fbpx
ಸಮಾಚಾರ

ವೈರಲ್ ಆಯಿತು ಫೋಟೋಶೂಟ್ ಮಾಡಿಸುವಾಗ ಈ ನಟಿ ಮಾಡಿಕೊಂಡ ಅವಾಂತರ.

ಕೆಲವು ದಿನಗಳ ಹಿಂದೆ ತೂಕದ ಡ್ರೆಸ್​ ತೊಟ್ಟು ಜಿಂಕೆ ಮರಿಯಂತೆ ಐಫಾ ಅವಾರ್ಡ್ ಸಮಾರಂಭದಲ್ಲಿ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿ ಸುದ್ದಿ ಆಗಿದ್ದರು ಬಾಲಿವುಡ್ ​ ನಟಿ ಊರ್ವಶಿ ರೌತೆಲಾ, ಆ ಬಳಿಕ ಇವರ ಬೆಲ್ಲಿ ಡ್ಯಾನ್ಸ್​ ವೈರಲ್ ಆಗಿ ಫೇಮಸ್ ಆಗಿದ್ದರು. ಈಗ ಇದೇ ‘ಹೇಟ್​ ಸ್ಟೋರಿ 4’ ಚಿತ್ರದ ಈ ನಟಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿ ಪೋಸ್ಟ್ ಮಾಡುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ನಟಿ ಊರ್ವಶಿ ಕೂಡ ಫೋಟೋ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದಕ್ಕಾಗಿ ಹೈ ಹಿಲ್ಸ್ ಹಾಕಿಕೊಂಡು ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದ ನಟಿ ಊರ್ವಶಿ ಎಡವಿದ್ದಾಳೆ ಕೂಡಲೇ ಕಂಟ್ರೋಲ್ ಮಾಡಿ ನೆಲಕ್ಕೆ ಬೀಳುವುದರಿಂದ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಡಿಯೋ ನೋಡಿ:

Expectation Vs Reality 😂🙈 (tag ur 5 annoying friends)

A post shared by URVASHI RAUTELA 🇮🇳Actor (@urvashirautela) on

 

ಇದರಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳಬೇಕು ಎಂದು ಆ ಎಡವಿರುವ ವಿಡಿಯೋವನ್ನು ಕೂಡ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಊರ್ವಶಿ ಬೀಳುವುದರಿಂದ ತಪ್ಪಿಸಿಕೊಂಡು ಕೆಲ ಕ್ಷಣ ನಕ್ಕು ಸುಮ್ಮನಾಗಿದ್ದಾರೆ. ಆದರೆ ಬಳಿಕ ಈ ವಿಡಿಯೋವನ್ನು ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದುವರೆಗೂ ಆ ವಿಡಿಯೋ ಸುಮಾರು 18 ಲಕ್ಷಕ್ಕಿಂತ ಅಧಿಕ ವೀವ್ಸ್ ಕಂಡಿದೆ ಎನ್ನಲಾಗಿದೆ. ವಿಡಿಯೋ ಸಖತ್ ವೈರಲ್ ಆಗಿ ಹರಿದಾಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top