ಸಮಾಚಾರ

ಮಾರೀಚನಿಂದ ಬುದ್ದಿವಾದದ ಮಾತು ಕೇಳಿ ರಾವಣ ಲಂಕೆಗೆ ಹಿಂತಿರುಗಿದ ಕಥೆ ನಿಮಗೆ ಗೊತ್ತಾ,ಗೊತ್ತಿಲ್ಲ ಅಂದ್ರೆ ತಿಳ್ಕೊಳ್ಳಿ.

ರಾವಣನಿಗೆ ಮಾರೀಚನಿಂದ ಬುದ್ದಿ ಮಾತು ಈ ಮಾತನ್ನು ಕೇಳಿದ ರಾವಣನು ಮರು ಮಾತನಾಡದೇ ಲಂಕೆಗೆ ಹಿಂತಿರುಗಿದನು.

 

 

ಜನ ಸ್ಥಾನದಲ್ಲಿ ಖರನು ನಾಶಹೊಂದಿದ ಸಂಗತಿ ರಾವಣನಿಗೆ ತಿಳಿಯಿತು . ಆಕಂಪನ ಎಂಬ ರಾಕ್ಷಸನು ತಪ್ಪಿಸಿಕೊಂಡು ಓಡಿ ಬಂದು ರಾವಣನಿಗೆ ಸುದ್ದಿ ತಿಳಿಸಿದನು. ರಾವಣನು ತನ್ನ ಪರಾಕ್ರಮದ ಬಲದಿಂದ ಅನೇಕ ಅತ್ಯಾಚಾರಗಳನ್ನು ಮಾಡಿದ್ದನು. ದೇವತೆಗಳೊಂದಿಗೆ ಯುದ್ಧ ನಡೆಸಿದನು. ಪರಸ್ತ್ರೀಯರನ್ನು ಅಪಹರಿಸಿದನು. ಯಜ್ಞ ಯಾಗಗಳನ್ನು ಕೆಡಿಸಿದನು.
ಕುಬೇರನಿಂದ ಪುಷ್ಪಕ ವಿಮಾನವನ್ನು ಕಸಿದು ಕೊಂಡಿದ್ದನು. ಮನುಷ್ಯರಿಂದ ಅಲ್ಲದೆ ಬೇರೆ ಯಾರಿಂದಲೂ ಸಹ ಮರಣ ಬರದಂತೆ ವರವನ್ನು ರಾವಣ ಪಡೆದಿದ್ದನು. ಖರನು ಮರಣದ ಸುದ್ದಿ ತಿಳಿದು ಕಿಡಿಕಿಡಿಯಾದನು ರಾವಣ. ಆಕಂಪನನು ರಾಮ, ಲಕ್ಷ್ಮಣರ ಬಗೆಗೆ ತಿಳಿಸಿದನು .ಆ ರಾಮನನ್ನು ನಾನು ಈಗಲೇ ಸಂಹರಿಸುತ್ತೇನೆ ಎಂದು ರಾವಣನು ಹೇಳಿದಾಗ .

ಆಕಂಪನು ರಾಮನನ್ನು ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಅವನನ್ನು ಉಪಾಯವಾಗಿ ಗೆಲ್ಲಬೇಕು ಎಂದು ಉಪಾಯ ಸೂಚಿಸಿದನು. ಮಹಾರಾಜ, ರಾಮನ ಹೆಂಡತಿ ಸೀತೆ ಲೋಕ ಸುಂದರಿಯಾಗಿದ್ದಾಳೆ. ಹೇಗೆ ಆಗಲಿ ಸೀತೆಯನ್ನು ಅಪಹರಿಸಿದರೆ ರಾಮನು ತಾನೇ ಉಪವಾಸವಿದ್ದು ಸಾಯುವನು. ಆ ರೀತಿಯ ಆಕಂಪನನ ಮಾತನ್ನು ಕೇಳಿದ ರಾವಣನು ತನ್ನ ರಥವನ್ನು ಮಾರೀಚರ ಆಶ್ರಮದ ಕಡೆಗೆ ಕೊಂಡೊಯ್ದನು.

ಮಾರೀಚನು ತಾಟಕಿಯ ಮಗನು. ಅವನು ಹಿಂದೆ ರಾಮನಿಂದ ಹೊಡೆತ ತಿಂದು ಸಮುದ್ರದಲ್ಲಿ ಹೋಗಿ ಬಿದ್ದ ನಂತರ ಸನ್ಯಾಸಿಯಂತೆ ಜೀವನ ನಡೆಸುತ್ತಿದ್ದನು.ರಾಮನ ಪತ್ನಿಯನ್ನು ಅಪಹರಿಸಲು ಸಹಾಯ ಮಾಡುವುದಕ್ಕೆ ಮಾರೀಚನು ವಿರೋಧ ವ್ಯಕ್ತಪಡಿಸಿ ರಾವಣನಿಗೆ ಬುದ್ಧಿ ಹೇಳಿದನು. ಇದರಿಂದಾಗಿ ನಿನ್ನ ವಿನಾಶ ಖಂಡಿತ ಆಗುವುದು. ನಿನಗೆ ಈ ರೀತಿ ದುಷ್ಟ ರೀತಿಯಲ್ಲಿ ಬೋಧಿಸಿದವರು ಶತ್ರುವೇ ಆಗಿರಬೇಕು.
ಸೀತಾದೇವಿಯಂತಹ ಪತಿವ್ರತೆಯನ್ನು ಅಪಹರಿಸುವುದು ಸರಿಯಲ್ಲ .ಮಲಗಿರುವ ಸಿಂಹವನ್ನು ಬಡಿದೆಬ್ಬಿಸಿದಂತೆ ರಾಮನೊಂದಿಗೆ ವೈರತ್ವವನ್ನು ಹೊಂದುವುದು. ಹೀಗೆ ಮಾರೀಚನು ಹೇಳಿದಾಗ ರಾವಣನು ಆ ಯೋಚನೆಯನ್ನು ಬಿಟ್ಟು ಲಂಕೆಗೆ ಹಿಂತಿರುಗಿದನು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top