ಹೆಚ್ಚಿನ

ಕಪ್ಪುದಾರವನ್ನು ಯಾಕೆ ಕಟ್ಟಿಕೊಳ್ಳುತ್ತಾರೆ ?ಕಪ್ಪು ದಾರಕ್ಕೂ ಹಣದ ಸಮಸ್ಯೆಗೂ ಇರುವ ಸಂಬಂಧವೇನು?ತಿಳ್ಕೊಳ್ಳಿ

ಕಪ್ಪು ದಾರವನ್ನು ಕಟ್ಟಿಕೊಂಡರೆ ಆಗುವ ಲಾಭಗಳು ಏನೇನು ? ಮತ್ತು ಹೀಗೆ ಮಾಡಿದರೆ ಹಣದ ಅಭಾವ ಬರುವುದಿಲ್ಲವಂತೆ. ಇದು ನಿಮಗೆ ಗೊತ್ತಾ ?

ಈಗ ಹೆಚ್ಚಿನ ಯುವಕ-ಯುವತಿಯರು ಕಪ್ಪು ದಾರವನ್ನು ಕಟ್ಟಿ ಕೊಳ್ಳುತ್ತಾರೆ.ಕೆಟ್ಟ ಮತ್ತು ನಕಾರಾತ್ಮಕ ದೃಷ್ಟಿಯನ್ನು ತಡೆಯಲು ಮತ್ತು ಹೋಗಲಾಡಿಸಲು ಕೇವಲ ಕಪ್ಪು ಬಣ್ಣದಿಂದ ಮಾತ್ರ ಸಾಧ್ಯ. ಕೆಟ್ಟ ಪ್ರಭಾವ ನಿಮ್ಮ ಮೇಲೆ ಬೀರಬಾರದು ಅಂದುಕೊಂಡರೆ ಕಪ್ಪು ದಾರವನ್ನು ಕಟ್ಟಿ ಕೊಳ್ಳಬೇಕು. ಕಪ್ಪು ದಾರವನ್ನು ಕಟ್ಟಿಕೊಂಡರೆ ನಿಮ್ಮ ಮನಸ್ಸಿನ ಆಸೆಗಳು ಬೇಗನೆ ಈಡೇರುತ್ತವಂತೆ.
ಆದರೆ ಎಲ್ಲಿ ? ಹೇಗೆ ? ಕಟ್ಟಿಕೊಳ್ಳಬೇಕು ಎಂಬುದನ್ನು ನೀವು ತಿಳಿದಿರಬೇಕು.

 

 

 

ಪ್ರತಿ ಮನುಷ್ಯರ ದೇಹಕ್ಕೆ ಪಂಚಭೂತಗಳು ತುಂಬಾ ಅವಶ್ಯಕ. ಅಂತಹ ಪಂಚಭೂತಗಳು ನಮ್ಮ ದೇಹಕ್ಕೆ ತಲುಪದಂತೆ ಈ ಕೆಟ್ಟ ದೃಷ್ಟಿ ಮಾಡುತ್ತದೆ. ಹೀಗೆ ಆಗಬಾರದು ಎಂದರೆ ಕಪ್ಪು ದಾರವನ್ನು ಕತ್ತಿನಲ್ಲಿ ಕಟ್ಟಿಕೊಳ್ಳಬೇಕು . ಹೀಗೆ ಮಾಡಿದರೆ ಸಕಾರಾತ್ಮಕ ಶಕ್ತಿ ಲಭಿಸುತ್ತದೆ .
ಕಪ್ಪು ದಾರವನ್ನು ಸೊಂಟ, ಕೈಗಳಿಗೆ ಕಟ್ಟುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ದೇಹದ ಸಮತೋಲನ ಚೆನ್ನಾಗಿರುತ್ತದೆ. ಇಷ್ಟೇ ಅಲ್ಲದೆ ಕಪ್ಪು ದಾರಕ್ಕೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಶಕ್ತಿ ಇದೆ. ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

ಒಂದು ಕಪ್ಪು ದಾರವನ್ನು ಖರೀದಿಸಿ, ಅದಕ್ಕೆ ಒಂಬತ್ತು ಗಂಟು ಬಿಗಿದು ಮಂಗಳವಾರ ಅಥವ ಶನಿವಾರ ಆಂಜನೇಯನ ದೇವಾಲಯಕ್ಕೆ ಭೇಟಿ ನೀಡಿ, ಸ್ವಾಮಿಯ ಕೇಸರಿಯನ್ನು ಅಥವಾ ಕುಂಕುಮವನ್ನು ಹಚ್ಚಬೇಕು. ನಂತರ ಅದನ್ನು ಮನೆಯ ದ್ವಾರದಲ್ಲಿ ಕಟ್ಟಬೇಕು. ಹೀಗೆ ಮಾಡಿದರೆ ಹಣದ ಅಭಾವ ಬರುವುದಿಲ್ಲವಂತೆ. ಒಮ್ಮೆ ನೀವು ಕೂಡ ಪ್ರಯತ್ನ ಮಾಡಿ ನೋಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top