ಸಮಾಚಾರ

ಭಾರತ-ಇಂಗ್ಲೆಂಡ್ 3ನೇ ಟೆಸ್ಟ್- ಪಾಂಡ್ಯ ದಾಳಿಗೆ ಕುಸಿದ ಆಂಗ್ಲರು, ಟೀಮ್ ಇಂಡಿಯಾಗೆ ಭಾರಿ ಮುನ್ನಡೆ.

ಭಾರತ ಹಾಗು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಇಂಗ್ಲೆಂಡ್ ನ ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿದ್ದು. ಭಾರತ ಭರ್ಜರಿ ಮುನ್ನಡೆ ಸಾಧಿಸಿದೆ ಎಂದು ತಿಳಿದು ಬಂದಿದೆ. ಭಾರತ ತನ್ನ 2ನೇ ಇನ್ನಿಂಗ್ಸ್​​ನಲ್ಲಿ 2ನೇ ದಿನದಾಟ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 124 ರನ್ ಕಲೆಹಾಕಿದೆ. ಈ ಮೂಲಕ ಭಾರತ 292 ರನ್​ಗಳ ಭರ್ಜರಿ ಮುನ್ನಡೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.

ಎರಡನೇ ಇನ್ನಿಂಗ್ಸ್ ಶುರು ಮಾಡಿದ ಭಾರತ ಶಿಖರ್ ಧವನ್ ಹಾಗೂ ಕೆ. ಎಲ್. ರಾಹುಲ್ ರನ್ನು ಕಣ್ಣಕ್ಕಿಳಿಸಿತು ಇಬ್ಬರು ಮೊದಲನೇ ವಿಕೆಟ್​ಗೆ 60 ರನ್​ಗಳ ಕಾಣಿಕೆ ನೀಡಿದರು. ಬಳಿಕ ಮೊದಲು ರಾಹುಲ್ ನಂತರ ಶಿಖರ್ ಧವನ್ ಔಟ್ ಆಗಿ ಪೆವಲಿಯನ್ ಸೇರಿದರು. ಆದರೆ 36 ರನ್​​ ಗಳಿಸಿರುವಾಗ ರಾಹುಲ್ ಬೆನ್ ಸ್ಟೋಕ್ಸ್​ ಎಸೆತದಲ್ಲಿ ಬೌಲ್ಡ್​ ಆಗುವ ಮೂಲಕ ತನ್ನ ಇನ್ನಿಂಗ್ಸ್​ ಅನ್ನು ಕೊನೆಗೊಳಿಸಿದರು. ದಿನಾದ್ಯಂತ್ಯಕ್ಕೆ ಕೊಹ್ಲಿ ಹಾಗು ಚಿತೇಶ್ವರ್ ಪೂಜಾರ ಕನ್ನಡಲ್ಲಿ ಔಟಾಗದೆ ಉಳಿದರು.

 

 

ಇನ್ನು ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ ಹಾರ್ದಿಕ್ ಪಾಂಡ್ಯ ದಾಳಿಗೆ ತತ್ತರಿಸಿ 161 ಕ್ಕೆ ಸರ್ವಪತನ ಕಂಡಿತು.

ಇನ್ನಿಂಗ್ಸ್ ಸ್ಕೋರ್ ವಿವರ
ಮೊದಲ ಇನ್ನಿಂಗ್ಸ್ ಭಾರತ – 329 ರನ್​ಗೆ ಆಲೌಟ್ ಆಗಿತ್ತು
ಮೊದಲ ಇನ್ನಿಂಗ್ಸ್ ಇಂಗ್ಲೆಂಡ್ – 161 ರನ್​ಗೆ ಆಲೌಟ್ ಆಗಿತ್ತು.
ಎರಡನೇ ಇನ್ನಿಂಗ್ಸ್ ಭಾರತ – 124 -2 ಕೊಹ್ಲಿ(8 ) ಹಾಗು ಪೂಜಾರ(33) ಕಣದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ವಿರಾಟ್ ದಾಖಲೆ:
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ರವರು ಇಂಗ್ಲೆಂಡ್ ವಿರುದ್ದದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಮಿಸ್ ಮಾಡಿಕೊಂಡರೂ, ನಾಯಕನಾಗಿ ವಿದೇಶದಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆ ಮುರಿದಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top