fbpx
ಹೆಚ್ಚಿನ

ಶ್ರಾವಣ ಶುಕ್ರವಾರದಂದು ಮಹಿಳೆಯರು ಹೀಗೆ ಮಾಡಿದರೆ ಅಷ್ಟ ಐಶ್ವರ್ಯಗಳು ಪ್ರಾಪ್ತಿಯಾಗಿ ನಿಮ್ಮ ಎಲ್ಲ ಸಮಸ್ಯೆಗಳು ಪರಿಹಾರವಾಗುವುದು.

ಶ್ರಾವಣ ಮಾಸ ಪರಮ ಪವಿತ್ರವಾದ ಮಾಸ. ಅದರಲ್ಲೂ ಶುಕ್ರವಾರದ ದಿನ ಮಹಿಳೆಯರು ಭಕ್ತಿ, ಶ್ರದ್ಧೆಗಳಿಂದ ನಿಷ್ಠೆಯಿಂದ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿದರೆ , ಅಷ್ಟ ಐಶ್ವರ್ಯಗಳು ಬಂದೊದಗುತ್ತವೆ ಎಂದು ಹಿರಿಯರು ಹೇಳುತ್ತಾರೆ.
ಅದರಲ್ಲೂ ಮುಖ್ಯವಾಗಿ ಶ್ರಾವಣ ಮಾಸದಲ್ಲಿ ದುರ್ಗಾ ದೇವಿಯನ್ನು ಮಂಗಳವಾರ ಮತ್ತು ಶುಕ್ರವಾರದ ದಿನಗಳಲ್ಲಿ ಪೂಜಿಸಿದರೆ ಇನ್ನೂ ಉತ್ತಮ. ಅದರಿಂದ ಸಾಕಷ್ಟು ಪುಣ್ಯ ಫಲಗಳು ಪ್ರಾಪ್ತಿಯಾಗುತ್ತವೆ. ಅಷ್ಟೇ ಅಲ್ಲದೆ ಐಶ್ವರ್ಯಗಳು ಲಭಿಸುತ್ತವೆ. ಇನ್ನು ಮಂಗಳವಾರ ,ಶುಕ್ರವಾರ ತಪ್ಪದೇ ದುರ್ಗಾದೇವಿಯನ್ನು ಪೂಜಿಸಿ ದೇವಾಲಯಕ್ಕೆ ತೆರಳಿ ತುಪ್ಪದ ದೀಪವನ್ನು ಹಚ್ಚಬೇಕು.

ಮುಖ್ಯವಾಗಿ ಮಂಗಳವಾರ , ಶುಕ್ರವಾರ ಶ್ರಾವಣ ಮಾಸದಲ್ಲಿ ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಅಂಗಳದಲ್ಲಿ ರಂಗೋಲಿಯನ್ನು ಹಾಕಿ ಹೊಸ್ತಿಲನ್ನು ನೀರಿನಿಂದ ತೊಳೆದು ಪುಷ್ಪಗಳಿಂದ ಅಲಂಕರಿಸಿ ಮನೆಯನ್ನು ಶುಚಿಯಾಗಿ ಶುಭ್ರವಾಗಿ ಇಟ್ಟುಕೊಳ್ಳುವುದರಿಂದ ಶ್ರೀ ಮಹಾಲಕ್ಷ್ಮಿ ಅಲ್ಲಿ ವಾಸವಾಗಿರುತ್ತಾಳೆ.

 

 

 

ಪೂಜಾ ಮಂದಿರದಲ್ಲಿ ಅರಿಶಿನ ,ಕುಂಕುಮ ,ಗಂಧ, ಧೂಪದ ಬತ್ತಿ ಮತ್ತು ನಾನಾ ಬಗೆಯ ಪುಷ್ಪಗಳಿಂದ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಬೇಕು, ಅಲಂಕರಿಸಬೇಕು. ಹಾಗೆ ಮಲ್ಲಿಗೆ, ಜಾಜಿ, ಕಸ್ತೂರಿಯನ್ನು ಸಮರ್ಪಿಸಿ ಮತ್ತು ಅಷ್ಟೋತ್ತರ ಶತನಾಮಾವಳಿಗಳಿಂದ ಪ್ರಾರ್ಥಿಸಬೇಕು.ಸಾಧ್ಯವಾದರೆ ಕ್ಷೀರದ ಅನ್ನವನ್ನು ಮಾಡಿ ಶ್ರೀ ಮಹಾಲಕ್ಷ್ಮಿಗೆ ನೈವೇದ್ಯವಾಗಿ ಸಮರ್ಪಿಸಬೇಕು. ನಂತರ ದೀಪದ ಆರತಿ, ಕರ್ಪೂರದ ಆರತಿಯನ್ನು ಮಾಡಿ ಅವುಗಳನ್ನು ಸ್ವೀಕರಿಸಬೇಕು .
ಶುಕ್ರವಾರದ ದಿನ ತಪ್ಪದೇ ಮಂಗಳಸೂತ್ರಕ್ಕೂ ಕೂಡ ಅರಿಶಿನ , ಕುಂಕುಮ ಹಚ್ಚಿ ಪೂಜಿಸಬೇಕು. ಇದರಿಂದ ಸೌಭಾಗ್ಯ ವೃದ್ಧಿಸುತ್ತದೆ. ಅಷ್ಟೇ ಅಲ್ಲ ಸುಖ ಸಂತೋಷ ಪ್ರಾಪ್ತಿಯಾಗುತ್ತದೆ.ಪತಿಗೆ ಧೀರ್ಘಾಯಸ್ಸು ಪ್ರಾಪ್ತಿಯಾಗುತ್ತದೆ . ಶುಕ್ರವಾರ,ಮಂಗಳವಾರ ದಾರಿದ್ರ್ಯ ತೊಲಗಿ ಹೋಗಿ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗಬೇಕಾದರೆ ತುಪ್ಪದ ದೀಪವನ್ನು ಗೋದೂಳಿ ಸಮಯದಲ್ಲಿ ಹಚ್ಚಬೇಕು.

ಇದರಿಂದ ಸರ್ವ ರೀತಿಯಲ್ಲೂ ಶ್ರೇಯಸ್ಕರ ಉಂಟಾಗಿ ಯಶಸ್ಸು ಪ್ರಾಪ್ತಿಯಾಗುತ್ತದೆ . ಶುಕ್ರವಾರ, ಮಂಗಳವಾರ ಶ್ರಾವಣ ಮಾಸದಲ್ಲಿ ಯಾವುದೇ ದಿನವಾಗಲಿ ಮನೆಗೆ ಮುತ್ತೈದೆಯರು ಬಂದರೆ ಅವರಿಗೆ ಬರೀ ಕೈಯಲ್ಲಿ ಕಳಿಸಬಾರದು. ಯಥಾನುಶಕ್ತಿ ದಾನ ಧರ್ಮಗಳನ್ನು ಮಾಡಬೇಕು.
ಏನಿಲ್ಲವೆಂದರೂ ಕೂಡ ಅತಿಥಿ ಸತ್ಕಾರ ಮಾಡಬೇಕು. ಸಾಧ್ಯವಾದಷ್ಟು ಸುಮಂಗಲಿಯರಿಗೆ ಅರಿಶಿನ, ಕುಂಕುಮ, ವೀಳ್ಯದೆಲೆ, ಅಡಿಕೆ, ಹೂಗಳನ್ನು ತಪ್ಪದೆ ನೀಡಿ ನಮಸ್ಕರಿಸಿ ಪ್ರಾರ್ಥಿಸಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಅಷ್ಟೈಶ್ವರ್ಯಗಳು ಸಿದ್ಧಿಸುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top