ಆರೋಗ್ಯ

ಡಯಾಬಿಟಿಸ್ ಇರೋರು ಚಿಂತೆ ಬಿಡಿ ಹಾಗಲಕಾಯಿ ಬಾತ್ ಮಾಡುವ ವಿಧಾನ ತಿಳ್ಕೊಳ್ಳಿ

ಸಣ್ಣ ಮಕ್ಕಳಿಂದ ಮತ್ತು ದೊಡ್ಡವರಾವರಿಗೂ ತಿನ್ನಬಹುದಾದ  ಮತ್ತು  ಆರೋಗ್ಯಕರವಾದ ಹಾಗಲಕಾಯಿ ಬಾತ್.

 

 

ಹಾಗಲಕಾಯಿ ಬಾತ್ ಮಾಡುವ ಬೇಕಾದ ಪದಾರ್ಥಗಳು:

ಹಾಗಲಕಾಯಿ – ಒಂದು ಕಪ್
ಅನ್ನ – ಒಂದು ಕಪ್
ಈರುಳ್ಳಿ – ಒಂದು ಕಪ್
ತೆಂಗಿನಕಾರಿ ತುರಿ – ಒಂದು ಕಪ್
ಹಸಿಮೆಣಸಿನಕಾಯಿ – 3 ರಿಂದ 4

ಬೆಳ್ಳುಳಿಯ ಎಸಳು – 8 ರಿಂದ 10
ಕೊತ್ತಂಬರಿ ಸೊಪ್ಪು – ಅರ್ಧ ಕಪ್
ಸಕ್ಕರೆ – 2 ಟೀ ಚಮಚ
ಚಕ್ಕೆ – 2 ಪೀಸ್
ಲವಂಗ – 5 ರಿಂದ 6

ನಿಂಬೆ ಹಣ್ಣಿನ ಹೋಳು – ಅರ್ಧ
ಎಣ್ಣೆ -2 ರಿಂದ 4 ಟೀ ಚಮಚ
ಗೋಡಂಬಿ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

ಮೊದಲಿಗೆ ಸ್ಟೋವ್ ಮೇಲೆ ಒಂದು ಪಾನ್ ಇಟ್ಟು ಅದರಲ್ಲಿ ಬೆಳ್ಳುಳಿ ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು ನಂತರ ಹಸಿಮೆಣಸಿನಕಾಯಿ ,ಚಕ್ಕೆ ,ಲವಂಗ ,ಉದ್ದಾಗಿ ಹಚ್ಚಿರುವ ಈರುಳ್ಳಿ ,ಕೊತ್ತಂಬರಿ ಸೊಪ್ಪು ,ತೆಂಗಿನಕಾಯಿ ತುರಿ ಇವುಗಳನ್ನು ಪಾನ್ ಹಾಕಿ ಚೆನ್ನಾಗಿ ಹುರಿದು ನಂತರ ನೀರನ್ನು ಬಳಸದೆ ತರಿ ತರಿಯಾಗಿ ಬ್ಲೆಂಡ್ ಮಾಡಿಕೊಳ್ಳಬೇಕು .ನಂತರ ಸ್ಟೋವ್ ಮೇಲೆ ಪಾನ್ ಇಟ್ಟು ಆ ಪಾನಿಗೆ 4 ಚಮಚದಷ್ಟು ಎಣ್ಣೆ ಹಾಕಿದ ಮೇಲೆ ಸಣ್ಣದಾಗಿ ಹಚ್ಚಿರುವ ಹಾಗಲಕಾಯಿಯನ್ನು ಕೆಂಪಾಗಿ ಹುರಿದುಕೊಳ್ಳಬೇಕು ಮತ್ತು ಗೋಡಂಬಿ ಹಾಕಬೇಕು .ಬ್ಲೆಂಡ್ ಮಾಡಿರುವ ಮಸಾಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ಒಂದು ಕಪ್ ಅನ್ನವನ್ನು ಹಾಕಿ ಮಿಕ್ಸ್ ಮಾಡಿದ ಮೇಲೆ ಅರ್ಧ ಹೋಳು ನಿಂಬೆ ಹಣ್ಣಿನ ರಸವನ್ನು ಹಾಕಬೇಕು ಮತ್ತು ಸಕ್ಕರೆ , ರುಚಿಗೆ ತಕ್ಕಷ್ಟು ಉಪ್ಪುನ್ನು ಹಾಕಿಬೇಕು .ಬಳಿಕ ಪ್ಲೇಟ್ ಗೆ ಹಾಕಿ ಸರ್ವ್ ಮಾಡಿದರೆ ಹಾಗಲಕಾಯಿ ಬಾತ್ ಸವಿಯಲು ಸಿದ್ಧ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top