fbpx
ಸಮಾಚಾರ

ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುತ್ತೇವೆಂದು ಹಣ ಸಂಗ್ರಹಿಸಿ ಯಾಮಾರಿಸುವ ಮೋಸಗಾರರೂ ಇದ್ದಾರೆ ಎಚ್ಚರಿಕೆ.

ಧಾರಾಕಾರ ಮಳೆಗೆ ಕೊಚ್ಚಿ ಹೋಗುತ್ತಿರುವ ಕೊಡಗು ಅಕ್ಷರಶ ಕಂಗಾಲಾಗಿ ಹೋಗಿದೆ. ಕೊಡಗು ಸೇರಿದಂತೆ ರಾಜ್ಯದ ವಿವಿದೆಡೆ ಧಾರಾಕಾರ ಮಳೆ ಮುಂದುವರಿದಿದ್ದು ಮಹಾಮಳೆಗೆ ಇಡೀ ಜನರ ಜೀವನ ಅಕ್ಷರಶಃ ಕೊಚ್ಚಿಹೋಗಿದೆ.. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ರಾಜ್ಯ ಸರ್ಕಾರ, ರಾಜ್ಯದ ಜನತೆ, ಚಿತ್ರರಂಗ, ಸ್ಟಾರ್ ನಟರ ಅಭಿಮಾನಿ ಸಂಘಗಳು ಸೇರಿದಂತೆ ಅನೇಕರು ಅದ್ಭುತವಾಗಿ ಸ್ಪಂದಿಸಿದ್ದಾರೆ.. ಜನರ ಇಂಥಾ ಉದಾರ ಗುಣ ನಿಜಕ್ಕೂ ಶ್ಲಾಘನೀಯ. ಆದ್ರೆ ಇಂಥಾ ಮುಗ್ದ ಜನರ ಉದಾರತೆಯನ್ನೇ ಬಂಡವಾಳವನ್ನಾಗಿಟ್ಟುಕೊಂಡ ಕೆಲ ದಗಾಕೋರರು ಸಂತ್ರಸ್ತರಿಗೆ ನೆರವಾಗುತ್ತೇವೆ ಎಂದು ಹಣ ಸಂಗ್ರಹಿಸಿ ತಂತಮ್ಮ ತೆವಲುಗಳನ್ನು ತೀರಿಸಿಕೊಳ್ಳುತ್ತಿರುವ ವಿಚಾರ ಕೇಳಿಬರುತ್ತಿದೆ..

 

 

ಅನೇಕರು ಪ್ರವಾಹ ಸಂತ್ರಸ್ತರ ಪರಿಹಾರಕ್ಕಾಗಿ ಹಣ ಸಂಗ್ರಹಿಸುತ್ತಿದ್ದೇವೆ ಎಂದೇಳಿ ತಮ್ಮ ವಯಕ್ತಿಕ ಖಾತೆ ಸಂಖ್ಯೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀಡಿ ತಮ್ಮ ಖಾತೆಗೆ ಹಣವನ್ನು ತುಂಬಿಸಿಕೊಳ್ಳುತ್ತಿದ್ದಾರೆ.. ಊರಿಗೆ ಊರೇ ಕೊಚ್ಚಿ ಹೋಗುತ್ತಿರುವ ಇಂಥಾ ಸಮಯದಲ್ಲೂ ಕೆಲವರು ಇಂಥಾ ನೀಚ ಕೆಲಸಕ್ಕೆ ಇಳಿದಿರುವುದು ನಿಜಕ್ಕೂ ದೊಡ್ಡ ದುರಂತ.. ಇಂಥಾ ಮೋಸಗಾರರ ಕಪಟಕ್ಕೆ ಜನರು ಬಲಿಯಾಗಬಾರದು ಮತ್ತು ನೀವು ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ಯಾರೋ ಅಪಾಪೋಲಿಗಳಿಗೆ ನೀಡಿ ವ್ಯರ್ಥ ಮಾಡಬಾರದು ಎಂದು ಪ್ರಜ್ಞಾವಂತ ಜನರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಹಾಗೊಮ್ಮೆ ನೀವು ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಬೇಕು ಎಂದ್ರೆ ಯಾವುದಾದರೂ ಪ್ರತಿಷ್ಠಿತ ಸಂಘ ಸಂಸ್ಥೆಗಳು ಸಂಗ್ರಹಿಸುತ್ತಿರುವ ಪರಿಹಾರ ನಿಧಿಗೊ, ನಿಮಗೆ ನಂಬಿಕೆ ಇರುವ ಸಂಘಟನೆ ಸಂಗ್ರಹಿಸುತ್ತಿರೋ ನಿಧಿಗೊ ಅಥವಾ ಸಿಎಂ ರಿಲೀಫ್ ಫಂಡ್’ಗೋ ನೇರವಾಗಿ ಜಮೆ ಮಾಡಿ.. ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣದಲ್ಲಿ ಕಾಣುವ ಅಪರಿಚಿತ ಖಾತೆ ಸಂಖ್ಯೆಗಳಿಗೆ ಹಣ ಜಮೆ ಮಾಡಿ ವ್ಯರ್ಥ ಮಾಡಬೇಡಿ.

 

ಈ ಬಗ್ಗೆ ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದಕ್ಕೆ, ತನ್ನ ಸ್ವಂತ ಖಾತೆ ಸಂಖ್ಯೆಯನ್ನು ಫೇಸ್ಬುಕ್ ನಲ್ಲಿ ಹಾಕಿ ಹಣ ಜಮಾ ಮಾಡಿಸಿಕೊಳ್ಳುತ್ತಿದ್ದ ಖದೀಮನಿಂದ ಬಂದ ಈಗಿದೆ ಉತ್ತರ ನೋಡಿ.

 

ಇದು ಕೊಡವ ಸಮಾಜದ ಅಕೌಂಟ್ ನಂಬರ್ ಅಲ್ಲ,. ಕೊಡವ ಸಮಾಜಕ್ಕೆ ಇರೋದು ಒಂದೇ ಖಾತೆ ಸಂಖ್ಯೆ ಅದಕ್ಕೆ ಮಾತ್ರ ಹಣ ಜಮೆ ಮಾಡತಕ್ಕದ್ದು. ಅದರ ಅಧಿಕೃತ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕೆಳಗೆ ನೀಡಲಾಗಿದೆ.

ಇದು ಕೊಡವ ಸಮಾಜದ ಅಕೌಂಟ್ ನಂಬರ್ ಅಲ್ಲ,. ಕೊಡವ ಸಮಾಜಕ್ಕೆ ಇರೋದು ಒಂದೇ ಖಾತೆ ಸಂಖ್ಯೆ ಅದಕ್ಕೆ ಮಾತ್ರ ಹಣ ಜಮೆ ಮಾಡತಕ್ಕದ್ದು. ಅದರ ಅಧಿಕೃತ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕೆಳಗೆ ನೀಡಲಾಗಿದೆ.

 

ಪರಿಹಾರ ನಿಧಿಗೆ ಹಣ ನೀಡುವುದು ಹೇಗೆ:
ಮುಖ್ಯಮಂತ್ರಿ ಪರಿಹಾರ ನಿಧಿ: ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ ಗೆ ದೇಣಿಗೆ ನೀಡಲು ಬಯಸುವವರು ನೇರವಾಗಿ ಸಿಎಂ ಕಚೇರಿಗೆ ಭೇಟಿ ನೀಡಬಹುದು.. “ಮುಖ್ಯಮಂತ್ರಿ ವಿಕೋಪ ಪರಿಹಾರ ನಿಧಿ, ರೂಂ ನಂಬರ್‌ 235, ಎರಡನೇ ಮಹಡಿ, ವಿಧಾನಸೌಧ, ಬೆಂಗಳೂರು 560001ಕ್ಕೆ ಚೆಕ್‌ ಅಥವಾ ಡಿಡಿ ಕಳುಹಿಸಬಹುದು. ”

 

ಕೊಡಗು ಪರಿಹಾರ ನಿಧಿಗೆ ಧನ‌ಸಹಾಯ ಮಾಡಲು ಇಚ್ಛಿಸುವವರು ಕೆಳಗಿನ ಕೊಡವ ಸಮಾಜದ ಅಧಿಕೃತ ಖಾತೆಗೆ ಜಮಾ ಮಾಡಬಹುದಾಗಿದೆ:

state Bank of India, sultan palya branch
current account No.35940362881
IFSCode: SBIN0003982
account holder name: kodavamme trust(R)

 

A/c Name:
Kodava Samaja Flood Relief Fund Blr,
A/c No: 1370101084312,
IFSC Code CNRB0001370
Canara Bank, Vasantanagar Bangalore.

Kodava Samaja, Bangalore®
#7, 1st Main, Vasanthnagar,
Bangalore – 560 052.
Tel: 080-22260188 /080-22351088
www.kodavasamajabangalore.org

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top