fbpx
ಸಿನಿಮಾ

ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೇಳಿದ ಮಾತು ಕೇಳಿ- ನಿಜವಾದ ಮಾತು ಅಂತೀರಾ

ಬೆಕ್ಕು ಅಡ್ಡ ಬಂದರೆ ಅಶುಭ ಎಂದು ಕೆಲವರು ಹೇಳುತ್ತಾರೆ. ಹಾಗಾದರೆ ಬೆಕ್ಕು ಅಡ್ಡ ಬಂದಾಗಲೆಲ್ಲಾ ಕೆಲಸ ನಿಂತಿದೆಯಾ? ಇದನ್ನು ಯಾರು, ಯಾವಾಗ ಹೇಗೆ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದ್ದಾರೆ? ಬೆಕ್ಕು ಅಡ್ಡ ಬಂದ್ರೆ ಅಶುಭವಾಗುವುದನ್ನು ಈವರೆಗೆ ಯಾರೂ ಪ್ರಯೋಗಾಲಯದಲ್ಲಿ ಪ್ರಯೋಗ ನಡೆಸಿ ಸಾಧಿಸಿಲ್ಲ. ಇಷ್ಟೆಲ್ಲ ಏಕೆ ಪುರಾಣ ಹೇಳುತ್ತಿದ್ದೀರಾ ಎಂದು ನೀವು ಎಂದುಕೊಳ್ಳುತ್ತಿದ್ದೀರಾ, ಅದಕ್ಕೂ ಒಂದು ಭಲವಾದ ಕಾರಣವಿದೆ. ಮುಂದೆ ಓದಿ

ಕನ್ನಡದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರು ಪ್ರಾಣಿ ಪ್ರಿಯರಾಗಿದ್ದಾರೆ ಎಂಬುದು ನಿಮಗೆಲ್ಲ ಗೊತ್ತಿರುವ ವಿಚಾರ. ದರ್ಶನ ರವರು ತಮ್ಮ ಫಾರ್ಮ್ ಹೌಸ್ ನಲ್ಲಿ ಅನೇಕ ಪ್ರಾಣಿಗಳನ್ನು ಸಾಕಿ ಸಲುಹುತ್ತಿದ್ದಾರೆ. ಇಷ್ಟೇ ಅಲ್ಲದೆ ಮೈಸೂರಿನಲ್ಲಿ ಇರುವ ಪ್ರಾಣಿ ಮೃಗಾಲಯದಲ್ಲಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ದರ್ಶನ ಹಾಗೇ ಅವರ ಪತ್ನಿ ಕೂಡ ಪ್ರಾಣಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ.

ದರ್ಶನ ಪತ್ನಿ ವಿಜಯಲಕ್ಷ್ಮಿ ಅವರು ಬೆಕ್ಕುಗಳನ್ನು ಸಾಕಿದ್ದಾರೆ, ಹಲವು ಪ್ರಭೇದದ ಬೆಕ್ಕುಗಳನ್ನು ಸಾಕಿರುವ ವಿಜಯಲಕ್ಷ್ಮಿ ಅವರು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ತಾವು ಸಾಕಿರುವ ಕಪ್ಪು ಬಣ್ಣದ ಬೆಕ್ಕಿನ ಫೋಟೋ ಪೋಸ್ಟ್ ಮಾಡಿ ‘ಕಪ್ಪು ಬೆಕ್ಕು ಅಡ್ಡ ಬಂದರೆ ಕೆಡಕು ಆಗುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ, ನೀವು ಎಲ್ಲಾದರೂ ಕಪ್ಪು ಬೆಕ್ಕು ಕಂಡರೆ, ಅದನ್ನ ಸಾಕಿ. ಯಾಕಂದ್ರೆ, ಅದು ಒಳ್ಳೆಯ ಪ್ರಾಣಿ. ಅದಕ್ಕೆ ಪ್ರೀತಿ ಕೊಡುವುದು ಅವಶ್ಯಕ” ಎಂದು ಬರೆದಿದ್ದಾರೆ. ವಿಜಯಲಕ್ಸ್ಮಿ ಅವರ ಬೆಕ್ಕಿನ ಜೊತೆಗೆ ಇರುವ ಚಿತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ತಿಳಿದು ಬಂದಿದೆ.

They say crossing a black cat is bad luck but if u see one….be sure to pet it because it’s a nice animal that deserves to be loved pic.twitter.com/KmlStb7phI

— VijayalakshmiDarshan (@vijayaananth2) August 12, 2018

ಇವರ ಮಾತಿನ ಅರ್ಥ ಇಷ್ಟೇ ಯಾವುದೇ ಪ್ರಾಣಿಗಳಿಂದ ಯಾರಿಗೂ ಕೆಡಗಾಗುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top