ಅಬ್ಬಾ ಎಷ್ಟು ನೆನಪಿಟ್ಕೊಂಡ್ರುನು ಮರ್ತೊಗುತ್ತೆ ಅನ್ನೋರು ಈ 6 ಆಯುರ್ವೇದದ
ಮೂಲಿಕೆ ಬಳಸಿ ಜ್ಞಾಪಕ ಶಕ್ತಿ ಹೆಚ್ಚು ಮಾಡ್ಕೋಬಹುದು.
1. ರೋಸ್ಮರಿ
ರೋಸ್ಮರಿಯಲ್ಲಿ ರೋಸ್ಮರಿನಿಕ್ ಆಮ್ಲ ಮತ್ತು ಕಾರ್ನೋಸಿಕ್ ಆಮ್ಲ ದೇಹದ , ಅಸೆಟೈಕೋಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಇದು ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಪ್ರಮುಖ ಮೂಲಿಕೆ, ಅಸೆಟೈಕೋಲಿನ್ ನರ ಸಂಜ್ಞೆಗಳನ್ನು ನಿಭಾಯಿಸುವ ರಾಸಾಯನಿಕ.
ಒಂದೆರಡು ಎಲೆಗಳನ್ನು ತಿನ್ನಬಹುದು .
2. ಅಶ್ವಗಂಧ
ಬೀಟಾ-ಅಮಿಲಾಯ್ಡ್ ಪ್ರೋಟೀನ್ ಒಡೆಯುವ ಕ್ರಿಯೆಗೆ ನೆರವಾಗುತ್ತದೆ, ಈ ಸಂಯುಕ್ತ ಮೆದುಳಿನಲ್ಲಿ ಪ್ಲೇಕ್ ಉಂಟುಮಾಡಬಹುದು
ಜ್ಞಾಪಕ ಶಕ್ತಿ ಸುಧಾರಿಸುತ್ತದೆ , ದೃಶ್ಯ ರೂಪಕ ಜ್ಞಾಪಕ ಶಕ್ತಿ ಸುಧಾರಿಸುತ್ತದೆ , ಆಕ್ಸಿಡೇಟಿವ್ ಅಂಶಗಳು ಮೆದುಳಿನ ಒತ್ತಡ ಕಡಿಮೆ ಮಾಡಿ ನರಕೋಶದ ಅವನತಿ ತಡೆಯಲು ಸಹಾಯಮಾಡುತ್ತದೆ.ಕಾಲು ಚಮಚ ಅಶ್ವಗಂಧ ಪುಡಿಯನ್ನು ಟೀ ಮಾಡಿಕೊಂಡು ಕುಡಿಯಬಹುದು.
3. ಬ್ರಾಹ್ಮಿ
ಈ ಮೂಲಿಕೆ ಸಾಮಾನ್ಯವಾಗಿ ಮೆದುಳಿನ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ ಅಲ್ಲದೆ ಏಕಾಗ್ರತೆ ಹೆಚ್ಚಿಸುತ್ತದೆ.
ಬ್ರಾಹ್ಮಿ ಎಲೆಗಳಿಂದ ತೆಗೆದ ರಸವನ್ನು ದಿನಕ್ಕೆ 2 ಅಥವಾ 3 ಬಾರಿ ಒಂದು ಚಮಚ ಕುಡಿಯಬೇಕು.
4. ಸೇಜ್ , ಸಲ್ವಿ ತುಳಸಿ
ಇದರಲ್ಲಿರುವ ಸಿನೆಯೋಲ್ ಮತ್ತು ತುಜೆನ್ ಅಂಶಗಳು ಮಿದುಳಿನ ಕಾರ್ಯವನ್ನು ಉತ್ತೇಜಿಸುತ್ತದೆ.
ಅಷ್ಟೇ ಅಲ್ಲದೆ ಫ್ಲಾವೊನ್ಸ್, ಫ್ಲೇವನಾಯ್ಡ್ ಗ್ಲೈಕೋಸೈಡ್, ನಿಯಾಸಿನ್, ಟಾನ್ನಿಕ್ ಆಮ್ಲ ಮತ್ತು ಒಲಯಿಕ್ ಆಮ್ಲ ಅಂಶಗಳು
ಮಾನಸಿಕ ಜಾಗರೂಕತೆ ಮತ್ತು ಗಮನ , ಏಕಾಗ್ರತೆ ಹೆಚ್ಚಿಸುತ್ತದೆ
5. ಗಿಂಕ್ಗೊ ಬಿಲೋಬ
ಜ್ಞಾಪಕ ಶಕ್ತಿ ಮತ್ತು ಮಾನಸಿಕ ತೀಕ್ಷ್ಣತೆ ಹೆಚ್ಚಿಸುತ್ತದೆ .
6. ಗೋಟು ಕೋಲ ,ಒಂದೆಲಗ
ಜೀವಸತ್ವಗಳಾದ ಬಿ 1, ಬಿ 2 ಮತ್ತು ಬಿ 6. ಹೊಂದಿದ್ದು ಈ ಮೂಲಿಕೆ ರಕ್ತ ಪ್ರಚೋದಿಸುತ್ತದೆ ಮತ್ತು ಮೆದುಳಿನ ಏಕಾಗ್ರತೆ ಮತ್ತು ಗಮನ ಹೆಚ್ಚಿಸುತ್ತದೆ , ನರ ದೌರ್ಬಲ್ಯವನ್ನು ಸಹ ತಡೆಯುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
