fbpx
ಸಮಾಚಾರ

ವಾಜಪೇಯಿ ಅಂತ್ಯ ಸಂಸ್ಕಾರ ಸ್ಮೃತಿ ಸ್ಥಳದಲ್ಲೇ ನಡೆದಿದ್ದು ಯಾಕೆ ಗೊತ್ತಾ?

ಧೀಮಂತ ರಾಜಕೀಯ ನಾಯಕ, ಅಜಾತಶತ್ರು, ಸಜ್ಜನ ರಾಜಕಾರಣಿ, ಅಟಲ್ ಬಿಹಾರಿ ವಾಜಪೇಯಿ ಚಿರನಿದ್ರೆಗೆ ಜಾರಿ ನಾಲ್ಕು ದಿನಗಳು ಕಳೆದಿವೆ. ದೆಹಲಿಯ ಸ್ಮೃತಿಯಲ್ಲಿ ಅವರ ಪಾರ್ಥಿವ ಶರೀರಕ್ಕೆ ವಿಧಿವಿಧಾನಗಳಿಂದ ಅಂತ್ಯಕ್ರಿಯೆಯೂ ನಡೆಸಿ ಆಗಿದೆ. ಈ ಮಧ್ಯೆ ವಾಜಪೇಯಿ ಅವರ ಬಗೆಗಿನ ಅನೇಕ ಸ್ವಾರಸ್ಯಕರ ಸಂಗತಿಗಳು ಎಲ್ಲೆಡೆ ಸುದ್ದಿಯಾಗುತ್ತಿವೆ.. ಅದರಲ್ಲೂ ಅಂತ್ಯ ಸಂಸ್ಕಾರಕ್ಕೆ ಸ್ಮೃತಿ ಸ್ಥಳವನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ? ಎಂಬ ಕುತೂಹಲ ಹೆಚ್ಚಾಗಿ ಮೂಡುತ್ತಿದೆ.

 

 

ದೆಹಲಿಯ ಸ್ಮೃತಿ ಸ್ಥಳವನ್ನು ಭಾರತಕ್ಕೆ ಸೇವೆ ಸಲ್ಲಿಸಿರುವ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿಯವರ ಅಂತಿಮ ಸಂಸ್ಕಾರಕ್ಕೆ ಮಾತ್ರ ಮೀಸಲಿಡಲಾಗಿದೆ. ಅಂತೆಯೇ ವಾಜಪೇಯಿ ಅವರ ಪಾರ್ಥಿವ ಶರೀರಕ್ಕೂ ಇಲ್ಲೇ ಅಂತಿಮ ಸಂಸ್ಕಾರ ಮಾಡಲಾಗಿದೆ. ಈ ಸ್ಥಳದ ಪೂರ್ಣ ಹೆಸರು ರಾಷ್ಟ್ರೀಯ ಸ್ಮೃತಿ ಸ್ಥಳ. ಇದು ಯಮುನಾ ನದಿ ತೀರದಲ್ಲಿದೆ. ದೆಹಲಿಯ ಪ್ರಮುಖ 245 ಎಕರೆ ಪ್ರದೇಶವನ್ನು ಒಳಗೊಂಡ ಜಾಗವನ್ನು ಸ್ಮೃತಿ ಸ್ಥಳವಾಗಿ ಅಭಿವೃದ್ಧಿಪಡಿಸಲು 2013ರಲ್ಲಿ ಯುಪಿಎ ಸರ್ಕಾರ ನಿರ್ಧರಿಸಿತ್ತು.

ಹಾಲಿ ಹಾಗೂ ಮಾಜಿ ರಾಷ್ಟ್ರಪತಿಗಳು, ಉಪ ರಾಷ್ಟ್ರಪತಿಗಳು, ಪ್ರಧಾನಿ ಹಾಗೂ ಇತರ ರಾಷ್ಟ್ರನಾಯಕರ ಅಂತ್ಯಸಂಸ್ಕಾರಕ್ಕೆ ಮೀಸಲಿರಿಸಲಾದ ಸ್ಮೃತಿ ಸ್ಥಳದಲ್ಲಿ ಮಾಜಿ ಪ್ರಧಾನಿಯ ಅಂತ್ಯ ಸಂಸ್ಕಾರ ನಡೆಸಿದರೂ, ದೇಶಕ್ಕೆ ವಾಜಪೇಯಿಯವರು ನೀಡಿದ ಗಣನೀಯ ಕೊಡುಗೆಯನ್ನು ಪರಿಗಣಿಸಿ, ವಾಜಪೇಯಿ ಸ್ಮಾರಕವನ್ನು ಪ್ರತ್ಯೇಕವಾಗಿ ನಿರ್ಮಿಸಲು ಮೋದಿ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವರೊಬ್ಬರು ಬಹಿರಂಗಪಡಿಸಿದ್ದಾರೆ. ಆದರೆ, ಸ್ಥಳ ಯಾವುದು ಎಂದು ಇನ್ನೂ ಘೋಷಣೆಯಾಗಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top