ಮನೋರಂಜನೆ

ರವಿಚಂದ್ರನ್ ಉಪೇಂದ್ರ ಮೆಗಾ ಕಾಂಬಿನೇಷನ್ ಚಿತ್ರಕ್ಕೆ ಸಿಕ್ತು ಅದ್ದೂರಿ ಚಾಲನೆ.

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ಟ್ರೆಂಡ್ ಆಗಿರುವ ಮಲ್ಟಿಸ್ಟಾರ್ ಸಿನಿಮಾಗಳ ಸಾಲಿಗೆ ಮತ್ತೊಂದು ಮೆಗಾ ಕಾಂಬಿನೇಷನ್ ಸಿನಿಮಾ ಸೇರಿಕೊಂಡಿದೆ. ದಿ ವಿಲನ್, ಕುರುಕ್ಷೇತ್ರ, ಲೈಫ್ ಜೊತೆ ಒಂದ್ ಸೆಲ್ಫಿ ಸೇರಿದಂತೆ ಅನೇಕ ಮಲ್ಟಿಸ್ಟಾರ್ ಚಿತ್ರಗಳು ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿವೆ. ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಸೆಟ್ಟೇರಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದು ದಿನಗಳೇ ಕಳೆದಿವೆ. ಈಗಾಗಲೇ ಈ ಮೆಗಾ ಕಾಂಬಿನೇಷನ್ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಒಂದು ರೀತಿಯ ನಿರೀಕ್ಷೆ, ಒಂದಷ್ಟು ಕುತೂಹಲ ಹುಟ್ಟುಕೊಂಡಿವೆ.

 

 

ಈ ಮೆಗಾ ಕಾಂಬಿನೇಷನ್​ನ ಚಿತ್ರಕ್ಕೆ ಇಂದು ಚಾಲನೆ ದೊರೆತಿದ್ದು ಬಸವನಗುಡಿ ದೊಡ್ಡಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಕಾರ್ಯ ನೆರವೇರಿತು. ಇನ್ನು ಈ ಚಿತ್ರಕ್ಕೆ ರವಿಚಂದ್ರ ಎಂಬ ಟೈಟಲ್ ಇಡಲಾಗಿದ್ದು ಎನ್. ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದರೇ, ಕನಕಪುರ ಆರ್. ಶ್ರೀನಿವಾಸ್ ಬಂಡವಾಳ ಹೂಡಲಿದ್ದಾರೇ.

ಈ ಸಿನಿಮಾ ತೆಲುಗು ಸಿನಿಮಾವೊಂದರ ರಿಮೇಕ್ ಎಂಬ ಮಾತುಗಳು ಕೇಳಿಬರುತ್ತಿವೆ. ತೆಲುಗಿನಲ್ಲಿ ರವಿತೇಜ ಹಾಗೂ ಪ್ರಕಾಶ್ ರೈ ನಟಿಸಿದ್ದ ‘ಬಲುಪು’ ಸಿನಿಮಾ ಇದಾಗಿದೆ ಎಂದು ಗಾಂಧಿನಗರದಲ್ಲಿ ಗುಸು ಗುಸು ಜೋರಾಗಿ ಕೇಳಿಸುತ್ತಿದೆ. ರವಿತೇಜ ಮಾಡಿದ್ದ ಪಾತ್ರವನ್ನು ಉಪೇಂದ್ರ ಮತ್ತು ಪ್ರಕಾಶ್ ರೈ ಪಾತ್ರದಲ್ಲಿ ರವಿಚಂದ್ರನ್ ನಟಿಸಲಿದ್ದಾರಂತೆ.. ಉಳಿದಂತೆ ಮಂಗಳೂರು ಬೆಡಗಿ ನಿಮಿಕಾ ಉಪ್ಪಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದು ಶಾನ್ವಿ ಶ್ರೀವಾಸ್ತವ್ ರವಿಚಂದ್ರನ್ ಅವರ ಮಗಳಾಗಿ ನಟಿಸಲಿದ್ದಾರಂತೆ.

ಉಳಿದಂತೆ ಚಿತ್ರಕ್ಕೆ ಸಂಭಂದಿಸಿದ ತಾರಾಗಣ ಮತ್ತು ತಾಂತ್ರಿಕ ವರ್ಗಕ್ಕೆ ಸಂಭಂದಿಸಿದ ಮಾಹಿತಿಗಳು ಇನ್ನಷ್ಟೇ ..ಸದ್ಯ ಉಪ್ಪಿ ‘ಐ ಲವ್ ಯೂ’ ಸಿನಿಮಾದಲ್ಲಿ ನಲ್ಲೀನರಾಗಿದ್ದರೆ ಅತ್ತ ರವಿಮಾಮ ‘ರಾಜೇಂದ್ರ ಪೊನ್ನಪ್ಪ’ ಚಿತ್ರದಲ್ಲಿ ಬ್ಯುಸಿಯಿದ್ದರೆ ಈ ಎರಡು ಸಿನಿಮಾ ಮುಗಿದ ಮೇಲೆ ಇಬ್ಬರ ಕಾಂಬಿನೇಷನ್ ನ ಸಿನಿಮಾ ಶೂಟಿಂಗ್ ನಡೆಯಲಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top