ಮನೋರಂಜನೆ

ಜಗ್ಗೇಶ್ ಜೊತೆ ಸೇರಿ ‘ತೋತಾಪುರಿ’ ಕೀಳಲಿದ್ದಾಳೆ ನಟಿ ಕಾವ್ಯ ಶೆಟ್ಟಿ.

‘ನೀರ್‌ದೋಸೆ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಆ ಚಿತ್ರ ಸೆಟ್ಟೇರಿದಾಗಿನಿಂದ ಹಿಡಿದು ಬಿಡುಗಡೆಯಾದ ನಂತರವೂ ಸುದ್ದಿಯಲ್ಲೇ ಇತ್ತು. ಈಗ ಮತ್ತದೇ ‘ನೀರ್‌ದೋಸೆ’ಯ ಜೋಡಿ ಜಗ್ಗೇಶ್ ಮತ್ತು ವಿಜಯಪ್ರಸಾದ್ ಮತ್ತೊಂದು ಚಿತ್ರಕ್ಕಾಗಿ ಒಂದಾಗಿದ್ದಾರೆ.. ನೀರ್ದೋಸೆ ಸಿನಿಮಾ ನಂತರ ಲೇಡಿಸ್ ಟೈಲರ್ ಎಂಬ ಸಿನಿಮಾ ಮಾಡುವುದಾಗಿ ಘೋಷಿಸಿದ್ದ ನಿರ್ದೇಶಕ ವಿಜಯಪ್ರಸಾದ್ ಆ ಚಿತ್ರಕ್ಕೆ ಉಂಟಾದ ವಿಘ್ನಗಳಿಂದ ಬೇಸತ್ತು ಅದನ್ನು ಸ್ವಲ್ಪ ಕಾಲ ಮುಂದೂಡಿದ್ದಾರೆ..

ಅದಕ್ಕೂ ಮುಂಚೆ ಜಗ್ಗೇಶ್ ಜೊತೆ ಮತ್ತೆ ಕೂಡಿಕೊಂಡಿರುವ ವಿಜಯಪ್ರಸಾದ್ ಈಗ ‘ತೋತಾಪುರಿ’ ರುಚಿ ತೋರಿಸಲು ಬಂದಿದ್ದಾರೆ. ಜಗ್ಗೇಶ್ ಹೊಸ ಸಿನಿಮಾಗೆ ‘ತೋತಾಪುರಿ’ ಎಂಬ ವಿಭಿನ್ನ ಟೈಟಲ್ ಇಡಲಾಗಿದೆ. ಇದರ ಜೊತೆಗೆ ‘ತೊಟ್ ಕೀಳ್ ಬೇಕಷ್ಟೇ’ ಅಂತ ಕ್ಯಾಚಿ ಟ್ಯಾಗ್ ಲೈನ್ ಬರೆಯಲಾಗಿದೆ,. ಟೈಟಲ್ ನಿಂದಲೇ ಆಕರ್ಷಿಸುತ್ತಿರುವ ಈ ಚಿತ್ರದ ಮುಹೂರ್ತ ಇಂದು ಶ್ರೀರಂಗಪಟ್ಟಣದಲ್ಲಿ ನಡೆದಿದೆ.

 

 

ಈ ಸಿನಿಮಾದಲ್ಲಿ ಜಗ್ಗೇಶ್ ಕೃಷಿಕನ ಪಾತ್ರವನ್ನು ಪೋಷಿಸುತ್ತಿದ್ದು ಈಗಾಗಲೇ ಅವರ ಪಾತ್ರದ ಲುಕ್ ರಿವೀಲ್ ಮಾಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೆಲ ಫೋಟೋಗಳನ್ನು ಶೇರ್ ಮಾಡಿರುವ ಜಗ್ಗೇಶ್ ”ಇದು ಬಹಳ ಅದ್ಬುತ ಕಥೆ. ನೀರ್ ದೋಸೆ ಗಿಂತ ಎರಡು ಹೆಜ್ಜೆ ಮುಂದೆ” ಎಂದು ಬರೆದುಕೊಂಡಿದ್ದಾರೆ.. ಚಿತ್ರದಲ್ಲಿ ಜಗ್ಗೇಶ್’ಗೆ ನಾಯಕಿಯಾಗಿ ಕಾವ್ಯ ಶೆಟ್ಟಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ಸುಮನಾ ರಂಗನಾಥ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಹಿಂದೆ ಶಿವರಾಜಕುಮಾರ್ ನಟನೆಯ ‘ಶಿವಲಿಂಗ’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಕೆ ಎ ಸುರೇಶ್ ಅವರೇ ‘ತೋತಾಪುರಿ’ ಸಿನಿಮಾವನ್ನು ಕೂಡ ನಿರ್ಮಿಸುತ್ತಿದ್ದಾರೆ. ಉಳಿದಂತೆ ಅನೂಪ್ ಸೀಳೀನ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದೆ. ಈ ಸಿನಿಮಾವನ್ನ 2019ಕ್ಕೆ ತೆರೆಗೆ ತರೋದು ಪ್ಲಾನ್‌ನಂತೆ.

ಜಗ್ಗೇಶ್ ಮತ್ತು ವಿಜಯಪ್ರಸಾದ್ ಕನ್ನಡ ಚಿತ್ರರಂಗದ ಅಪರೂಪದ ಕಾಂಬಿನೇಷನ್ ಮತ್ತು ಪ್ರತಿಭಾವಂತ ಜೋಡಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ನೀರ್‌ದೋಸೆ ಸಿನಿಮಾದಲ್ಲಿ ನೋಡುಗರನ್ನು ಮೋಡಿ ಮಾಡಿದ್ದ ಈ ಜೋಡಿ ಈಗ ‘ತೋತಾಪುರಿ’ ಜೊತೆ ಸೇರಿದ್ದಾರೆ. ಮನರಂಜನೆಯ ಜೊತೆಗೆ ಗಂಭೀರವಾದ ಕಥಾವಸ್ತುವನ್ನು ಕಟ್ಟಿಕೊಡೋದು ವಿಜಯ ಪ್ರಸಾದ್ ಅವರ ಶೈಲಿ; ನವರಸಗಳೊಂದಿಗೆ ಪಾತ್ರಗಳಿಗೆ ಜೀವ ತುಂಬುವುದು ಜಗ್ಗೇಶ್ ಅವರ ರೀತಿ. ಇನ್ನು ‘ತೋತಾಪುರಿ’ ಕೆಲಸ ಶುರು ಮಾಡೋದೊಂದೇ ಬಾಕಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top