ಸಮಾಚಾರ

ಮಜಾ ಟಾಕೀಸ್ ಶೋ ನಲ್ಲಿ ಶ್ವೇತಾ ಚೆಂಗಪ್ಪ ರವರ ಸಂಭಾವನೆ ಎಷ್ಟು ಅಂತ ಗೊತ್ತಾ

ಕೊಡಗು ಮೂಲದ ನಟಿ ಶ್ವೇತಾ ಚಂಗಪ್ಪ ಕನ್ನಡ ಚಿತ್ರ ಹಾಗು ಕಿರುತೆರೆಯ ಚಿರಪರಿಚಿತ ನಟಿ, ನಿರೂಪಕಿ. ಈಗಾಗಲೇ ಅನೇಕ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಶ್ವೇತಾ ಗಳಿಸಿದ್ದಾರೆ. ಕಾದಂಬರಿ, ಅರುಂಧತಿ ಧಾರಾವಾಹಿ, ಯಾರಿಗುಂಟು ಯಾರಿಗಿಲ್ಲ ರಿಯಾಲಿಟಿ ಶೋ, ತಂಗಿಗಾಗಿ ಸಿನಿಮಾ ಮೂಲಕ ನಾಡಿನ ಮನೆಮಾತಾಗಿರುವ ಮುದ್ದುಮುಖದ ಗೃಹಿಣಿ. ಮೌಂಟ್ ಕಾರ್ಮೆಲ್ ಕಾಲೇಜಲ್ಲಿ ಓದಿರುವ ಶ್ವೇತಾ 10 ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯನ್ನು ಸೇರಿದ್ದರು. ಪ್ರಸ್ತುತ ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್ ಕಾರ್ಯಕ್ರಮದಲ್ಲಿ, ಕಾರ್ಯಕ್ರಮದ ನಿರೂಪಕಿ ಆಗಿದ್ದಾರೆ.

 

 

ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ‘ಮಜಾ ಟಾಕೀಸ್’ ವೀಕ್ಷಕರ ಮನಸೂರೆಗೊಂಡಿದ್ದು. ಮಜಾಟಾಕೀಸ್ ಕಾರ್ಯಕ್ರಮ ಸೃಜನ್, ಕುರಿ ಪ್ರತಾಪ್, ಶ್ವೇತ ಚೆಂಗಪ್ಪ,ಮನೋಹರ್, ದಯಾನಂದ್ ಮುಂತಾದವರಿಂದ ಬಹಳಷ್ಟು ಜನಪ್ರಿಯ ಆಯಿತು. ಇದರಲ್ಲಿ ಕುರಿ ಪ್ರತಾಪ್ ಮತ್ತು ಪವನ್ ಇದಕ್ಕೆ ಆಧಾರ ಸ್ಥಂಭಗಳು.ಇವರಿದ್ದರೆ ನಗುವಿದೆ ಬರವಿಲ್ಲ.

ಈ ಕಾರ್ಯಕ್ರಮದಲ್ಲಿ ಗಮನ ಸೆಳೆಯುತ್ತಿದ್ದ ಶ್ವೇತಾ ಚೆಂಗಪ್ಪ ರವರು ಎಷ್ಟು ಸಂಭಾವನೆ ಪಡೆಯುತ್ತಿದ್ದರು ಎಂದು ನೀವು ಯೋಚನೆ ಮಾಡುತ್ತಿದ್ದೀರಾ. ಶ್ವೇತ ಚೆಂಗಪ್ಪ ರವರ ಒಂದು ಎಪಿಸೋಡ್ ನ ಸಂಭಾವನೆ ಸುಮಾರು 30 ಸಾವಿರ ರೂಪಾಯಿ ಎಂದು ತಿಳಿದು ಬಂದಿದೆ.

ಈಗ ಮಜಾ ಟಾಕೀಸ್ ಷೋ ಮುಗಿದಿದ್ದು ಇನ್ನು ಸಿನಿಮಾಗಳತ್ತ ಮತ್ತೆ ಮುಖ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಶ್ವೇತ ಕನ್ನಡ ಸಿನಿಮಾ ರಂಗದ ಅದ್ಬುತ ಪ್ರತಿಭೆ ಆಗಿದ್ದು ಅವರಿಗೆ ಉತ್ತಮ ಅವಕಾಶ ಒದಗಿ ಬರಲಿ ಎಂದು ಆಶಿಸೋಣ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top