ಸಮಾಚಾರ

ಅಡ್ವಾಣಿಯವರನ್ನು ಬಿಟ್ರೇ ವಾಜಪೇಯಿಗೆ ಆಪ್ತರಾಗಿದ್ದ ಸ್ನೇಹಿತ ಯಾರು ಗೊತ್ತಾ?

ದೇಶದ ಜನರ ಮನಸ್ಸಿನಲ್ಲಿ ಧೀರ್ಘವಾಗಿ ನೆಲೆನಿಂತವರು ಧೀಮಂತ ರಾಜಕೀಯ ನಾಯಕ, ಅಜಾತಶತ್ರು, ಸಜ್ಜನ ರಾಜಕಾರಣಿ, ಅಟಲ್ ಬಿಹಾರಿ ವಾಜಪೇಯಿ. ಐದು ದಶಕಗಳ ಕಾಲ ಸಂಸತ್ತನ್ನು ಪ್ರತಿನಿಧಿಸಿರುವ ಹೆಗ್ಗಳಿಕೆ ಅವರದು,. ಇಂಥಾ ರಾಜಕೀಯ ಮುತ್ಸದ್ದಿ ಅವರಿಗೆ ರಾಜಕೀಯದಲ್ಲಿ ಅತ್ಯಂತ ಆತ್ಮೀಯ ಗೆಳೆಯ ಎಲ್.ಕೆ.ಅಡ್ವಾಣಿ ಎಂಬ ವಿಚಾರ ಪ್ರತಿಯೊಬ್ಬರಿಗೂ ಗೊತ್ತು. ಆದರೆ ಅಡ್ವಾಣಿಯನ್ನು ಬಿಟ್ಟರೆ ವಾಜಪೇಯೀ ಅವರ ಬೆಸ್ಟ್ ಫ್ರೆಂಡ್ ಯಾರು ಗೊತ್ತಾ? ಇಲ್ಲಿದೆ ಮುಂದೆ ಓದಿ.

 

 

ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅಡ್ವಾಣಿಯನ್ನು ಹೊರತುಪಡಿಸಿದರೆ ಅತ್ಯಂತ ಆಪ್ತರಾಗಿದ್ದ ರಾಜಕಾರಣಿ ಅಂದ್ರೆ ಅದು ಜಾರ್ಜ್ ಫರ್ನಾಂಡಿಸ್.. ಮಂಗಳೂರು ಮೂಲದವರಾಗಿದ್ದ ಜಾರ್ಜ್ ಫರ್ನಾಂಡಿಸ್ ವಾಜಪೇಯಿ ಜೊತೆ ಆತ್ಮೀಯ ಭಾಂದವ್ಯವನ್ನು ಹೊಂದಿದ್ದರು. ವಾಜಪೇಯಿ ಅವರ ಮಂತ್ರಿ ಮಂಡಲದಲ್ಲಿ ರಕ್ಷಣಾ ಸಚಿವರಾಗಿಯೂ ಜಾರ್ಜ್ ಫರ್ನಾಂಡಿಸ್ ಕೆಲಸ ಮಾಡಿದ್ದರು.

ತುರ್ತು ಪರಿಸ್ಥಿತಿಯ ಸಂದರ್ಭದಿಂದಲೂ ಜೊತೆಯಾಗಿ ಇದ್ದ ವಾಜಪೇಯಿ ಮತ್ತು ಫರ್ನಾಂಡಿಸ್ ನಂತರ ಕೆಲವೊಮ್ಮೆ ಮುನಿಸು/ಭಿನ್ನಾಭಿಪ್ರಾಯ ಮೂಡಿದರು ಒಬ್ಬರನ್ನೊಬ್ಬರು ಬಿಟ್ಟುಕೊಡಲಿಲ್ಲ., ಅದೇ ಅಲ್ಲವೇ ನಿಜವಾದ ಸ್ನೇಹದ ಅಸಲಿ ಗುಣ.. ಇನ್ನು ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧ ನಡೆಯುವಾಗ ಪ್ರಧಾನಿಯಾಗಿದ್ದ ವಾಜಪೇಯಿ ಮತ್ತು ರಕ್ಷಣಾ ಸಚಿವರಾಗಿದ್ದ ಫರ್ನಾಂಡಿಸ್ ಇಬ್ಬರೂ ಒಟ್ಟಾಗಿ ರೂಪಿಸಿದ್ದ ಕಾರ್ಯತಂತ್ರಗಳು ದೇಶದ ಪ್ರಶಂಶೆಗೆ ಪಾತ್ರವಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top