ಸಮಾಚಾರ

ಪ್ರವಾಹ ಸಂತ್ರಸ್ತರಿಗಾಗಿ ಅಗತ್ಯ ವಸ್ತುಗಳನ್ನು ಹೊತ್ತು ಕೊಡಗಿಗೆ ಹೊರಟ ಶಿವಣ್ಣ ಅಭಿಮಾನಿಗಳು.

ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಭೂಪಾತಕ್ಕೆ ಸಿಲುಕಿ ಅಲ್ಲೋಲ ಕಲ್ಲೋಲವಾಗಿರುವ ‘ಕೊಡುಗು’ ಸೇರಿದಂತೆ ರಾಜ್ಯದ ಇತರ ಪ್ರವಾಹ ಪೀಡಿತ ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಶಿವಣ್ಣನ ಅಭಿಮಾನಿಗಳ ಹೃದಯ ಮಿಡಿದಿದೆ. ಪ್ರವಾಹ ಸಂತ್ರಸ್ತರಿಗೆ ನೆರವಾಗುವಂತೆ ಹ್ಯಾಟ್ರಿಕ್ ಹೀರೊ ಶಿವಕರಕುಮಾರ್ ಮನವಿ ಮಾಡಿಕೊಂಡಿದ್ದರು… ಪ್ರವಾಹದ ಬಗ್ಗೆ ವಿಡಿಯೋವೊಂದನ್ನು ಬಿಟ್ಟಿದ್ದ ಶಿವಣ್ಣ ಪ್ರವಾಹ ಸಂತ್ರಸ್ತರಿಗೆ ಸಾಧ್ಯವಾದಷ್ಟು ಸಹಾಯ ಮಾಡಿ ಅವರನ್ನು ಕಾಪಾಡುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಶಿವಣ್ಣನ ಮನವಿ ಅಭಿಮಾನಿಗಳು ಉತ್ಸಾಹದಿಂದ ಸ್ಪಂದಿಸಿದ್ದಾರೆ.

 

 

ಶಿವಣ್ಣನ ಮನವಿಯಂತೆ ನಿರಾಶ್ರಿತರಿಗೆ ನೆರವಾಗಲು ಮುಂದಾಗಿರುವ ಅಭಿಮಾನಿಗಳು ಪ್ರವಾಹ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡಲು ನಿರ್ಧರಿಸಿ ಕೊಡಗಿಗೆ ಹೊರಟಿದ್ದಾರೆ. ಬೆಂಗಳೂರಿನ ಶಿವಸೈನ್ಯ ಎಂಬ ಶಿವರಾಜಕುಮಾರ್ ಅವರ ಅಭಿಮಾನಿ ಸಂಘದ ವತಿಯಿಂದ ಪ್ರವಾಹದಲ್ಲಿ ಸಿಲುಕಿರುವ ಸಂತ್ರಸ್ತರಿಗಾಗಿ ಕುಡಿಯುವ ನೀರು, ಬ್ರೆಡ್ಡು, ಬಿಸ್ಕೆಟ್, ಸಿದ್ದ ಆಹಾರಗಳು, ಔಷಧ ಸೇರಿದಂತೆ ಅಗತ್ಯ ಸಂಗ್ರಹಿಸಿ ಕೊಡಗಿನ ನಿರಾಶ್ರಿತರಿಗೆ ತಲುಪಿಸಿದ್ದಾರೆ.

 ಮನವಿ ಮಾಡಿಕೊಂಡಿದ್ದ ಶಿವಣ್ಣ: 
“ಕಷ್ಟದಲ್ಲಿರುವ ಕೊಡಗಿನ ಜನತೆಗೆ ಸಾಧ್ಯವಾದಷ್ಟು ನೆರವು ನೀಡಿ, ಯಾವುದೇ ಬೇಧ-ಬಾವವಿಲ್ಲದೇ ಎಲ್ಲರೂ ಒಟ್ಟಾಗಿ ಸಹಾಯ ಮಾಡೋಣ.. ಚಿತ್ರರಂಗದ ಪರವಾಗಿ ನಾವೆಲ್ಲರೂ ಒಟ್ಟಾಗಿ ಕೊಡಗಿನ ಜನರ ಜೊತೆ ಇರುತ್ತೇವೆ, ಎಲ್ಲ ನಟರ ಅಭಿಮಾನಿಗಳು ಮತ್ತು ನಮ್ಮ ಕುಟುಂಬದವರು ನಿಮ್ಮ ಜೊತೆ ಇರುತ್ತೆ” ಎಂದು ವಿಡಿಯೋ ಮೂಲಕ ಶಿವಣ್ಣ ಮನವಿ ಮಾಡಿಕೊಂಡಿದ್ದರು.

 
ವಿಡಿಯೋ ನೋಡಿ👇👇👇

ತತ್ತರಿಸಿರುವ ಕೊಡಗು:
ಕೊಡಗು ಜಿಲ್ಲೆಯಲ್ಲಿ ಬಿಡುವಿಲ್ಲದೇ ಧಾರಾಕಾರ ಮಳೆ ಮುಂದುವರಿದಿದ್ದು ಮಹಾ ಮಳೆಗೆ ಇಡೀ ಕೊಡಗು ಜಿಲ್ಲೆಯೇ ಅಕ್ಷರಶಃ ಕೊಚ್ಚಿಹೋಗಿದೆ. ಭಾರಿ ಬಿರುಗಾಳಿ, ಮಹಾಮಳೆ ಮತ್ತು ಭೂಕುಸಿತದಲ್ಲಿ 10 ಮಂದಿ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದ್ದು 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈವರೆಗೂ 500ಕ್ಕೂ ಹೆಚ್ಚು ಮನೆಗಳು ಕುಸಿದಿವೆ ಎಂದು ವರದಿಯಾಗಿದೆ.

 

 

ಕೊಡಗು ಜಿಲ್ಲೆಯಲ್ಲಿ ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಾಜ್ಯ ಹೆದ್ದಾರಿ ಪೂರ್ತಿ ಕೊಚ್ಚಿ ಹೋಗಿದೆ. ಘಟ್ಟ ಪ್ರದೇಶಗಳಲ್ಲಿ ಮಳೆಯ ಅಬ್ಬರ ಸ್ವಲ್ಪವೂ ಕಡಿಮೆ ಆಗಿಲ್ಲವಾದ್ದರಿಂದ ಈ ಎರಡೂ ಘಾಟಿ ಹೆದ್ದಾರಿಗಳಲ್ಲಿ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ..ಕುಶಾಲನಗರ, ಮಡಿಕೇರಿ, ವಿರಾಜಪೇಟೆಗಳು ಜಲಾವೃತಗೊಂಡಿದ್ದು ಮಡಿಕೇರಿ, ವಿರಾಜಪೇಟೆ, ಮಡಿಕೇರಿ, ಮಂಗಳೂರು, ಹಟ್ಟಿಹೊಳೆ, ಸೋಮವಾರಪೇಟೆಗಳಲ್ಲಿ ರಸ್ತೆಗಳು ನೀರು ತುಂಬಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಳೆದುಕೊಂಡಿವೆ. ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಗ್ರಾಮಗಳು ಕಗ್ಗತಲಲ್ಲಿ ಮುಳುಗಿವೆ. ಜಿಲ್ಲೆಯಾದ್ಯಂತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸಂತ್ರಸ್ತ ಜನರು ರಕ್ಷಣೆಗಾಗಿ ಎದುರು ನೋಡುತ್ತಿದ್ದಾರೆ.

ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಬರಲು ಹಣ ಹಾಗೂ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ರಾಜ್ಯದ ವಿವಿಧ ಸಂಘಟನೆಗಳು ಮುಂದಾಗಿವೆ. ಸಂತ್ರಸ್ತರಿಗೆ ಹಾಸಿಗೆ, ಆಹಾರ ಧಾನ್ಯ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸಲು ಸಹಾಯ ಮಾಡುವಂತೆ ಕೊಡವ ಸಮುದಾಯದ ಮುಖಂಡರು ಮನವಿ ಮಾಡಿಕೊಂಡಿದ್ದಾರೆ. ‘ಡೊನೆಟ್ ಕೊಡಗು’ ಎನ್ನವ ಹೆಸರಿನಲ್ಲಿ ಪರಿಹಾರ ನಿಧಿ ಸಂಗ್ರಹಿಸಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top