ಸಮಾಚಾರ

ಈ ಸಂಕೇತಗಳು ಶ್ರೀಮಂತರಾಗುವ ಮುನ್ಸೂಚನೆ ನೀಡುತ್ತಂತೆ

ದುರ್ಗೆಯ ಮೂರು ಅವತಾರಗಳಲ್ಲಿ ದೇವತೆ ಲಕ್ಷ್ಮಿ ಕೂಡ ಒಬ್ಬಳು. ಲಕ್ಷ್ಮಿಯನ್ನು ಸಂಪತ್ತಿನ ಸಂಕೇತವೆಂದೇ ಪರಿಗಣಿಸಲಾಗುತ್ತದೆ. ಲಕ್ಷ್ಮಿಯನ್ನು ಭಕ್ತಿಯಿಂದ ಆರಾಧಿಸಿದರೆ ಶ್ರೀಮಂತಿಕೆ ಹಾಗೂ ಸುಖ-ಸಂತೋಷ ಲಭಿಸುತ್ತದೆ ಎಂಬ ನಂಬಿಕೆ ಇದೆ. ಲಕ್ಷ್ಮಿ ದೇವಿ ಅನುಗ್ರಹ ಇಲ್ಲದೆ ಮನೆ ಮನೆಯೇ ಅಲ್ಲ,ಏಕೆಂದರೆ ಆ ಮಹಾ ತಾಯಿ ನಮಗೆ ಧನಪ್ರಾಪ್ರಿಯನ್ನು ಮಾತ್ರವೇ ಅಲ್ಲದೆ ನಮಗೆ ಸುಖ ಶಾಂತಿ ನೆಮ್ಮದಿ ಆರೋಗ್ಯವನ್ನು ,ಅಖಂಡ ಐಶ್ವರ್ಯವನ್ನು ಕರುಣಿಸುತ್ತಾಳೆ.ಅಂತಹ ದೇವಿಯ ಅನಿಗ್ರಹವು ಸಿಗಬೇಕೆಂದರೆ ಅಷ್ಟೊಂದು ಸುಲಭವಲ್ಲ‌.

ನಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯು ಒಮ್ಮೆ ನೆಲೆಸಿದರೆ ಹಣದ ಹೊಳೆ ಹರಿಯುತ್ತದೆ. ಖುಷಿ, ಸಮೃದ್ಧಿಗೆ ಯಾವುದೇ ಕೊರತೆಯಾಗುವುದಿಲ್ಲ. ಆದ್ರೆ ಲಕ್ಷ್ಮಿ ಒಂದು ಜಾಗದಲ್ಲಿ ತುಂಬಾ ಸಮಯ ನೆಲೆಸುವುದಿಲ್ಲ. ತಾಯಿ ಲಕ್ಷ್ಮಿ ಚಂಚಲೆ. ಆದ್ರೆ ಲಕ್ಷ್ಮಿ ಕೃಪೆಗೂ ಮುನ್ನವೇ ಕೆಲವೊಂದು ಸಂಕೇತಗಳು ಲಕ್ಷ್ಮಿ ಕೃಪೆಗೆ ಪಾತ್ರರಾಗಲಿದ್ದೇವೆಂಬ ಮುನ್ಸೂಚನೆಗಳನ್ನು ನಮಗೆ ನೀಡುತ್ತವೆ.

 

 

*ಬೆಳಿಗ್ಗೆ ಸಮಯದಲ್ಲಿ ಕುಳಿತಿರುವ ಗೂಬೆಯನ್ನು ನೋಡಿದ್ರೆ ಅಥವಾ ಧ್ವನಿ ಕೇಳಿದ್ರೆ ಹಣ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಲಕ್ಷ್ಮಿ ವಾಹನ ಗೂಬೆ ಕಾಣಿಸಿದರೆ ಲಕ್ಷ್ಮಿ ನಿಮ್ಮ ಮೇಲೆ ಕೃಪೆ ತೋರಿದ್ದಾಳೆ ಎಂದು ಅರ್ಥ.

 

*ನಿಮ್ಮ ಮನೆಯ ಸುತ್ತ ಮುತ್ತಲಿನ ವಾತಾವರಣದಲ್ಲಿ ಹಸಿರು ಬಣ್ಣದ ವಸ್ತುಗಳು ಕಾಣಿಸಲು ಶುರುವಾದರೆ ನಿಮಗೆ ಲಕ್ಷ್ಮಿ ಒಲೆಯುತ್ತಿದ್ದಾಳೆ ಎಂದು ಅರ್ಥ.

 

*ಬೆಳಿಗ್ಗೆ ಎದ್ದ ಕೂಡಲೇ ಯಾರ ಕೈಲಾದರೂ ಪೊರಕೆ ಕಂಡರೆ ನಿಮಗೆ ಸದ್ಯದಲ್ಲೇ ಧನಲಾಭ ಆಗುವ ಸೂಚಕ.

 

*ಮುಂಜಾನೆಯ ಸಮಯದಲ್ಲಿ ಕಬ್ಬು ಕಂಡರೆ ಅತಿ ಉತ್ತಮ, ಇದು ಧನಲಾಭವನ್ನು ಸೂಚಿಸುತ್ತದೆ.

 

*ಬೆಳಿಗ್ಗೆ ಎದ್ದಾಗ ಶಂಖದ ಧ್ವನಿ ಕೇಳಿದರೆ ಕೂಡ ನಿಮಗೆ ಧನ ಲಾಭ ಆಗಲಿದೆ ಎಂಬ ಸೂಚಕ ಇರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top