ಧಾರಾಕಾರ ಮಳೆಗೆ ಕೊಚ್ಚಿ ಹೋಗುತ್ತಿರುವ ಕೇರಳ ಅಕ್ಷರಶ ಕಂಗಾಲಾಗಿ ಹೋಗಿದೆ. ಕಳೆದೊಂದು ಶತಮಾನದಲ್ಲಿಯೇ ಭೀಕರ ಜಲಪ್ರಳಯಕ್ಕೆ ತುತ್ತಾಗಿರುವ ಕೇರಳದಲ್ಲಿ ಮಳೆರಾಯ ಇನ್ನೂ ಮುಂದುವರೆದಿದ್ದು, ಪ್ರವಾಹದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ರಾಜ್ಯ ಸರ್ಕಾರ, ರಾಜ್ಯದ ಜನತೆ, ಚಿತ್ರರಂಗ, ಸ್ಟಾರ್ ನಟರ ಅಭಿಮಾನಿ ಸಂಘಗಳು ಸೇರಿದಂತೆ ಅನೇಕರು ಸ್ಪಂದಿಸಿದ್ದಾರೆ..
ಕೇರಳದಲ್ಲಿ ಸಂಭವಿಸಿರುವ ಇಂಥ ಭಯಾನಕ ಪ್ರವಾಹಕ್ಕೆ ತುತ್ತಾಗಿ ನಿರಾಶ್ರಿತರಾಗಿರುವ ಜನರಿಗೆ ಬಾಲಿವುಡ್ ನಟಿ ಸನ್ನಿ ಲಿಯೋನ್ ನೆರವಿಗೆ ದಾವಿಸಿದ್ದಾರೇ. .ಮಹಾಮಳೆಗೆ ನುಲುಗಿದ ಸಂತ್ರಸ್ತರ ನೆರವಿಗೆ ಧಾವಿಸಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ಪ್ರವಾಹ ಸಂತ್ರಸ್ತರ ನಿಧಿಗೆ ತಮ್ಮ ಉದಾರ ಮನಸ್ಸಿನಿಂದ ಬರೋಬ್ಬರಿ 5ಕೋಟಿ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ..
ಇದಕ್ಕೂ ಮುಂದೆ ದಕ್ಷಿಣದ ಅನೇಕ ನಟ ನಟಿಯರು ಕೂಡ ಕೇರಳ ಪ್ರವಾಹ ಪೀಡಿತ ಜನರಿಗೆ ಧನಸಹಾಯ ಮಾಡಿದ್ದರು. ರಜಿನಿಕಾಂತ್ ಅವರಂತ ನಟರೇ ಕೇವಲ ಹದಿನೈದು ಲಕ್ಷ ದೇಣಿಗೆ ನೀಡಿ ಕೈತೊಳೆದುಕೊಂಡಿದ್ದರು. ಕೇವಲ ಅವರು ಮಾತ್ರವಲ್ಲ ಯಾವ ಸ್ಟಾರ್ ನಟರೂ ಒಂದು ಕೋಟಿ ಮೀರಿ ಸಹಾಯ ಮಾಡಿರಲಿಲ್ಲ. ಆದರೆ ಸನ್ನಿ ಲಿಯೋನ್ ಐದು ಕೋಟಿ ನೀಡುವ ಮೂಲಕ ಇತರೆ ನಟಿ/ನಟರಿಗೂ ಮಾದರಿಯೆನಿಸಿಕೊಂಡಿದ್ದಾರೆ. ಯಾರೊಬ್ಬರೂ ಕೂಡ ಇಷ್ಟು ದೊಡ್ಡ ಮೊತ್ತದ ದೇಣಿಗೆ ನೀಡಿರಲಿಲ್ಲ.. ಜನರ ಸಂಕಟಕ್ಕೆ ಮಿಡಿಯುವ ಮನಸ್ಥಿತಿಯಿಂದಲೇ ಸನ್ನಿ ಎಲ್ಲರಿಗೂ ಇಷ್ಟವಾಗುತ್ತಾರೆ. ‘ನಾಕಾಣೆ ಪೈಸೆ’ ಸಹಾಯ ಮಾಡಿ ನೂರು ರೂಪಾಯಿ ಪ್ರಚಾರ ಪಡೆಯೋ ನಟರಿಗೆ ಸನ್ನಿ ನಿಜಕ್ಕೂ ಮಾದರಿಯಾಗುತ್ತಾರೆ.
Sunny Leone donates 5 crores to Kerala flood relief…
And Rajinikanth donates 15 lakhs…
Hmm… Porn star is way more generous than superstar…
Superstars are subject to market risk… Please read the offer document carefully before investing… 🙂
– Vinod
— அருண் குமார் (@iamArunkumarM) August 19, 2018
ಸನ್ನಿ ಲಿಯೋನ್ ಅಂದಾಕ್ಷಣ ರೋಮ ರೋಮವೂ ರೋಮಾಂಚವಾದಂತಾಗಿ ಕುಣಿದಾಡುವ ಪಡ್ಡೆಗಳು, ಒಳಗೊಳಗೇ ಸಂಭ್ರಮಿಸುವ ಮಡಿವಂತರಿಗೇನೂ ಇಲ್ಲಿ ಕೊರತೆ ಇಲ್ಲ. ಘನ ಮಾಧ್ಯಮಗಳು ಕೂಡಾ ಆಕೆಯ ಬೆತ್ತಲಿನತ್ತಲೇ ಫೋಕಸ್ ಮಾಡುತ್ತವೆ. ಅದರ ಸುತ್ತಲೇ ಸುದ್ದಿ ಹುಡುಕುತ್ತಾರೆ. ಇದೆಲ್ಲದರಿಂದಾಗಿ ಸನ್ನಿ ಲೊಯೋನ್ ಅಂದರೆ ಕಾಮೋತ್ತೇಜಕ ಸರಕೆಂಬಂತೆಯೇ ಆಗಿಹೋಗಿದೆ.. ಆದ್ರೆ ಅಪ್ಪಿ ತಪ್ಪಿಯೂ ಸನ್ನಿಯ ಮಾನವೀಯ ಮುಖವನ್ನು ತಿಳಿಸುವ ಪ್ರಯತ್ನ ಮಾಡೋದಿಲ್ಲ. ಇನ್ನು ಬಹಿರಂಗವಾಗಿ ಸನ್ನಿ ಬಗ್ಗೆ, ಆಕೆಯ ಜೀವನದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಾ, ಆಕೆಯ ವಿರುದ್ಧ ಮೂದಲಿಕೆ ಮಾತುಗಳನ್ನು ಆಡುವವರು ಆಕೆಯ ಮನುಷ್ಯತ್ವವನ್ನು ನೋಡಿ ಕಲಿಯಬೇಕಿದೆ..
@SunnyLeone has donated 5 Crores to Kerala Flood Relief Fund !!#KeralaReliefFund #SunnyLeone pic.twitter.com/SMWLFv5Y2O
— Vidya Chandrababu (@Vidyababukc) August 18, 2018
ನೀಲಿ ಚಿತ್ರಗಳಲ್ಲಿ ನಟಿಸೋದು ಆಕೆಯ ಅನಿವಾರ್ಯತೆಯೋ, ಹಣದ ಮೂಲವೋ ಆಕೆಗಷ್ಟೇ ಗೊತ್ತು. ಆದರೆ ಇದೆಲ್ಲದರಾಚೆಗೆ ಸನ್ನಿ ಲಿಯೋನ್ಗೊಂದು ಮಾನವೀಯ ಮುಖವಿದೆ. ಯಾರದೋ ಸಂಕಟವನ್ನು ತನ್ನದೆಂದುಕೊಳ್ಳುವ ಮಗು ಮನಸಿದೆ. ಈಕೆ ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುತ್ತಾಳೆ. ಅದಕ್ಕಾಗಿಯೇ ಒಂದು ಚಾರಿಟೇಬಲ್ ಟ್ರಸ್ಟ್ ಒಂದನ್ನೂ ಕೂಡ ಸ್ಥಾಪಿಸಿ ಆ ಮೂಲಕ ನಾನಾ ಸಮಾಜಮುಖಿ ಕೆಲಸಗಳನ್ನು ಮಾಡುವ ಸನ್ನಿ ಇದೀಗ ಕೇರಳ ಸಂತ್ರಸ್ತರ ನೆರವಿಗೆ ದಾವಿಸಿ ಬರೋಬ್ಬರಿ ಐದು ಕೋಟಿ ನೀಡಿ ಈ ವಿಚಾರದಲ್ಲಿ ಇತರೆ ನಟಿಮಣಿಯರಿಗೆ ರೋಲ್ ಮಾಡೆಲ್ ಆಗಿದ್ದಾರೆ ಎಂದರೆ ಉತ್ಪ್ರೇಕ್ಷೆಯಾಗೋದಿಲ್ಲ.
ಈ ಹಿನ್ನಲೆಯಲ್ಲಿ ಸನ್ನಿ ಇತರೇ ನಟಿಯರಿಗಿಂತಲೂ ಭಿನ್ನವಾಗಿ ಕಾಣಿಸುತ್ತಾಳೆ. ಆಕೆಯೊಳಗಿನ ಮಾತೃತ್ವ ನಿಜಕ್ಕೂ ಮನ ಸೆಳೆಯುತ್ತದೆ. ಯಾರದೋ ಸಂಕಟವನ್ನು ತನ್ನದೆಂದುಕೊಳ್ಳುವ, ಮತ್ಯಾರದೋ ಕೂಸನ್ನು ಎದೆಗವುಚಿಕೊಂಡು ಸಂಭ್ರಮಿಸುವ ಅಮ್ಮನಿದ್ದಾಳೆ! ಆಕೆ ನೀಲಿ ಸಿನಿಮಾ ನಟಿಯಾಗಿದ್ದರೂ, ಏನೇ ಆಗಿದ್ದರೂ ಆಕೆಯೊಳಗಿನ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಹೃದಯ ಪ್ರಜ್ಞಾವಂತ ಮಾನವೀಯ ಮನಸುಗಳನ್ನೆಲ್ಲ ತಾಕುತ್ತಾಳೆ..
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
