ಪಾಕಿಸ್ತಾನದ ಪ್ರಧಾನಮಂತ್ರಿಯಾಗಿ ಇಮ್ರಾನ್ ಖಾನ್ ಅವರು ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ತೆರಳಿದ್ದ ಪಂಜಾಬ್ನ ಸಚಿವ, ಮಾಜಿ ಕ್ರಿಕೆಟರ್ ನವಜೋತ್ ಸಿಂಗ್ ಸಿದು ಅವರಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಅಧ್ಯಕ್ಷ ಮಸೂದ್ ಖಾನ್ ಅವರ ಪಕ್ಕದಲ್ಲೇ ಕೂರುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.
ಸಮಾರಂಭದಲ್ಲಿ ಸಿಧು ಮುಂಚೂಣಿ ಸಾಲಿನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಅಧ್ಯಕ್ಷ ಮಸೂದ್ ಖಾನ್ ಮಗ್ಗಲಿನ ಸೀಟಿನಲ್ಲಿ ಆಸೀನರಾಗಿದ್ದು ಭಾರತೀಯರ ಕಣ್ಣು ಕೆಂಪಗಾಗಿಸಿದೆ. ಪಾಕ್ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಸಿಧುವನ್ನು ತಬ್ಬಿಕೊಂಡು ಕುಶಲೋಪರಿ ವಿಚಾರಿಸಿದರು. ಇಬ್ಬರು ನಗುನಗುತ್ತ ಮಾತನಾಡಿದ್ದು ಭಾರತೀಯರಲ್ಲಿ ಉರಿಯುತ್ತಿರುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೆದ್ ಬಜ್ವಾರನ್ನು ಕಾರ್ಯಕ್ರಮದಲ್ಲಿ ಆಲಿಂಗಿಸಿದಕ್ಕಾಗಿ ಸಿಧು ವಿರುದ್ಧ ಇದೀಗ ದೇಶದ್ರೋಹ ಪ್ರಕರಣ ದಾಖಲಾಗಿದೆ. ಬಿಹಾರದ ಮುಝಫ್ಫರ್ ಪುರದ ನ್ಯಾಯಾಲಯವೊಂದಕ್ಕೆ ವಕೀಲರೊಬ್ಬರು ಈ ಸಿದ್ದು ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ ದೂರು ಸಲ್ಲಿಸಿದ್ದಾರೆ.
Islamabad: Navjot Singh Sidhu was seated next to President of PoK Masood Khan at Imran Khan’s oath ceremony. #Pakistan pic.twitter.com/MPrBQ9XtXD
— ANI (@ANI) August 18, 2018
ಸಿಧುವಿನ ನಡವಳಿಕೆಯನ್ನು ಟೀಕಿಸಿರುವ ಬಿಜೆಪಿ, ಸಿಧು ವಿರುದ್ಧ ಕೂಡಲೇ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಒತ್ತಾಯಿಸಿದೆ. ದೇಶದ ವಿವಿಧೆಡೆ ಸಿಧು ವಿರುದ್ಧ ಪ್ರತಿಭಟನೆಗಳು ನಡೆಸಲಾಗುತ್ತಿದ್ದು, ಸಿಧು ದೇಶದ್ರೋಹ ಎಸಗಿದ್ದಾರೆ ಎಂದು ಆರೋಪಿಸಿ ಅವರನ್ನು ಕೂಡಲೇ ಬಂಧಿಸಬೇಕೆಂಬ ಆಗ್ರಹಿಸುತ್ತಿದ್ದಾರೆ. ಭಾರತೀಯ ಯೋಧರನ್ನು ಹತ್ಯೆ ಮಾಡುವುದಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥರೇ ಆದೇಶ ನೀಡುತ್ತಾರೆ, ನವಜೋತ್ ಸಿಂಗ್ ಸಿಧು ಅವರೆಡೆಗೆ ಆತ್ಮೀಯತೆ ತೋರುವುದು ಸರಿಯಲ್ಲ ಎಂದು ಶೋಷಿಯಲ್ ಮೀಡಿಯಾದಲ್ಲಿ ಕೂಡ ಸಿಧು ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.
#WATCH: Navjot Singh Sidhu meets Pakistan Army Chief General Qamar Javed Bajwa at #ImranKhan‘s oath-taking ceremony in Islamabad. pic.twitter.com/GU0wsSM56s
— ANI (@ANI) August 18, 2018
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
