ಮನೋರಂಜನೆ

ನಟಿ ಅಪೇಕ್ಷ ಜೊತೆಗೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಪವನ್ ಒಡೆಯರ್.

ಗೋವಿಂದಾಯನಮಃ ಸಿನಿಮಾ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿ ಸ್ಟಾರ್ ಡೈರೆಕ್ಟರ್ ಆಗಿ ಬೆಳೆದು ನಿಂತಿರುವ ನಿರ್ದೇಶಕ ಪವನ್​ ಒಡೆಯರ್ ಇಂದು​ ವೈವಾಹಿಕ ಜೀವನಕ್ಕೆ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ. ಟಿ.ಎನ್​​​ ಸೀತಾರಾಮ್​​ ನಿರ್ದೇಶನದ ಕಾಫಿತೋಟ ಚಿತ್ರದ ನಾಯಕಿ ಅಪೇಕ್ಷಾ ಪುರೋಹಿತ್​​​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪವನ್ ಬಾಗಲಕೋಟೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಅಪೇಕ್ಷ ಕುತ್ತಿಗೆಗೆ ತಾಳಿ ಕಟ್ಟಿದ್ದಾರೆ.

 

 

ನಟಿ ಅಪೇಕ್ಷಾ ಪುರೋಹಿತ್ ಬಾಗಲಕೋಟೆ ಮೂಲದವರು, ಹಾಗಾಗಿ ತನ್ನೂರಿನಲ್ಲೇ ಮದುವೆ ಮಾಡಿಕೊಂಡಿದ್ದಾರೆ. ಅಲ್ಲಿನ ವಿದ್ಯಗಿರಿಯಲ್ಲಿರುವ ಗೌರಿಶಂಕರ್ ಕಲ್ಯಾಣ ಮಂಟಪದಲ್ಲಿ ಈ ಮದುವೆ ಸಮಾರಂಭ ಕಾರ್ಯಕ್ರಮ ನಡೆಯಿತು. ಇನ್ನು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ಬಾಗಲಕೋಟೆಯಲ್ಲಿಯೇ ನಿರ್ದೇಶಕ ಪವನ್ ಒಡೆಯರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಬ್ರಾಹ್ಮಣ ಸಂಪ್ರದಾಯದಂತೆ ನಡೆದ ಈ ಮದುವೆಯಲ್ಲಿ ಎರಡೂ ಕುಟುಂಬದ ಸಂಭಂದಿಕರು ಹಾಗೂ ಸ್ನೇಹಿತರು ಸೇರಿದಂತೆ ಚಿತ್ರರಂಗದಿಂದ ಅನೇಕ ಕಲಾವಿದರೂ ಕೂಡ ಭಾಗಿಯಾಗಿದ್ದರು. ಸದ್ಯ ನಿರ್ದೇಶಕ ಪವನ್ ಒಡೆಯರ್ ಅವರು ಪುನೀತ್ ರಾಜಕುಮಾರ್ ನಟನೆಯಲ್ಲಿ ಮೂಡಿಬರುತ್ತಿರುವ ‘ನಟಸಾರ್ವಭೌಮ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top