ಸಮಾಚಾರ

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅಮೇರಿಕಾ ಅಮೇರಿಕಾ ಚಿತ್ರದ ನಾಯಕಿ ಭೂಮಿ ಅಲಿಯಾಸ್ ಹೇಮಾ ಪಂಚಮುಖಿ

ಸ್ಯಾಂಡಲ್ ವುಡ್ ನ ಹೇಮಾ ಪಂಚಮುಖಿ. ಅಮೆರಿಕ ಅಮೆರಿಕಾದ ಭೂಮಿಕಾ, ರವಿಮಾಮನ ಪ್ರೀತಿಯ ತಂಗಿ, ಸಂಭ್ರಮದ ಮೂಕ ಹುಡುಗಿ, ದೊರೆ ಮೊದಲಾದ ಸಿನಿಮಾಗಳಲ್ಲಿ ಅಭಿನಯದ ಮೂಲಕವೇ ಕನ್ನಡಿಗರ ಹೃದಯ ಗೆದ್ದಿದ್ದವರು. ಕಳೆದ ವರ್ಷ ಎರಡನೆಯ ಮದುವೆ ಆಗಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ.

ರಂಗೋಲಿ, ಅಂಡಮಾನ್​, ನಿಶಬ್ಧ, ವಂದೇಮಾತರಂ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದ ಪ್ರಶಾಂತ್ (ಸುಮಂತ್) ಅವರನ್ನು ಹೇಮಾ ಪಂಚಮುಖಿ ಅವರು ಮದುವೆ ಆಗಿದ್ದರು. ಬಹಳ ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ಹೇಮಾ ಕಳೆದ ವರ್ಷ ಮದುವೆಯಾದಾಗ ಸುದ್ದಿಯಲ್ಲಿದ್ದರು. ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ಹೇಮಾ ಪಂಚಮುಖಿ ಅವ್ರು ಈಗ ಗರ್ಭಿಣಿ ಆಗಿದ್ದು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.

 

 

ಚಿತ್ರರಂಗದಿಂದ ಬಹಳ ದಿನಗಳಿಂದ ದೂರವೇ ಇರುವ ಹೇಮಾ, ಅದ್ಭುತ ನೃತ್ಯಗಾತಿಯಾಗಿದ್ದಾರೆ. ಬೆಂಗಳೂರಿನಲ್ಲಿ ನೃತ್ಯ ಶಾಲೆ ನಡೆಸುತ್ತಿರುವ ಹೇಮಾ, ಅನೇಕ ಮಕ್ಕಳಿಗೆ ನೃತ್ಯದ ಪಾಠ ಹೇಳಿಕೊಡುತ್ತಾರೆ. ಸ್ಟೇಜ್‍ಗಳಲ್ಲಿ ಶೋ ಕೊಡುತ್ತಾರೆ. ಪ್ರಶಾಂತ್ (ಸುಮಂತ್) ಕೂಡ ಭರತನಾಟ್ಯ ಕಲಾವಿದ.

ಈ ಹಿಂದೆ ನಟಿ ಹೇಮಾ ಪಂಚಮುಖಿ ಅವರು ಸ್ವಮೇಂದ್ರ ಪಂಚಮುಖಿ ಎಂಬವರನ್ನು ಮದುವೆ ಆಗಿದ್ದರು. ಅಲ್ಲದೇ ಮದುವೆಯಾದ ನಂತರ ವಿದೇಶದಲ್ಲಿ ನೆಲೆಸಿದ್ದು, ಬಳಿಕ ಬೆಂಗಳೂರಿಗೆ ವಾಪಾಸ್ಸಾಗಿ ವಿಚ್ಛೇದನ ಪಡೆದಿದ್ದರು. ಇತ್ತೀಚಿನ ದಿನಗಳಲ್ಲಿ ಹೇಮಾ ಅವರು ಬೆಂಗಳೂರಿನಲ್ಲೇ ನಾಟ್ಯ ಶಾಲೆ ನಡೆಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top