧನೆಗಳನ್ನು ಚರ್ಚಿಸಲಾಗಿಯಿತು” ಎಂದು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

 

ಏನಿದು ಸಂಪರ್ಕ ಸಾಧನ್:
ಕೇಂದ್ರದ ಮೋದಿ ಸರ್ಕಾರ ನಾಲ್ಕು ವರ್ಷ ಸಂಪೂರ್ಣಗೊಳಿಸಿದ ಹಿನ್ನೆಲೆಯಲಿ ಬಿಜೆಪಿ ರಾಷ್ತಾಧ್ಯಕ್ಷ ಅಮಿತ್ ಶಾ ‘ಸಂಪರ್ಕ್ ಫಾರ್ ಸಮರ್ಥನ್’ ಎಂಬ ಅಭಿಯಾನವನ್ನು ಚಾಲನೆ ನೀಡಿ ಅದರ ಮುಖಾಂತರ ನಾಲ್ಕು ವರ್ಷಗಳ ಕಾಲ ತಮ್ಮ ಸರ್ಕಾರ ಮಾಡಿರುವ ಸಾಧನೆಗಳನ್ನು ತಿಳಿಸಲು ಮುಂದಾಗಿದ್ದರು. ಈಗಾಗಲೇ ಉದ್ಯಮಿ ರತನ್ ಟಾಟಾ, ಬಾಲಿವುಡ್ ನಟಿ ಮಾಧುರಿ ದೀಕ್ಷಿತ್,ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಶಿರೋಮಣಿ ಅಕಾಲಿ ದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್ ಮತ್ತು ಕ್ರೀಡಾಪಟು ಮಿಲ್ಕಾ ಸಿಂಗ್, ಕಪಿಲ್ ದೇವ್ ಸೇರಿದಂತೆ ಸಾಕಷ್ಟು ಖ್ಯಾತನಾಮರನ್ನು ಭೇಟಿ ಮಾಡಿದ್ದ ಅಮಿತ್ ಷಾ ಮೋದಿ ಸರ್ಕಾರದ ನಾಲ್ಕು ವರ್ಷದ ಸಾಧನೆಯನ್ನು ಬಿಂಬಿಸುವ ಕಿರು ಹೊತ್ತಿಗೆಯನ್ನು ನೀಡಿ ಬಂದಿದ್ದರು.. ಕೆಲವು ದಿನಗಳ ಹಿಂದೆಯಷ್ಟೇ ಶಾಸಕ ಶ್ರೀರಾಮುಲು ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ಸಂಪರ್ಕ್ ಸಾಧನ್ ಕಿರುಹೊತ್ತಿಗೆಯನ್ನು ನೀಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top