ಸಮಾಚಾರ

ಪ್ರವಾಹ ಸಂತ್ರಸ್ತರಿಗಾಗಿ 1.5 ಲಕ್ಷರೂ ನೀಡಿದಳು ಮೀನು ಮಾರಿ ಟ್ರೋಲಾಗಿದ್ದ ಹುಡುಗಿ.

ತಿಂಗಳ ಹಿಂದೆ ಕಾಲೇಜು ಶಿಕ್ಷಣ ಪಡೆಯಲು ಮೀನು ಮಾರಾಟ ಮಾಡಿ ಟ್ರೋಲ್ ಆಗಿದ್ದ ಹಾನನ್ ಹಮೀದ್ ಎಂಬ ಯುವತಿ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದಾಳೆ. ಧಾರಾಕಾರ ಮಳೆಗೆ ಕೊಚ್ಚಿ ಹೋಗುತ್ತಿರುವ ಕೇರಳ ಪ್ರವಾಹ ಸಂತ್ರಸ್ತರಿಗೆ 1.5 ಲಕ್ಷರೂ ನೀಡಿ ಮಾನವೀಯತೆ ಮೆರೆದಿದ್ದಾಳೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಾನನ್ ನನ್ನ ಹಿಕ್ಷಣಕ್ಕೆ ಸಹಾಯ ಮಾಡಿದ್ದ ಅನೇಕ ಜನರು ಈಗ ಸಂಕಷ್ಟದಲ್ಲಿದ್ದು. ಅವರ ಸಹಾಯವನ್ನು ಹಿಂದಿರುಗಿಸುವ ಅಗತ್ಯವಿದೆ. ಹೀಗಾಗಿ ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

 

 

ನಾನಿರುವ ಪ್ರದೇಶದಲ್ಲಿ ಪರಿಸ್ಥಿತಿ ಸುಧಾರಿಸಿದ್ದು ಓಡಾಡಲು ಸಾಧ್ಯವಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಅನೇಕರ ಮನೆ ಕೊಚ್ಚಿ ಹೋಗಿದೆ, ಆದರೆ ನನಗೆ ಆ ಸಮಸ್ಯೆ ಇಲ್ಲ. ಏಕೆಂದರೆ ಪ್ರವಾಹದಲ್ಲಿ ಕೊಚ್ಚಿ ಹೋಗಲು ನನಗೆ ಮನೆಯೇ ಇಲ್ಲ ಹನನ್ ಹಮೀದ್ ಹೇಳಿದ್ದಾರೆ.. ಆನ್ಲೈನ್ ಮೂಲಕ ಹಣ ರವಾನಿಸಲು ಆಕೆಯ ಬಳಿ ಮೊಬೈಲ್ ಬ್ಯಾಂಕಿಂಗ್ ಸೇವೆ ಇಲ್ಲದ ಕಾರಣ ಸ್ವತಃ ಮುಖ್ಯಮಂತ್ರಿಗಳ ಕಚೇರಿಗೆ ಬಂದು ಚೆಕ್ ಮೂಲಕ ಹಣ ನೀಡಿದ್ದಾರೆ.

ಕಳೆದ ತಿಂಗಳಲ್ಲಿ ಕಾಲೇಜು ಸಮವಸ್ತ್ರ ಹಾಕಿಕೊಂಡು ಮೀನು ಮಾರಾಟ ಮಾಡುತ್ತಿದ್ದರಿಂದ ಈಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. . ಶಿಕ್ಷಣ ಪಡೆಯಲು ಅಗತ್ಯವಿದ್ದ ಹಣಕ್ಕಾಗಿ ಮೀನು ಮಾರಾಟ ಮಾಡುತ್ತಿದ್ದಳು, ನಂತರ ಆಕೆಯ ನೆರವಿಗೆ ಹಲವು ಮಂದಿ ಮುಂದೇ ಬಂದು ಸಹಾಯದ ಅಸ್ತ ಚಾಚಿದ್ದರು. ಬಡ ಕುಟುಂಬ ಹುಡುಗಿಯಾಗಿರುವ ಹಮೀದ್ ತನ್ನ ತಾಯಿ ಹಾಗೂ ತಮ್ಮನ ಜೊತೆ ಜೀವನ ನಿರ್ವಹಣೆ ಮತ್ತು ಶಿಕ್ಷಣಕ್ಕಾಗಿ ಸಣ್ಣ ಪುಟ್ಟ ಕೆಲಸ ಮಾಡುತ್ತಾ ಹಣ ಗಳಿಸುತ್ತಿದ್ದಳು.

ಕೇರಳ ಪ್ರವಾಹ ಅಪ್ ಡೇಟ್:
ಕೇರಳದಲ್ಲಿ ಸುರಿಯುತ್ತಿರುವ ಮಹಾಮಳೆ ಕ್ಷಣ ಕ್ಷಣಕ್ಕೂ ತನ್ನ ರೌದ್ರಾವತಾರವನ್ನು ಹೆಚ್ಚಿಸುತ್ತಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ ಮಳೆಯಿಂದಾಗಿ ಬರೊಬ್ಬರಿ 106 ಮಂದಿ ಸಾವಿಗೀಡಾಗಿದ್ದು, ಇದರೊಂದಿಗೆ ಸವಾನಿ ಸಂಖ್ಯೆ 400ಕ್ಕೆ ಏರಿಕೆಯಾಗಿದೆ.ಸುಮಾರು 2 ಲಕ್ಷ ಮಂದಿ ಪ್ರವಾಹ ಸಂತ್ರಸ್ಥರ ಕ್ಯಾಂಪ್ ಗಳಲ್ಲಿದ್ದಾರೆ. ಕೇರಳದ 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಇಂದು ರಾಷ್ಟ್ರೀಯ ವಿಪತ್ತು ದಳದ 35 ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top