fbpx
ಮನೋರಂಜನೆ

ಕೊಡಗು ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ 10 ಲಕ್ಷ ರೂ ನೀಡಿದ ಶಿವರಾಜಕುಮಾರ್.

ಧಾರಾಕಾರ ಮಳೆಗೆ ಕೊಚ್ಚಿ ಹೋಗುತ್ತಿರುವ ಕೊಡಗು ಅಕ್ಷರಶ ಕಂಗಾಲಾಗಿ ಹೋಗಿದೆ. ಕೊಡಗು ಸೇರಿದಂತೆ ರಾಜ್ಯದ ವಿವಿದೆಡೆ ಧಾರಾಕಾರ ಮಳೆ ಮುಂದುವರಿದಿದ್ದು ಮಹಾಮಳೆಗೆ ಇಡೀ ಜನರ ಜೀವನ ಅಕ್ಷರಶಃ ಕೊಚ್ಚಿಹೋಗಿದೆ.. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ರಾಜ್ಯ ಸರ್ಕಾರ, ರಾಜ್ಯದ ಜನತೆ, ಚಿತ್ರರಂಗ, ಸ್ಟಾರ್ ನಟರ ಅಭಿಮಾನಿ ಸಂಘಗಳು ಸೇರಿದಂತೆ ಅನೇಕರು ಅದ್ಭುತವಾಗಿ ಸ್ಪಂದಿಸೋ ಮೂಲಕ ಕೊಡಗಿನ ಜನರ ಕಷ್ಟಕ್ಕೆ ಮುಗಿಬಿದ್ದು ಸಹಾಯ ಮಾಡುತ್ತಿದ್ದಾರೆ.. ಅದೇ ರೀತಿ ಹ್ಯಾಟ್ರಿಕ್ ಹೀರೊ ಶಿವಕರಜಕುಮಾರ್ ಅವರು ಕೂಡ ಕೊಡಗಿನ ನಿರಾಶ್ರಿತರ ನೋವಿಗೆ ಸ್ಪಂದಿಸಿದ್ದಾರೆ.

 

 

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ನೆರವು ನೀಡುವುದಾಗಿ ಶಿವರಾಜ್ ಕುಮಾರ್ ಹೇಳಿದ್ದು ಇಂದು (ಸೋಮವಾರ) ಸಂಜೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚೆಕ್ ನೀಡುವ ಮೂಲಕ ಸಂತ್ರಸ್ತರಿಗೆ ನೆರವಾಗುವುದಾಗಿ ಅವರು ಹೇಳಿದ್ದಾರೆ.. ಇದಕ್ಕೂ ಮುನ್ನ ಶಿವಣ್ಣನ ಸಹೋದರ ಪುನೀತ್ ರಾಜಕುಮಾರ್ ಅವರು ಕೂಡ ಕೊಡಗಿನಿಂದ ನಿರಾಶ್ರಿತರ ನೋವಿಗೆ ಸ್ಪಂದಿಸಿದ್ದು ಪ್ರವಾಹದಲ್ಲಿ ಮೃತ ಪಟ್ಟ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ ನೀಡುವುದಾಗಿ ಘೋಷಿಸಿದ್ದರು.. ಈಗ ಶಿವಣ್ಣನೂ ನಿರಾಶ್ರಿತರ ಕಷ್ಟಕ್ಕೆ ನೆರವಾಗೋ ಮೂಲಕ ಇತರೆ ನಟರಿಗೂ ದೊಡ್ಮನೆ ಹುಡುಗರು ಮಾದರಿಯಾಗಿದ್ದಾರೆ.

ಪರಿಹಾರ ನಿಧಿಗೆ ಹಣ ನೀಡುವುದು ಹೇಗೆ:
ಮುಖ್ಯಮಂತ್ರಿ ಪರಿಹಾರ ನಿಧಿ: ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ ಗೆ ದೇಣಿಗೆ ನೀಡಲು ಬಯಸುವವರು ನೇರವಾಗಿ ಸಿಎಂ ಕಚೇರಿಗೆ ಭೇಟಿ ನೀಡಬಹುದು.. “ಮುಖ್ಯಮಂತ್ರಿ ವಿಕೋಪ ಪರಿಹಾರ ನಿಧಿ, ರೂಂ ನಂಬರ್‌ 235, ಎರಡನೇ ಮಹಡಿ, ವಿಧಾನಸೌಧ, ಬೆಂಗಳೂರು 560001ಕ್ಕೆ ಚೆಕ್‌ ಅಥವಾ ಡಿಡಿ ಕಳುಹಿಸಬಹುದು.. ಹಾಗೆಯೇ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡಬಹುದು.

ಮುಖ್ಯಮಂತ್ರಿ ಪರಿಹಾರ ನಿಧಿಯ ಬ್ಯಾಂಕ್ ಖಾತೆ ಡೀಟೈಲ್ಸ್:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.
ವಿಧಾನ ಸೌದ ಶಾಖೆ.
ಖಾತೆ ಸಂಖ್ಯೆ: 37887098605
IFSC ಕೋಡ್ :SBIN0040277

ಕೊಡಗಿನಲ್ಲಿ ನಿಲ್ಲದ ಮಳೆರಾಯನ ಆರ್ಭಟ:
ಕೊಡಗು ಜಿಲ್ಲೆಯಲ್ಲಿ ಬಿಡುವಿಲ್ಲದೇ ಧಾರಾಕಾರ ಮಳೆ ಮುಂದುವರಿದಿದ್ದು ಮಹಾ ಮಳೆಗೆ ಇಡೀ ಕೊಡಗು ಜಿಲ್ಲೆಯೇ ಅಕ್ಷರಶಃ ಕೊಚ್ಚಿಹೋಗಿದೆ. ಭಾರಿ ಬಿರುಗಾಳಿ, ಮಹಾಮಳೆ ಮತ್ತು ಭೂಕುಸಿತದಲ್ಲಿ 10 ಮಂದಿ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದ್ದು 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈವರೆಗೂ 845ಕ್ಕೂ ಹೆಚ್ಚು ಮನೆಗಳು ಕುಸಿದಿವೆ, ನಿರಾಶ್ರಿತರಿಗಾಗಿ 40ಕ್ಕೂ ಹೆಚ್ಚು ಗಂಜಿ ಕೇಂದ್ರಗಳನ್ನ ತೆರೆಯಲಾಗಿದೆ ಎಂದು ವರದಿಯಾಗಿದೆ. 10ಕ್ಕೂ ಹೆಚ್ಚು ಗ್ರಾಮಗಳು ಖಾಲಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top