ಸಮಾಚಾರ

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ನಟಿ ಇನ್ನಿಲ್ಲ

ದಿವಂಗತ ನಟಿ ಶ್ರೀದೇವಿಯ ಇಂಗ್ಲೀಷ್- ವಿಂಗ್ಲೀಷ್ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡಿದ್ದ ನಟಿ ಸುಜಾತ ಕುಮಾರ್ ಕ್ಯಾನ್ಸರ್ ನಿಂದ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಬಹಳ ದಿನಗಳಿಂದ ಮೆಟಾಸ್ಟಟಿಕ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸುಜಾತಾ ಕುಮಾರ್ ಅವರು ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದು,

ಕೆಲವು ದಿನಗಳಿಂದ ಅವರನ್ನು ಲೀಲಾವತಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು ಆದರೆ ಚಿಕಿತ್ಸೆ ಫಲಕಾರಿ ಆಗದೆ ನಿಧನ ಹೊಂದಿದರು. ಸುಜಾತ ಸಹೋದರಿ ಸುಚಿತ್ರಾ ಕೃಷ್ಣಮೂರ್ತಿ ಟ್ವೀಟ್ ಮೂಲಕ ನಿಧನದ ಸುದ್ದಿ ತಿಳಿಸಿದ್ದಾರೆ.

 

 

ಸುಜಾತಾ ಅವರು ಕ್ಯಾನ್ಸರ್ ನ 4 ನೇ ಹಂತದಲ್ಲಿ ಇದ್ದರು. ಕೆಲ ಅಂಗಗಳು ಕೆಲಸ ನಿಲ್ಲಿಸಿ ಬಿಟ್ಟಿದ್ದವು. ನಟಿ ಸುಜಾತಾ ಇನ್ನಿಲ್ಲ. ಆಗಸ್ಟ್ 19,2018 ರ ರಾತ್ರಿ 11.26ಕ್ಕೆ ಸುಜಾತಾ ನಿಧನರಾಗಿದ್ದಾರೆ. ಜೀವನ ಇನ್ಮುಂದೆ ಮೊದಲಿನಂತಿರಲು ಸಾಧ್ಯವಿಲ್ಲ. ಆಗಸ್ಟ್ 20 ರ ಬೆಳಿಗ್ಗೆ ಸುಜಾತಾ ಅಂತ್ಯಕ್ರಿಯೆ ನಡೆಯಲಿದೆ ಎಂದು ಸುಚಿತ್ರಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

2012 ರಲ್ಲಿ ಬಂದ ಶ್ರೀದೇವಿಯವರ ಇಂಗ್ಲೀಷ್- ವಿಂಗ್ಲೀಷ್ ಚಿತ್ರದಲ್ಲಿ ಸುಜಾತಾ ಕುಮಾರ್ ನಟಿಸಿದ್ದರು. ಕರಣ್ ಜೋಹರ್ ರವರ ಗೋರಿ ತೇರೆ ಪ್ಯಾರ್ ಮೇ, ಆನಂದ್ ಎಲ್ ರೈಯವರ ರಾಂಜಾನ ಚಿತ್ರದಲ್ಲೂ ಅಭಿನಯಿಸಿದ್ದರು. ಟಿವಿ ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು. ಇಂಗ್ಲೀಷ್-ವಿಂಗ್ಲೀಷ್ ಚಿತ್ರ ಬಿಡುಗಡೆಗೂ ಮುನ್ನ 2012ರಲ್ಲಿ ಸುಜಾತಾ ಕ್ಯಾನ್ಸರ್ ನಿಂದ ಗುಣಮುಖನಾಗಿದ್ದೇನೆಂದು ಹೇಳಿದ್ದರು. ಇಂಗ್ಲೀಷ್ ವಿಂಗ್ಲೀಷ್ ಮೊದಲು ಕೆಲ ಸಿನೆಮಾಗಳಲ್ಲಿ ಸುಜಾತಾ ನಟಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top