ಸಮಾಚಾರ

ತುಂಬಾ ಕಾಸ್ಟ್ಲಿಆಯಿತು ಕರೀನಾ ಸಂಭಾವನೆ

ಬಾಲಿವುಡ್ ಖ್ಯಾತ ನಟಿ ಕರೀನಾ ಅವರು ನಟ ಸೈಫ್ ಅಲಿಖಾನ್ ಅವರನ್ನು ಮದುವೆ ಆಗಿದ್ದು ಅವರಿಗೆ ತೈಮೂರ್ ಎಂಬ ಮಗನಿದ್ದು ಇದೆಲ್ಲ ನಿಮಗೆ ಗೊತ್ತಿರುವ ವಿಚಾರ. ಮದುವೆ ಆದ ಮೇಲೆ ನಟಿಯರ ಸಂಭಾವನೆ ಕಡಿಮೆ ಆಗುತ್ತೆ ಎಂಬ ಮಾತು ಬಾಲಿವುಡ್ ವಲಯದಲ್ಲಿ ಹಿಂದಿನಿಂದಲೂ ನಾವು ಕೇಳುತ್ತಲೇ ಇದ್ದೇವೆ. ಇದೆಲ್ಲ ಸುಳ್ಳು ಎಂಬುದನ್ನು ಕರಿನಾ ಕಪೂರ್ ಸಾಭೀತು ಮಾಡಿದ್ದಾರೆ.

ಒಂದು ಮಗುವಿನ ತಾಯಿಯಾಗಿರುವ ಕರಿನಾ ಇತ್ತೀಚಿಗೆ ‘ವೀರೇ ದಿ ವೆಡ್ಡಿಂಗ್’ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದೆ ತಡ ಸಾಲು ಸಾಲು ಆಫರ್ ಗಳು ಕರಿನಾಳನ್ನು ಹುಡುಕಿಕೊಂಡು ಬರುತ್ತಿವೆ ಎನ್ನಲಾಗಿದೆ. ಆದರೆ ಕರೀನಾ ಮಾತ್ರ ಆಫರ್ ಒಪ್ಪಿಕೊಳ್ಳಲು ದೊಡ್ಡ ಬೇಡಿಕೆಯನ್ನೇ ಇಡುತ್ತಿದ್ದಾರೆ ಎನ್ನಲಾಗಿದೆ. ಮುಂದೆ ಓದಿ.

 

 

‘ವೀರೇ ದಿ ವೆಡ್ಡಿಂಗ್’ ಸಿನಿಮಾದಲ್ಲಿ ಕರಿನಾ 7 ಕೋಟಿ ಸಂಭಾವನೆ ಪಡೆದಿದ್ದರು ಈ ಸಿನಿಮಾ ಹಿಟ್ ಆಗುತ್ತಿದ್ದಂತೆ ಕರೀನಾಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಈಗ ಬರೋಬ್ಬರಿ 10 ಕೋಟಿ ಬೇಡಿಕೆ ಇಡುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಕೇಳಿ ಉಳಿದ ಬಾಲಿವುಡ್ ನಟಿ ಮಣಿಯರು ಅಚ್ಚರಿ ಆಗಿದ್ದಾರೆ ಎನ್ನಲಾಗಿದೆ.

ಕರಿನಾ ಕಪೂರ್ ಅವರು ಸುಮಾರು 18 ವರ್ಷಗಳಿಂದ ಬಾಲಿವುಡ್ ರಂಗದಲ್ಲಿ ಅಭಿನಯ ಮಾಡುತ್ತಿದ್ದು ಸೋಲು-ಗೆಲುವು, ಪ್ರಶಸ್ತಿ, ಟೀಕೆ ಹೀಗೆ ಎಲ್ಲದಕ್ಕೂ ಒಳಗಾದವರು. ಆದಾಗ್ಯೂ ಕರೀನಾ ಬೇಡಿಕೆ ಮಾತ್ರ ಕುಗ್ಗಿಲ್ಲ. ಇನ್ನೂ ಟಾಪ್ ಹಿರೋಯಿನ್ ಗಳ ಸಾಲಿನಲ್ಲಿಯೇ ಇದ್ದಾರೆ. ವಿವಾಹ ಆಗಿ, ಒಂದು ಮಗುವಿನ ತಾಯಿ ಆದ ಮೇಲೂ ಕರೀನಾ ಅತಿ ಹೆಚ್ಚು ಸಂಭಾವನೆ ಪಡೆಯುವ ದೀಪಿಕಾ ಪಡುಕೋಣೆ ಮತ್ತು ಕಂಗನಾ ರನಾವತ್​ ಅವರ ಪಟ್ಟಿಯಲ್ಲಿ ಸೇರ್ಪಡೆ ಆಗಿರುವುದು ನಿಜಕ್ಕೂ ಗಮನಿಸಬೇಕಾದ ವಿಷಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top