ಸಮಾಚಾರ

ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್ ಎಂಗೇಜ್‌ಮೆಂಟ್‌ನ ಅಪರೂಪದ ಫೋಟೋಗಳಿವು

ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಹಾಗು ಅಮೇರಿಕಾ ಗಾಯಕ ನಿಕ್ ಜೋನ್ಸ್ ಕಡೆಗೂ ಉಂಗುರ ಬದಲಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲಿಯವರೆಗೂ ಅಭಿಮಾನಿಗಳಲ್ಲಿ ಪ್ರಿಯಾಂಕ ಹಾಗು ನಿಕ್ ಸಂಬಂಧದ ಬಗ್ಗೆ ಇದ್ದ ಎಲ್ಲಾ ವದಂತಿಗಳಿಗೂ ಈಗ ಬ್ರೇಕ್ ಬಿದ್ದಂತೆ ಆಗಿದೆ ಎಂದು ತಿಳಿದು ಬಂದಿದೆ.

ಮುಂಬೈ ನಗರದಲ್ಲಿ ಇರುವ ಪ್ರಿಯಾಂಕಾ ಚೋಪ್ರಾ ಮನೆಯಲ್ಲಿ ಭಾರತೀಯ ಸಂಪ್ರದಾಯದಂತೆ ನಡೆದ ನಿಶ್ಚಿತಾರ್ಥದಲ್ಲಿ ಹಳದಿ ಬಣ್ಣದ ಉಡುಪು ಧರಿಸಿ ಪ್ರಿಯಂಕ ಕಂಗೊಳಿಸಿದರೆ, ನಿಕ್ ಜಾನ್ಸ್ ಶ್ವೇತ ವರ್ಣದ ಕುರ್ತಾ ಧರಿಸಿ ಎಲ್ಲರ ಗಮನ ಸೆಳೆದರು. ಈಗ ಅವರ ನಿಶ್ಚಿತಾರ್ಥದ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

 

 

ಪ್ರಿಯಾಂಕಾ ಹಾಗು ನಿಕ್ ವಿವಾಹ ದಿನಾಂಕ ಇನ್ನೂ ನಿಶ್ಚಿತವಾಗಿಲ್ಲ. ಪ್ರಿಯಾಂಕ ಹಾಗು ನಿಕ್‌ ಸಹಿತ ವಿರುಷ್ಕಾ ದಂಪತಿಗಳಂತೆ ಡೆಸ್ಟಿನೇಷನ್‌ ಮದುವೆಗೆ ಆದ್ಯತೆ ನೀಡುತ್ತಿದ್ದಾರೆ ಎನ್ನಲಾಗಿದೆ, ವಿದೇಶದಲ್ಲಿ ಇರುವ ಸುಂದರ ತಾಣದಲ್ಲಿ ದಂಪತಿಗಳಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

 

ನಿಶ್ಚಿತಾರ್ಥ ಸಮಾರಂಭದಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಸಹೋದರಿ ಪರಿಣಿತಿ ಚೋಪ್ರಾ, ಸಲ್ಮಾನ್‌ ಖಾನ್‌ ತಂಗಿ ಅರ್ಪಿತಾ ಖಾನ್‌, ಆಲಿಯಾ ಭಟ್‌, ಸಂಜಯ್‌ ಲೀಲಾ ಭನ್ಸಾಲಿ, ಅಂಬಾನಿ ಕುಟುಂಬ, ವಿಶಾಲ್‌ ಭಾರಧ್ವಾಜ್‌ ಮುಂತಾದವರು ಪಾಲ್ಗೊಂಡಿದ್ದರು. ತಮ್ಮ ಹೆತ್ತವರ ಸಮ್ಮುಖದಲ್ಲಿ ಪ್ರಿಯಾಂಕರಿಗೆ ಎಂಗೇಜ್‌ಮೆಂಟ್‌ ರಿಂಗ್‌ ತೊಡಿಸಿದ ನಿಕ್‌ ಜೊನಾಸ್‌, ಮದುವೆಗೂ ಭರ್ಜರಿ ಪ್ಲಾನಿಂಗ್‌ ಹಾಕಿಕೊಂಡಿದ್ದಾರಂತೆ. ಎಂಗೇಜ್‌ಮೆಂಟ್‌ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಈ ಜೋಡಿ, ನಿಶ್ಚಿತಾರ್ಥ ಪಾರ್ಟಿಗೆ ಕೆಲವೇ ಕೆಲವು ಆತ್ಮೀಯರನ್ನು ಆಹ್ವಾನ ನೀಡಿದ್ದರು ಎಂದು ತಿಳಿದು ಬಂದಿದೆ. ಮದುವೆ ಬಳಿಕ ಪ್ರಿಯಾಂಕಾ ಕೆಲವು ತಿಂಗಳು ಸಿನಿಮಾ ರಂಗದಿಂದ ದೂರ ಉಳಿವ ಸಾಧ್ಯತೆ ಇದೆ ಎನ್ನಲಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top