fbpx
ಸಮಾಚಾರ

ಪ್ರವಾಹ ಸಂತ್ರಸ್ತರಿಗಾಗಿ ಹೃದಯ ವೈಶಾಲ್ಯತೆ ಮೆರೆದ ವಿಜಯ್- ಬರೋಬ್ಬರಿ 14ಕೋಟಿ ದೇಣಿಗೆ ನೀಡಿದ ದಳಪತಿ.

ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಸಭ್ಯ ಸ್ಟಾರ್ ನಟರ ಪಟ್ಟಿಯಲ್ಲಿ ತಮಿಳು ಸೂಪರ್ ಸ್ಟಾರ್ ಇಳಯದಳಪತಿ ವಿಜಯ್ ಅವರು ಕೂಡ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಾ, ಬಂದ ದುಡ್ಡಿನ ಲೆಕ್ಕ ಬರೆಯುತ್ತಾ ಕೂರುವ ಈ ಕಾಲದ ಸಿನಿಮಾ ನಟರ ಮದ್ಯೆ ಕೆಲವೇ ಕೆಲವು ಮಂದಿ ಮಾತ್ರ ಮಾತ್ರ ನಾವು ಸಿನಿಮಾದಲ್ಲಿ ಮಾತ್ರ ಹೀರೋಗಳಲ್ಲ ನಿಜಜೀವನದಲ್ಲೂ ಹೀರೊ ಎಂದು ಸಾಬೀತು ಪಡಿಸುತ್ತಿರುತ್ತಾರೆ. ತಮ್ಮನ್ನು ಬೆಳೆಸಿದ ಈ ಸಮಾಜಕ್ಕೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂಬ ನಿರ್ಮಲ ಆಶಯವನ್ನಿಟ್ಟುಕೊಂಡು ಸಮಾಜಸೇವೆಗಿಳಿಯುವ ಕೆಲವೇ ಕೆಲವು ನಟರ ಸಾಲಿನಲ್ಲಿ ತಮಿಳು ಸ್ಟಾರ್ ವಿಜಯ್ ಅವರಿಗೆ ಅಗ್ರಸ್ಥಾನವಿದೆ.

 

 

ಥರ ಥರದ ಪಾತ್ರಗಳ ಮೂಲಕ, ಮನೋಜ್ಞ ಅಭಿನಯದ ಮೂಲಕ ತಮಿಳುನಾಡಿನಾಚೆಗೂ ಪ್ರೇಕ್ಷಕರ ಮನದಲ್ಲಿ ಅಚ್ಚರಿಯ ಮುದ್ರೆ ಒತ್ತಿರುವ ವಿಜಯ್ ಇದೀಗ ಹೃದಯ ವೈಶಾಲ್ಯತೆ ತೋರುವ ಮೂಲಕ ಮನುಷ್ಯತ್ವ ಮೆರೆದಿದ್ದಾರೆ. ಕೇರಳದಲ್ಲಿ ಮಿತಿ ಮೀರಿ ಮಳೆ ಆಗುತ್ತಿರೋದ್ರಿಂದ ಅಲ್ಲಿನ ಜನಜೀವನ ಸಂಪೂರ್ಣ ನೀರಲ್ಲೇ ಕೊಚ್ಚಿ ಹೋಗಿದ್ದು ಮಹಾಮಳೆಗೆ ನುಲುಗಿದ ಸಂತ್ರಸ್ತರ ನೆರವಿಗೆ ಧಾವಿಸಿರುವ ವಿಜಯ್ ಪ್ರವಾಹ ಸಂತ್ರಸ್ತರ ನಿಧಿಗೆ ಬರೋಬ್ಬರಿ 14ಕೋಟಿ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ..

ಇದಕ್ಕೂ ಮುಂದೆ ದಕ್ಷಿಣದ ಅನೇಕ ನಟ ನಟಿಯರು ಕೂಡ ಕೇರಳ ಪ್ರವಾಹ ಪೀಡಿತ ಜನರಿಗೆ ಧನಸಹಾಯ ಮಾಡಿದ್ದರು. ಆದರೆ ಯಾರೊಬ್ಬರೂ ಕೂಡ ಇಷ್ಟು ದೊಡ್ಡ ಮೊತ್ತದ ದೇಣಿಗೆ ನೀಡಿರಲಿಲ್ಲ.. ಆದರೆ ವಿಜಯ್ ಹದಿನಾಲ್ಕು ಕೋಟಿ ನೀಡುವ ಮೂಲಕ ಇತರೆ ನಟರಿಗೂ ಮಾದರಿಯೆನಿಸಿಕೊಂಡಿದ್ದಾರೆ. ತಾವೆಷ್ಟೇ ದೊಡ್ಡ ಸೂಪರ್ ಸ್ಟಾರ್ ಆಗಿದ್ದರೂ ಜನರ ಸಂಕಟಕ್ಕೆ ಮಿಡಿಯುವ ಮನಸ್ಥಿತಿಯಿಂದಲೇ ವಿಜಯ್ ಎಲ್ಲರಿಗೂ ಇಷ್ಟವಾಗುತ್ತಾರೆ.  ‘ನಾಕಾಣೆ’ ಸಹಾಯ ಮಾಡಿ ನೂರು ರೂಪಾಯಿ ಪ್ರಚಾರ ಪಡೆಯೋ ನಟರಿಗೆ ವಿಜಯ್ ನಿಜಕ್ಕೂ ಮಾದರಿಯಾಗುತ್ತಾರೆ

ಕೇರಳ ಪ್ರವಾಹ ಅಪ್ ಡೇಟ್:
ಕೇರಳದಲ್ಲಿ ಸುರಿಯುತ್ತಿರುವ ಮಹಾಮಳೆ ಕ್ಷಣ ಕ್ಷಣಕ್ಕೂ ತನ್ನ ರೌದ್ರಾವತಾರವನ್ನು ಹೆಚ್ಚಿಸುತ್ತಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ ಮಳೆಯಿಂದಾಗಿ ಬರೊಬ್ಬರಿ 106 ಮಂದಿ ಸಾವಿಗೀಡಾಗಿದ್ದು, ಇದರೊಂದಿಗೆ ಸವಾನಿ ಸಂಖ್ಯೆ 400ಕ್ಕೆ ಏರಿಕೆಯಾಗಿದೆ.ಸುಮಾರು 2 ಲಕ್ಷ ಮಂದಿ ಪ್ರವಾಹ ಸಂತ್ರಸ್ಥರ ಕ್ಯಾಂಪ್ ಗಳಲ್ಲಿದ್ದಾರೆ. ಕೇರಳದ 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಇಂದು ರಾಷ್ಟ್ರೀಯ ವಿಪತ್ತು ದಳದ 35 ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಲಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top