ಸಮಾಚಾರ

ಈ ಜಲಪಾತದ ನೀರು ಒಂದು ಹನಿಯೂ ಪಾಪಿಗಳ ಮೈ ಮೇಲೆ ಬೀಳೋದಿಲ್ಲವಂತೆ ,ಏನ್ ಇದು ಮಾಯೆ ನೀವೇ ನೋಡಿ

ನಮ್ಮ ದೇಶದಲ್ಲಿರುವ ಸೌಂದರ್ಯ ಸೊಭಗನ್ನು ನೋಡಿ ಆನಂದ ಪಡಲು ನಮಗೆ ಎರಡು ಕಣ್ಣು ಸಾಲದು. ಈ ದೇಶದ ಉದ್ದಗಲಕ್ಕೂ ತಿರುಗಿದರೂ, ಇಲ್ಲಿ ಇರುವಂತಹ ಅತ್ಯದ್ಭುತ, ಇತಿಹಾಸ ಭರಿತವಾದ ಸ್ಥಳಗಳನ್ನು ನೋಡಿ ತಿಳಿದುಕೊಳ್ಳಲು ಒಂದು ಜನ್ಮ ಖಂಡಿತವಾಗಿಯೂ ಎಂದಿಗೂ ಸಾಲುವುದಿಲ್ಲ.

ದೇಶದಲ್ಲಿ ಅನೇಕ ಜಲಪಾತಗಳಿದ್ದು ಒಂದರಕ್ಕಿಂದ ಮತ್ತೊಂದು ನೋಡಲು ನಯನಮನೋಹರವಾಗಿವೆ. ಅದರಲ್ಲಿ ವಸುಧಾರ ಫಾಲ್ಸ್ ಕೂಡ ಒಂದು ಇದು ಕೂಡ ನಯನಮನೋಹರವಾಗಿದೆ. ಸುಮಾರು 400 ಅಡಿ ಎತ್ತರದಿಂದ ಧುಮುಕುವ ಜಲಪಾತ, ಅಲ್ಲಿ ಬೀಸುತ್ತಿದ್ದ ಗಾಳಿಗೆ, ನೀರು ಗಾಳಿಯಲ್ಲಿ ಬೆರೆತು ಜಿಡಿಯಾಗಿ ನೆಲವನ್ನು ಮುಟ್ಟದೆಲೆ ಮಾಯವಾಗುತ್ತದೆ. ಆ ಜಲಪಾತದ ನೀರು ಹಾಗು ಬಿಸಿಲಿನ ಆಟದಲ್ಲಿ, ವಸುಧಾರೆಯ ಬಳಿ ಒಂದು ಸುಂದರವಾಗಿರುವ ಕಾಮನಬಿಲ್ಲು ಮೂಡುತ್ತದೆ.

 

 

ಈ ಜಲಪಾದ ಬಗ್ಗೆ ಒಂದು ವಿಶೇಷತೆ ಇದೂ ಯಾರು ಪೂಣ್ಯವಂತರೋ ಅವರ ಮೇಲೆ ಅಷ್ಟೇ ನೀರು ಬೀಳುತ್ತದೆ. ಪಾಪಿಗಳ ಮೇಲೆ ಬೀಳುವುದಿಲ್ಲ ಎಂದು ತಿಳಿದು ಬಂದಿದೆ. ಒಂದು ವೇಳೆ ನೀವು ಪಾಪಿಗಳಾಗಿದ್ದರೆ ವಸುಧಾರ ಫಾಲ್ಸ್‌ ನಿಮ್ಮ ಮೈಯನ್ನು ಮುಟ್ಟುವುದಿಲ್ವಂತೆ.

ಎಲ್ಲಿದೆ ಈ ವಸುಧಾರ ಫಾಲ್ಸ್:
ಈ ಸ್ಥಳ ಬದ್ರಿನಾಥ್‌ ದಿಂದ ಸುಮಾರು 8 ಕಿ.ಮೀ ದೂರದಲ್ಲಿ ಇದೆ. ಬದ್ರಿನಾಥ ಯಾತ್ರೆಗೆ ಹೋಗುವವರು ಈ ಜಲಪಾತಕ್ಕೆ ಭೇಟಿ ನೀಡಿ ಹೋಗುತ್ತಾರೆ ಎಂದು ತಿಳಿದು ಬಂದಿದೆ.

ಈ ಜಲಪಾತದ ಸಮೀಪಕ್ಕೆ ಲಕ್ಷ್ಮೀಬನ ಎಂಬ ಸಮತಟ್ಟಾದ ಜಾಗಕ್ಕೆ ಇದೆ. ಇಲ್ಲಿ ನಕುಲ ತನ್ನ ದೇಹತ್ಯಾಗ ಮಾಡಿದನೆಂದು ಹೇಳುತ್ತಾರೆ. ಎದುರು ನೋಡಿದರೆ ಸುಂದರ ಕಣಿವೆ, ಹಿಂದೆ ಎತ್ತರವಾದ ಪರ್ವತ, ದೂರದಲ್ಲಿ ವಸುಧಾರೆ ಇದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top