ಸಮಾಚಾರ

ಪ್ರವಾಹ ಸಂತ್ರಸ್ತರ ನೆರವಿಗೆ ಮುಂದಾದ ಕಿಚ್ಚನ ಅಭಿಮಾನಿಗಳು- 8000 ಚಪಾತಿ ರವಾನಿಸಲು ಯೋಜನೆ.

ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಭೂಪಾತಕ್ಕೆ ಸಿಲುಕಿ ಅಲ್ಲೋಲ ಕಲ್ಲೋಲವಾಗಿರುವ ‘ಕೊಡುಗು’ ಸೇರಿದಂತೆ ರಾಜ್ಯದ ಇತರ ಪ್ರವಾಹ ಪೀಡಿತ ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಕಿಚ್ಚನ ಅಭಿಮಾನಿಗಳ ಹೃದಯ ಮಿಡಿದಿದೆ. ಪ್ರವಾಹ ಸಂತ್ರಸ್ತರಿಗೆ ನೆರವಾಗುವಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮನವಿ ಮಾಡಿಕೊಂಡಿದ್ದರು… ಈ ಬಗ್ಗೆ ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದ ಸುದೀಪ್ ತಮ್ಮ ಸಂತ್ರಸ್ತರಿಗೆ ಸಹಾಯ ಮಾಡಿ ಕಾಪಾಡುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರು.

ನೆಚ್ಚಿನ ನಟನ ಮನವಿಗೆ ಸ್ಪಂದಿಸಿರುವ ಸುದೀಪ್ ಅಭಿಮಾನಿಗಳು ಪ್ರವಾಹ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡಲು ಮುಂದಾಗಿದ್ದಾರೆ.. ನೆಲಮಂಗಲ ಕಿಚ್ಚ ಸುದೀಪ್ ಅಭಿಮಾನಿ ಸಂಘದ ವತಿಯಿಂದ ಪ್ರವಾಹದಲ್ಲಿ ಸಿಲುಕಿರುವ ಸಂತ್ರಸ್ತರಿಗಾಗಿ ಎಂಟು ಸಾವಿರ ಚಪಾತಿ ರವಾನಿಸಲು ಯೋಜಿಸಿದ್ದು ಇದರ ಜೊತೆ ಮೂಲಭೂತ ಅಗತ್ಯಗಳಾದ ಬಟ್ಟೆ,ಔಷದಿ, ಹೊದಿಕೆ ಮುಂತಾದ ವಸ್ತುಗಳನ್ನೂ ಪೂರೈಸುವ ಯೋಜನೆಯನ್ನು ಕಿಚ್ಚನ ಅಭಿಮಾನಿ ಸಂಘದವರು ಹಾಕಿಕೊಂಡಿದ್ದಾರೆ.

ನೆರವಾಗುವಂತೆ ಸುದೀಪ್ ಮಾಡಿದ್ದ ಟ್ವೀಟ್:
“ಅತಿಯಾದ ಮಳೆ ಮತ್ತು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿಲುಕಿರುವ ಸಂತ್ರಸ್ತರ ಸಹಾಯಕ್ಕೆ ಧಾವಿಸುವಂತೆ ನನ್ನ ಎಲ್ಲಾ ಅಭಿಮಾನಿ ಸಂಘಗಳಲ್ಲಿ ವಿನಂತಿಸಿಕೊಳ್ಳುತ್ತೇನೆ.. ದಯವಿಟ್ಟು ನಿಮ್ಮ ಕೈನಲ್ಲಿ ಸಾದ್ಯವಾಗುವಷ್ಟೂ ಸಹಾಯಮಾಡಿ,, ಇದೇ ನೀವೆಲ್ಲರೂ ಸೇರಿ ನನಗೆ ನೀಡುವ ಅತ್ಯುತ್ತಮ ಕೊಡುಗೆಯಾಗಿದೆ. ದಯವಿಟ್ಟು ನಿಮ್ಮ ಶಕ್ತಿಮೀರಿ ಕೆಲಸ ಮಾಡಿ,, ಇವರೆಲ್ಲಾ ನಮ್ಮ ಜನರು ಅವರನ್ನು ನಾವು ಉಳಿಸಿಕೊಳ್ಳಬೇಕಿದೆ. ಸರ್ಕಾರ ಕೂಡ ಈ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ” ಎಂದು ಸುದೀಪ್ ಟ್ವೀಟ್ ಮಾಡಿದ್ದರು.

 

 

 

ತತ್ತರಿಸಿರುವ ಕೊಡಗು:
ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು ಮಹಾ ಮಳೆಗೆ ಇಡೀ ಕೊಡಗು ಜಿಲ್ಲೆಯೇ ಅಕ್ಷರಶಃ ಕೊಚ್ಚಿಹೋಗಿದೆ. ಭಾರಿ ಬಿರುಗಾಳಿ, ಮಹಾಮಳೆ ಮತ್ತು ಭೂಕುಸಿತದಲ್ಲಿ 8 ಮಂದಿ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದ್ದು 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈವರೆಗೂ 500ಕ್ಕೂ ಹೆಚ್ಚು ಮನೆಗಳು ಕುಸಿದಿವೆ ಎಂದು ವರದಿಯಾಗಿದೆ.

 

 

ಕೊಡಗು ಜಿಲ್ಲೆಯಲ್ಲಿ ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಾಜ್ಯ ಹೆದ್ದಾರಿ ಪೂರ್ತಿ ಕೊಚ್ಚಿ ಹೋಗಿದೆ. ಘಟ್ಟ ಪ್ರದೇಶಗಳಲ್ಲಿ ಮಳೆಯ ಅಬ್ಬರ ಸ್ವಲ್ಪವೂ ಕಡಿಮೆ ಆಗಿಲ್ಲವಾದ್ದರಿಂದ ಈ ಎರಡೂ ಘಾಟಿ ಹೆದ್ದಾರಿಗಳಲ್ಲಿ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ..ಕುಶಾಲನಗರ, ಮಡಿಕೇರಿ, ವಿರಾಜಪೇಟೆಗಳು ಜಲಾವೃತಗೊಂಡಿದ್ದು ಮಡಿಕೇರಿ, ವಿರಾಜಪೇಟೆ, ಮಡಿಕೇರಿ, ಮಂಗಳೂರು, ಹಟ್ಟಿಹೊಳೆ, ಸೋಮವಾರಪೇಟೆಗಳಲ್ಲಿ ರಸ್ತೆಗಳು ನೀರು ತುಂಬಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಳೆದುಕೊಂಡಿವೆ. ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಗ್ರಾಮಗಳು ಕಗ್ಗತಲಲ್ಲಿ ಮುಳುಗಿವೆ. ಜಿಲ್ಲೆಯಾದ್ಯಂತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸಂತ್ರಸ್ತ ಜನರು ರಕ್ಷಣೆಗಾಗಿ ಎದುರು ನೋಡುತ್ತಿದ್ದಾರೆ.

ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದು ಅಗತ್ಯ ನೆರವುಗಳನ್ನು ಪಡೆಯುವಂತೆ, ಜನರ ರಕ್ಷಣೆಗೆ ಹೆಲಿಕಾಪ್ಟರ್ ಗಳನ್ನು ಬಳಸುವಂತೆ ಕೂಡ ಸೂಚನೆ ನೀಡಿದ್ದಾರೆ. ಜಿಲ್ಲಾಡಳಿತ ಜನತೆಯ ರಕ್ಷಣೆಗೆ ಹೆಲಿಕಾಪ್ಟರ್ ತರಿಸಿದೆ. ಸಂತ್ರಸ್ತರಿಗೆ ಹಾಸಿಗೆ, ಆಹಾರ ಧಾನ್ಯ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸಲು ಸಹಾಯ ಮಾಡುವಂತೆ ಸಮುದಾಯದ ಮುಖಂಡರು ಮನವಿ ಮಾಡಿಕೊಂಡಿದ್ದಾರೆ. ‘ಡೊನೆಟ್ ಕೊಡಗು’ ಎನ್ನವ ಹೆಸರಿನಲ್ಲಿ ಪರಿಹಾರ ನಿಧಿ ಸಂಗ್ರಹಿಸಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top