fbpx
ಸಮಾಚಾರ

ಕನ್ನಡ ನಟರಿಗೆ ಯಕ್ಡಾ, ಚಪ್ಲಿ ಅಂತೆಲ್ಲಾ ಬಾಯಿಗೆ ಬಂದಂಗೆ ಹಿಗ್ಗಾ ಮುಗ್ಗಾ ಬೈದ ಹುಚ್ಚ ವೆಂಕಟ್- ಯಾಕೆ ಗೊತ್ತಾ? ವಿಡಿಯೋ ನೋಡಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಮಾನವಾಗಿ ಸೋತು ಸುಣ್ಣವಾದ ನಂತರ ಮಾಯವಾಗಿದ್ದ ಹಾಗು ಕೆಲ ದಿನಗಳಿಂದ ಯಾವ ರಗಳೆ ರಾಮಾಯಣಗಳೂ ಇಲ್ಲದೆ ತನ್ನ ಪಾಡಿಗೆ ತಾನಿದ್ದಂತಿದ್ದ ಸ್ವಯಂ ಘೋಷಿತ ವಿಶ್ವ ವಿಖ್ಯಾತ ನಟ ಹುಚ್ಚಾ ವೆಂಕಟ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಹಾಗಂತ ಈ ಬಾರಿ ಆತ ಯಾವುದೋ ರಂಖಲು ಮಾಡಿಕೊಂಡು ಗೊಣ್ಣೆ ಸುರಿಸುತ್ತಾ ಮಾಧ್ಯಮದವರನ್ನು ಭೇಟಿಯಾಗಿಲ್ಲ. ಬದಲಾಗಿ ಕನ್ನಡ ಚಿತ್ರರಂಗದ ನಟ ನಟಿಯರನ್ನೆಲ್ಲಾ ಹೋಲ್ ಸೇಲಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

 

 

ಕೊಡಗಿನಲ್ಲಿ ಭಯಂಕರ ಮಳೆಯಿಂದಾಗಿ ಭೀಕರ ಪ್ರವಾಹದ ಭೀತಿ ಉಂಟಾಗಿರುವ ವಿಚಾರ ಎಲ್ಲರಿಗೂ ಗೊತ್ತು. ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ಕೊಚ್ಚಿ ಹೋಗುತ್ತಿರುವ ಕೊಡಗು ಅಕ್ಷರಶ ಕಂಗಾಲಾಗಿ ಹೋಗಿದೆ. ಕೊಡಗು ಸೇರಿದಂತೆ ರಾಜ್ಯದ ವಿವಿದೆಡೆ ಧಾರಾಕಾರ ಮಳೆ ಮುಂದುವರಿದಿದ್ದು ಮಹಾಮಳೆಗೆ ಇಡೀ ಜನರ ಜೀವನ ಅಕ್ಷರಶಃ ಕೊಚ್ಚಿಹೋಗಿದೆ.. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಚಿತ್ರಣಗ ಕೂಡ ಸ್ಪಂದಿಸಿದ್ದು ಅನೇಕ ಕಲಾವಿದರು ಆಹಾರ,ಹಣ ಮತ್ತು ಅಗತ್ಯ ವಸ್ತುಗಳನ್ನು ನೀಡಿ ಒಂದೊಂದು ರೀತಿಯಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ.. ಆದರೆ ಮೊಸರಿನಲ್ಲೂ ಕಲ್ಲು ಹುಡುಕುವಂತವರು ಈ ವಿಚಾರದಲ್ಲೂ ತಪ್ಪು ಹುಡುಕಿ ಸಹಾಯ ಮಾಡಿದ ಸಿನಿಮಾ ಮಂದಿಯನ್ನು ಬಯ್ಯಲು ಶುರುಮಾಡಿದ್ದಾರೆ. ಅದಕ್ಕೆ ಆರಂಭಿಕ ಎಂಬಂತೆ ಹುಚ್ಚ ವೆಂಕಟ್ ಚಲಾನೆ ನೀಡಿದ್ದಾನೆ.

ಈ ಬಗ್ಗೆ ತನಗಾಣಿಸಿದ್ದನ್ನು ಒದರಿ ಯೂಟ್ಯೂಬ್ ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿರುವ ಹುಚ್ಚ ವೆಂಕಟ್ ಕನ್ನಡ ಚಿತ್ರರಂಗದ ನಟರನ್ನು ಯಕ್ಡಾ, ಚಪ್ಲಿ ಅಂತೆಲ್ಲಾ ಬಾಯಿಗೆ ಬಂದಹಾಗೆ ಉಗಿದು ಉಪಾಕಿದ್ದಾನೆ.. ” ಪ್ರವಾಹದಲ್ಲಿ ತೊಂದರೆಗೆ ಒಳಗಾಗಿರುವ ಜನರಿಗೆ ಊಟ ನೀಡಿದ್ದೇವೆ, ಸಹಾಯ ಮಾಡಿದ್ದೇವೆ ಎಂದು ಸಿನಿಮಾ ನಟರು ಬಿಟ್ಟಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ.. ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕಾಗಿ ನಿರಾಶ್ರಿತರಿಗೆ ಊಟ ಕೊಡುವ ನಾಟಕ ಆಡಿ ಪಬ್ಲಿಸಿಟಿ ಮಾಡ್ಕೊತಿದ್ದಾರೆ.. ಕೊಡಗಿನ ಜನರಿಗೆ ಸಿನಿಮಾದವರು ಕೊಡುವ ಊಟದ ಅವಶ್ಯಕೆತೆ ಇಲ್ಲ, ನಿಮಗೇ ಊಟ ಹಾಕುವ ತಾಕತ್ತು ಕೊಡಗಿನವರಿಗಿದೆ. ಅವರಿಗೆ ಬೇಕಾಗಿರೋದು ಅವರ ಮುಂದಿನ ಜೀವನಕ್ಕೆ ಸೌಲಭ್ಯ.. ಯಾರಾದ್ರೂ ಸಿನಿಮಾದವರು ಊಟ ಕೊಡ್ತೀನಿ ಅಂತ ಪ್ರಚಾರ ತಗೊಂಡ್ರೆ ಸಾಯಿಸಿಬಿಡುತ್ತೇನೆ.. ಸರ್ಕಾರದವರು ಪ್ರವಾಹದಲ್ಲಿ ಬೀದಿಗೆ ಬಂದಿರುವವರಿಗೆ ಎಲ್ಲಾ ವ್ಯವಸ್ಥೆ ಮಾಡಿಕೊಡಬೇಕು.. ಇಲ್ಲ ಅಂದ್ರೆ ವಿಧಾನಸೌಧಕ್ಕೆ ನುಗ್ಗಿ ಗಲಾಟೆ ಮಾಡ್ತೀವಿ” ಎಂಬಿತ್ಯಾದಿಯಾಗಿ ವೆಂಕಟ್ ತಮ್ಮ ಆಕ್ರೋಶವನ್ನು ಸಿನಿಮಾದವರ ಮೇಲೆ ಹೊರಹಾಕಿದ್ದಾರೆ.

ಹುಚ್ಚ ವೆಂಕಟ್’ನ ರೌದ್ರಾವತಾರವನ್ನು ನೋಡಲು ಇಚ್ಛಿಸುವವರು ಇಲ್ಲಿ ನೋಡತಕ್ಕದ್ದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top