ಮನೋರಂಜನೆ

ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಳು ಹನ್ಸಿಕಾ ಮೋಟ್ವಾನಿ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಿಂದಾಸ್ ಚಿತ್ರದ ನಾಯಕಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ನೀಡಿದ್ದಾಳೆ. ಕಾಲಿವುಡ್ ಸೇರಿದಂತೆ ದಕ್ಷಿಣದ ಎಲ್ಲಾ ಚಿತ್ರರಂಗದಲ್ಲಿಯೂ ನಟಿಸಿ ಕ್ವೀನ್ ಆಗಿ ಮೆರೆಯುತ್ತಿದ್ದ ಹನ್ಸಿಕಾ ಇತ್ತೀಚಿಗೆ ಅದ್ಯಾಕೋ ಮಂಕಾಗಿದ್ದಾಳೆ. ಹನ್ಸಿಕಾ ಸಿನಿಮಾ ರಂಗದಿಂದ ದೂರ ಸರಿಯುವ ನಿರ್ಧಾರ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.. ಅಷ್ಟಕ್ಕೂ ಚಿತ್ರರಂಗದಿಂದ ದೂರಸರಿಯಲು ನಿರ್ಧರಿಸಿದ್ದು ಯಾಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದೆಯಾ? ಹಾಗಾದರೆ ಮುಂದೆ ಓದಿ.

 

 

ಬಾಲಿವುಡ್’ನ ಹೃತಿಕ್ ರೋಷನ್ ಸೇರಿದಂತೆ ದಕ್ಷಿಣದ ಸ್ಟಾರ್ ನಂತರ ಜೊತೆ ನಾಯಕಿಯಾಗಿ ಮಿಂಚಿರುವ ಹನ್ಸಿಕಾ ತನ್ನದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾಳೆ. ಹಾಗಿರೋವಾಗ ಆಕೆ ಮಂಕಾಗಲು ಕಾರಣವೇನೆಂಬ ಪ್ರಶ್ನೆ ಕಾಡೋದು ಸಹಜವೇ. ಆದರೆ ನಿಜಕ್ಕೂ ಈಗ ಹನ್ಸಿಕಾಳ ಬೇಡಿಕೆ ಕುಸಿದಿದೆ. ಆಕೆ ಒಂದೊಳ್ಳೆ ಚಿತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿ ಭರ್ಜರಿ ಗೆಲುವೊಂದಕ್ಕಾಗಿ ಹಪಾಹಪಿಸುತ್ತಿದ್ದಾಳೆ.. ಇತ್ತೀಚಿನ ದಿನಗಳಲ್ಲಿ ಆಕೆ ನಟಿಸಿರುವ ಯಾವ ಸಿನಿಮಾಗಳು ಬರಕತ್ತಾಗಿಲ್ಲ..

ಇನ್ನು ಹನ್ಸಿಕಾ ಮಾತ್ರವೇ ಹೀರೋಯಿನ್ ಆಗಿರೋ ಚಿತ್ರ ಇತ್ತೀಚೆಗೆ ಗೆದ್ದ ಉದಾಹರಣೆಗಳೂ ಇಲ್ಲ. ಬಾಲಿವುಡ್ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಈಕೆ ಕಳೆಗುಂದುತ್ತಿದ್ದಾಳೆ. ಇದೆಲ್ಲದರಿಂದಾಗಿ ಹನ್ಸಿಕಾ ಬೇಡಿಕೆ ಜರ್ರನೆ ಇಳಿಕೆ ಕಂಡಿದೆ. ಅದರ ಎಫೆಕ್ಟು ಯಾವ ಪರಿ ಇದೆ ಎಂದರೆ, ಒಂದು ಕಾಲದಲ್ಲಿ ಮುಗಿಬಿದ್ದು ಈಕೆಯ ಕಾಲ್‌ಶೀಟ್‌ಗಾಗಿ ಕಾದು ಕೂತಿದ್ದವರೂ ಈಗ ಬೇರೆಡೆ ಗಮನ ಹರಿಸಿದ್ದಾರೆ. ಹೊಸಾ ಅವಕಾಶಗಳು ಸಿಕ್ಕರೂ ಸಂಭಾವನೆ ಅರ್ಧಕ್ಕರ್ಧ ಕಡಿಮೆ ಮಾಡಿ ಪ್ರಪೋಸಲ್ ಮುಂದಿಡುತ್ತಿರೋದರಿಂದ ಹನ್ಸಿಕಾ ನಿಜಕ್ಕೂ ಕಂಗಾಲಾಗಿದ್ದಾಳಂತೆ. ಹೇಗಾಗಿಯೇ ಸಿನಿಮಾ ಕ್ಷೇತ್ರ ಬಿಟ್ಟು ಬೇರೆ ಉದ್ಯಮಕ್ಕೆ ಕೈ ಜೋಡಿಸುವ ಬಗ್ಗೆ ಹನ್ಸಿಕಾ ಚಿಂತನೆ ನಡೆಸಿದ್ದಾಳೆ ಎಂಬ ಮಾತುಗಳು ಕೇಳಿಬರುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top