ವಿಶೇಷ

1 ಟಿ.ಎಂ.ಸಿ ಅಂದ್ರೆ ಎಷ್ಟು ಗೊತ್ತೇ. ನೀವು ಕಂಡು ಕೇಳಿರದ ಮಾಹಿತಿ ತಿಳ್ಕೊಳ್ಳಿ

ನೀರು ಎಲ್ಲ ಜೀವಿಗಳಿಗೆ ಅತ್ಯಗತ್ಯ. ಭೂಮಿಯ ಮೇಲೆ ಅನೇಕ ಮೂಲಗಳಿಂದ ನೀರು ಸಿಗುತ್ತದೆ. ಭೂಮಿಯ ಮೇಲ್ಮೈ ಮೇಲೆ ಶೇ. 70 ಭಾಗಗಳಲ್ಲಿ ಕಂಡುಬರುತ್ತದೆ. ಅದರೆ ಶುದ್ಧ ಕುಡಿಯಲು ಬಳಸಬಹುದಾದ ನೀರು ಕೇವಲ ಶೇ.3 ರಷ್ಟು ಮಾತ್ರವೇ ಲಭ್ಯವಿರುತ್ತದೆ. ನಮಗೆ ಶುದ್ಧ ಕುಡಿಯುವ ನೀರು ನದಿ, ಹಳ್ಳ, ಬಾವಿ ಹೀಗೆ ಹಲವು ಮೂಲಗಳಿಂದ ಸಿಗುತ್ತವೆ.


ನದಿಯ ನೀರು ಮಾನವರು ಕುಡಿಯಲು, ಕೃಷಿಗೆ ಬಳಸಲು ಪ್ರಮುಖ ಮೂಲವಾಗಿದೆ. ಶತಮಾನಗಳ ಹಿಂದೆ ನದಿ ನೀರು ಪೋಲಾಗಿ ಸಮುದ್ರ ಸೇರುತ್ತಿತ್ತು ಅದನ್ನು ತಡೆಗಟ್ಟಲು ಅಣೆಕಟ್ಟುಗಳನ್ನು ಕಟ್ಟಿದ್ದರು. ಹೀಗೆ ಅಣೆಕಟ್ಟುಗಳಲ್ಲಿ ಸಂಗ್ರಹವಾದ ನೀರನ್ನು ‘ಟಿಎಂಸಿ’ ಎಂಬ ಅಳತೆಯಿಂದ ಅಳೆಯುತ್ತಾರೆ. ಹಾಗಾದರೆ ಒಂದು ಟಿಎಂಸಿ ನೀರು ಎಂದರೆ ಎಷ್ಟು ಎಂಬುದನ್ನು ತಿಳಿದು ಕೊಳ್ಳೋಣ ಬನ್ನಿ.

ಸಾಮಾನ್ಯವಾಗಿ ನೀರನ್ನು ಲೀಟರ್ ಮಾಪನದಲ್ಲಿ ಅಳೆಯುತ್ತಾರೆ. ಅಗಾದವಾದ ನದಿಯ ನೀರನ್ನು ಅಲೆಯಲ್ಲೂ ಟಿಎಂಸಿ ಬಳಸುತ್ತೇವೆ. ಒಂದು ಟಿ.ಎಂ.ಸಿ ಎಂದರೆ 1 ಸಾವಿರ ಅಡಿ(ಫೀಟ್) ಉದ್ದ, ಸಾವಿರ ಅಡಿ(ಫೀಟ್) ಅಗಲ, ಸಾವಿರ ಅಡಿ(ಫೀಟ್) ಎತ್ತರದ ನೀರಿನ ರಾಶಿ ಎಂದು ಅರ್ಥ. ಸರಳವಾಗಿ ಹೇಳಬೇಕೆಂದರೆ 1 ಟಿ.ಎಂ.ಸಿ ನೀರಿನಿಂದ 4,500 ಎಕೆರೆಯಲ್ಲಿ ಭತ್ತ, ಕಬ್ಬು ಅಥವಾ 11,000 ಎಕೆರೆ ಭೂಮಿಯಲ್ಲಿ ಶೇಂಗಾ ಬೆಳೆಯಬಹುದು.

‘ಟಿ.ಎಂ.ಸಿ’ ಅಳತೆ:
*ಟಿ.ಎಂ.ಸಿ = 2830 ಕೋಟಿ ಲೀಟರ್.
*11,000 ಕ್ಯೂಸೆಕ್ಸ್ ನೀರು 24 ಗಂಟೆಗಳ ಕಾಲ ಹರಿದರೆ ಅದು ಒಂದು ಟಿ.ಎಂ.ಸಿ ಯಾಗುತ್ತದೆ.
*1 ಟಿ.ಎಂ.ಸಿ ನೀರು ಅಂದರೆ ಒಂದು ಸಾವಿರ ದಶಲಕ್ಷ ಘನ ಅಡಿ.
*ಕ್ಯೂಸೆಕ್ಸ್ (ಕ್ಯೂಬಿಕ್ ಫೀಟ್ ಪರ್ ಸೆಕೆಂಡ್) ಎನ್ನುವುದು ನೀರಿನ ವೇಗವನ್ನು ಅಳೆಯಲು ಬಳಕೆ ಮಾಡುತ್ತಾರೆ.
*1 ಕ್ಯೂಸೆಕ್ =ಪ್ರತಿ ಸೆಕೆಂಡ್ 28.3 ಲೀಟರ್ ನೀರು ಹರಿದು ಹೋದರೆ ಅದನ್ನು 1 ಕ್ಯೂಸೆಕ್ ನೀರು ಎಂದು ಅಳೆಯುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top