fbpx
ಸಮಾಚಾರ

ಭಾರತೀಯ ರೈಲ್ವೆ ಚಾಲಕರ ಸಂಬಳ ಎಷ್ಟು ಗೊತ್ತೇ.

ಭಾರತೀಯ ರೈಲ್ವೆ ಭಾರತ ಸರ್ಕಾರದ ರೈಲ್ವೇ ಖಾತೆಯ ಅಧೀನದಲ್ಲಿದೆ. ಅನೇಕ ವರ್ಷಗಳಿದ ರೈಲ್ವೆಯ ಇಲಾಖೆ ವ್ಯವಸ್ಥಿತವಾಗಿ ಜನೈಗೆ ಸೇವೆ ನೀಡುತ್ತಾ ಬಂದಿದೆ. ಭಾರತೀಯ ರೈಲ್ವೇಯಲ್ಲಿ ಸುಮಾರು 16 ಲಕ್ಷ ಜನ ನೌಕರರಿದ್ದು, ಇದು ಪ್ರಪಂಚದಲ್ಲಿಯೇ ಯಾವುದೇ ವಾಣಿಜ್ಯ ಅಥವಾ ಸಾರ್ವಜನಿಕರ ಬಳಕೆಯ ಸೇವಾ ಕ್ಷೇತ್ರದಲ್ಲಿ ಅತಿ ಹೆಚ್ಚು ಎಂದು ಪರಿಗಣಿತವಾಗಿದೆ ಏನು ತಿಳಿದು ಬಂದಿದೆ.

ಭಾರತೀಯ ರೈಲ್ವೆಯು ದೇಶದಾದ್ಯಂತ 63,140 ಕಿ. ಮೀಗಳಷ್ಟು ಉದ್ದಕ್ಕೆ ಚಾಚಿಕೊಂಡಿದೆ. ಪ್ರತಿ ದಿನ 8,702 ಪ್ರಯಾಣಿಕ ರೈಲುಗಳನ್ನು ಸೇರಿದಂತೆ, ಒಟ್ಟು , 14444 ರೈಲುಗಳು ಓಡುತ್ತವೆ (2002ರ ಅಂಕಿ ಅಂಶ) ಭಾರತದಲ್ಲಿ ಮೊದಲ ಬಾರಿಗೆ ರೈಲ್ವೇ ಪದ್ಧತಿಯ ಸ್ಥಾಪನೆಯಾದದ್ದು 1853ರಲ್ಲಿ. ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬರುವ ವೇಳೆಯಲ್ಲಿ 42 ರೈಲ್ವೇಗಳು ಅಸ್ತಿತ್ವದಲ್ಲಿ ಇದ್ದವು. 1951ರಲ್ಲಿ ಇವೆಲ್ಲವನ್ನೂ ರಾಷ್ಟ್ರೀಕರಿಸಿ ಒಂದುಗೂಡಿಸಲಾಯಿತು. ಈ ಮೂಲಕ ಭಾರತೀಯ ರೈಲ್ವೆಯು ಜಗತ್ತಿನಲ್ಲಿಯೇ ಅತಿ ದೊಡ್ದ ರೈಲ್ವೇ ಜಾಲಗಳಲ್ಲಿ ಒಂದಾಯಿತು ಎಂದು ತಿಳಿದು ಬಂದಿದೆ.

 

 

ಎಲ್ಲ ರೈಲ್ವೆ ಸಿಬ್ಬಂದಿಗಳು ತಮ್ಮದೇ ಆಗಿರುವ ಕರ್ತವ್ಯ ಗಳನ್ನು ಪಾಲಿಸುತ್ತಾರೆ. ಇನ್ನು ರೈಲು ಚಾಲಕರ ಸಂಬಳದ ವಿಚಾರಕ್ಕೆ ಬಂದರೆ ಹೊಸದಾಗಿ ಸೇರಿದ(ಲೋಕೋ ಪೈಲಟ್ ) ಎಲ್ಲ ರೈಲು ಚಾಲಕರ ಪ್ರಾರಂಭದ ಸಂಬಳ 26000 ದಷ್ಟೂ ಇರುತ್ತದೆ ಎನ್ನಲಾಗಿದೆ.

ಹಾಗೆಯೆ ಆತನ ಅನುಭವ ಹೆಚ್ಚಿದಂತೆಲ್ಲ ಸಂಬಳ ಕೂಡ ಹೆಚ್ಚಳ ಆಗುತ್ತಾ ಹೋಗುತ್ತದೆ, ಶತಾಬ್ದಿ ಟ್ರೈನ್ ಚಾಲಕರ ಸಂಬಳ ತಿಂಗಳಿಗೆ ಒಂದು ಲಕ್ಷ ರೂಪಾಯಿಗೂ ಅಧಿಕ ಆಗಿರುತ್ತದೆ.ಮತ್ತು ಗೂಡ್ಸ್ ಹಾಗು ಪ್ಯಾಸೆಂಜರ್ ಟ್ರೈನ್ ಚಾಲಕರು ಕ್ರಮವಾಗಿ 70 ಹಾಗು 50 ಸಾವಿರದಷ್ಟು ಸಂಬಳ ಪಡೆಯುತ್ತಾರೆ ಎಂದು ತಿಳಿದು ಬಂದಿದೆ. ದೂರ ಪ್ರಯಾಣಿಸುವ ರೈಲ್ವೆಯಲ್ಲಿ ಶಿಫ್ಟ್ ಆಧಾರದ ಮೇಲೆ ಚಾಲಕರನ್ನು ಬದಲಾವಣೆ ಮಾಡಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top