ಸಮಾಚಾರ

ಪ್ರವಾಹ ಸಂತ್ರಸ್ತರ ಕಷ್ಟಕ್ಕೆ ಮಿಡಿದ ಬಾಲಕಿಯಿಂದ ತನ್ನ ಹೆಸರಿಗಿದ್ದ 1 ಎಕರೆ ಭೂಮಿ ದಾನ

ರಾಜ್ಯದ ಕೊಡಗು ಹಾಗು ಕೇರಳದಲ್ಲಿ ಸಂಭವಿಸಿರುವ ಭೀಕರ ಮಳೆಗೆ ತತ್ತರಿಸುವ ಜನರಿಗೆ ದೇಶದ ಜನರೆಲ್ಲಾ ಸಹಾಯದ ಹಸ್ತ ಚಾಚುತ್ತಿದ್ದಾರೆ. ಈ ನಡುವೆ ಕೇರಳದ ಬಾಲಕಿಯೊಬ್ಬಳು ತನಗೆ ತಂದೆ ನೀಡಿದ್ದ ಒಂದು ಎಕರೆ ಭೂಮಿಯನ್ನು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ದಾನವಾಗಿ ನೀಡಿ ಮಾನವೀಯತೆ ಮೆರೆದಿದ್ದಾಳೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಕೇರಳ ರಾಜ್ಯದ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವ ವಿದ್ಯಾರ್ಥಿನಿ, ಸರ್, ಅಳಿಲು ಸೇವೆ ಎಂಬುದು ಇದೆ. ನಮ್ಮ ಕೇರಳದ ಈ ಪರಿಸ್ಥಿತಿಯನ್ನು ನೋಡಿ ಈ ಶಾಲೆಯ ವಿದ್ಯಾರ್ಥಿನಿ ಆದ ನಾನು ಹಾಗು ನನ್ನ ತಮ್ಮ ಬ್ರಹ್ಮ ಇಬ್ಬರೂ ಸೇರಿ ನಮ್ಮ ಸಿಎಂ ಪರಿಹಾರ ನಿಧಿಗೆ ಸಣ್ಣ ದೇಣಿಗೆಯನ್ನು ನೀಡಬಯಸುತ್ತೇವೆ ಎಂದು ಹೇಳಿದ್ದಾರೆ. ನಮ್ಮ ತಂದೆಯು ರೈತನಾಗಿದ್ದು ನಮ್ಮ ಭವಿಷ್ಯಕ್ಕೆ ನಮಗೆ ಒಂದು ಎಕರೆ ಜಮೀನು ನೀಡಿದ್ದು ಅದನ್ನು ನಾವು ಪ್ರವಾಹ ಸಂತ್ರಸ್ತರಿಗೆ ನೀಡಲು ಬಯಸುತ್ತೇವೆ ಎಂದು ಬರೆದಿದ್ದಾರೆ.

 

 

ಬಾಲಕಿಯ ಹೆಸರು ಸ್ವಾಹ ಎಂದು ತಿಳಿದು ಬಂದಿದೆ ಹಾಗು ಆಕೆಯ ಸಹೋದರನ ಹೆಸರು ಬ್ರಹ್ಮ ಎಂದು ತಿಳಿದು ಬಂದಿದೆ. ಬಾಲಕಿ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ಬಾಲಕಿ ತನ್ನ ಜೀವನಾಂಶಕ್ಕೆ ಇದ್ದ ಒಂದು ಎಕರೆ ಜಮೀನನ್ನು ಕೂಡ ದಾನ ಮಾಡಲು ಮುಂದಾಗಿರುವುದು ಅನೇಕ ಯುವ ಜನತೆಗೆ ಸ್ಫೂರ್ತಿ ಆಗಿದ್ದು ನಾ, ಮುಂದು ನೀ ಮುಂದು ಎಂದು ಸಂತ್ರಸ್ತರ ನೆರವಿಗೆ ಧಾವಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ದೇವರ ದಯೆಯಿಂದ ಮಳೆ ಶಾಂತವಾಗಿ ಎಲ್ಲವು ಸಹಜ ಸ್ಥಿತಿಗೆ ಮರಳಲಿ ಎಂದು ಆಶಿಸೋಣ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top