ಮನೋರಂಜನೆ

ಅದ್ದೂರಿಯಾಗಿ ರಿಲೀಸ್ ಆಯ್ತು ‘ದಿ ವಿಲನ್’ ಚಿತ್ರದ ಆಡಿಯೋ- ಎಲ್ಲಾ ಹಾಡುಗಳು ಈಗ ಯೂಟ್ಯೂಬ್ ನಲ್ಲಿಯೂ ಲಭ್ಯ.

ದಿ ವಿಲನ್’ ಸದ್ಯ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಹವಾ ಎಬ್ಬಿಸಿರೋ ಸಿನಿಮಾ., ಆರು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿರುವ ಪ್ರೇಮ್ ‘ದಿ ವಿಲನ್’ ಸಿನಿಮಾ ಮೇಲಿನ ನಿರೀಕ್ಷೆಯನ್ನು ದಿನೇ ದಿನೇ ಹೆಚ್ಚಿಸುತ್ತಲೇ ಇದ್ದಾರೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಹಾಡುಗಳ ಅಬ್ಬರ ಕಂಡು ಅನೇಕರು ಬೆಚ್ಚಿಬಿದ್ದಿದ್ದಾರೆ.. ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುವ ವಿಲನ್ ಚಿತ್ರಕ್ಕಾಗಿ ಅಭಿಮಾನಿಗಳು ಕಾದು ಕಾದು ಸುಸ್ತೇದ್ದಿದ್ದಾರೆ.. ಇಂಥಾ ಅದ್ದೂರಿ ‘ದಿ ವಿಲನ್’ ಸಿನಿಮಾದ ಆಡಿಯೋ ಬಿಡುಗಡೆಯಾಗಿದೆ.

ಒಂದು ತಿಂಗಳಿಂದ ಒಂದೊಂದೇ ಹಾಡುಗಳನ್ನು ಯೌಟ್ಯೂಬ್ ನಲ್ಲಿ ಲಾಂಚ್ ಮಾಡುತ್ತಾ ಸೌಂಡ್ ಮಾಡುತ್ತಿದ್ದ ಪ್ರೇಮ್ ಇದೀಗ ಅದ್ದೂರಿ ಸಮಾರಂಭದ ಮೂಲಕ ಅಧಿಕೃತವಾಗಿ ಆಡಿಯೋ ಲಾಂಚ್ ಮಾಡಿದ್ದಾರೆ. ಭಾನುವಾರ ಬೆಂಗಳೂರಿನ ಹೆಬ್ಬಾಳ ಬಳಿಯ ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ‘ವೈಟ್ ಆರ್ಕೆಡ್’ನಲ್ಲಿ ಭಾನುವಾರ ಸಂಜೆ 6 ಗಂಟೆಗೆ ನಡೆದ ಸಮಾರಂಭದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರು ಆಡಿಯೋವನ್ನು ಲೋಕಾರ್ಪಣೆ ಮಾಡಿದರು. ಆಡಿಯೋ ಸಮಾರಂಭದಲ್ಲಿ ಶಿವರಾಜಕುಮಾರ್, ಕಿಚ್ಚ ಸುದೀಪ್, ಅಂಬರೀಷ್, ಪ್ರೇಮ್, ರಕ್ಷಿತಾ, ಅರ್ಜುನ್ ಜನ್ಯ, ನಿರ್ಮಾಪಕ ಮನೋಹರ್ ಸೇರಿ ಅನೇಕರು ಪಾಲ್ಗೊಂಡಿದ್ದರು.

 

 

ನೆನ್ನೆ ಕೇವಲ ಸಮಾರಂಭದಲ್ಲಿ ಮಾತ್ರ ಆಡಿಯೋ ರಿಲೀಸ್ ಆಗಿತ್ತು ಅಲ್ಲದೇ ಈವರೆಗೂ ಯೂಟ್ಯೂಬ್ ನಲ್ಲಿ ಕೇವಲ ನಾಲ್ಕು ಹಾಡುಗಳು ಮಾತ್ರ ಲಭ್ಯವಿತ್ತು ಆದರೆ ಇಂದು ಬೆಳಿಗ್ಗೆ ಚಿತ್ರದ ಸಂಪೂರ್ಣ ಹಾಡುಗಳ ಜ್ಯೂಕ್ ಬಾಕ್ಸ್ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುತ್ತಿವೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಶಿವಣ್ಣನಿಗೆ ನಾಯಕಿಯಾಗಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ,,ಚಿತ್ರಕ್ಕೆ ಸಿ.ಮನೋಹರ್ ಬಂಡವಾಳ ಹಾಕಿದ್ದು ಅರ್ಜುನ್ಯ ಜನ್ಯರವರು ಸಂಗೀತ ಸಂಯೋಜನೆ ಮಾಡಿದ್ದಾರೆ…ಉಳಿದಂತೆ ಗಿರಿಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.  ಉಳಿದಂತೆ ಸೆಪ್ಟೆಂಬರ್ 13ರಂದು ಗೌರಿಗಣೇಶ ಹಬ್ಬದ ಪ್ರಯುಕ್ತ ಚಿತ್ರ ತೆರೆಕಾಣುವ ಸಾಧ್ಯತೆಯಿದೆ ಎನ್ನಲಾಗಿದೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಾಗಿ ತೆರೆ ಹಂಚಿಕೊಂಡಿರುವುದರಿಂದ ಚಿತ್ರದ ಸೌಂಡು ಗಗನ ಮುಟ್ಟುತ್ತಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top